ನೀರು ಬಿಡದೆ ಕಂಟ್ರಾಕ್ಟರ್ ಪರ ನಿಂತದ್ದೆ ಕಾಂಗ್ರೆಸ್ ಸೋಲಿಗೆ ಕಾರಣ:ರವೀಂದ್ರ ಶ್ರೀಕಂಠಯ್ಯ
ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ನಾಲೆಯಲ್ಲಿ ನೀರು ಬಿಡದೆ ಒಬ್ಬ ಕಂಟ್ರಾಕ್ಟರ್ ಪರವಾಗಿ ನಿಂತಿದ್ದರಿಂದ ಮಂಡ್ಯದಲ್ಲಿ ಕಾಂಗ್ರೆಸ್ ಸೋಲಲು ಕಾರಣವೆಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು.
ಸುದ್ದಿಗಾರರನ್ನು ಉದ್ದೇಶಿಸಿ ಮಂಡ್ಯದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು.
ಈಗಾಗಲೇ ಸಾಕಷ್ಟು ತಪ್ಪು ಮಾಡಿದ್ದಿರಿ ಈಗಲಾದರೂ ರೈತರಿಗೆ ನೀರು ಬಿಡಿ.ಎರಡು ಕಟ್ಟು ನೀರು ಬಿಡಲು ಅವಕಾಶವಿದೆ.ಕಂಟ್ರಾಕ್ಟರ್ ಅನುಕೂಲಕ್ಕಾಗಿ ನೀರು ಬಿಡದೆ ಮಂಡ್ಯದ ಜನ ನಿಮ್ಮನ್ನು ಸೋಲಿಸಿದ್ದಾರೆ.ಈಗಲಾದರೂ ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದರು