ಬೀದರ್: ಕ್ಷುಲ್ಲಕ ವಿಚಾರಕ್ಕೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣದ ತ್ರಿಪುರಾಂತ ಬಳಿ ನಡೆದಿದೆ.
ಮಾರಕಾಸ್ತ್ರದಿಂದ ಕೊಚ್ಚಿ ಆನಂದ ಫುಲೆ(26) ಬರ್ಬರ ಹತ್ಯೆ ಮಾಡಲಾಗಿದ್ದು, ಹಳೆ ದ್ವೇಷದ ಜಿದ್ದಿನಲ್ಲಿದ್ದ ಯುವಕರ ನಡುವೆ ಪರಸ್ಪರ ಹೊಡೆದಾಟವಾಗಿದ್ದು ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಉದಯ್ ಹಾಗೂ ಆತನ ಗುಂಪು ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ತ್ರಿಪುರಾಂತ ಮುಖ್ಯ ರಸ್ತೆಯಲ್ಲಿ ಆನಂದ ಹಾಗೂ ದಿಗಂಬರ ದಾಸೊರೆ ಎನ್ನುವರಿಬ್ಬರ ನಡುವೆ ಜಗಳವಾಗಿದ್ದು ಅದು ಅತಿರೇಕಕ್ಕೆ ತಿರುಗಿ ಇಬ್ಬರು ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಆನಂದ ಪುಲೆಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರದ ಉಮ್ಮರಗಾ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಬಸವಕಲ್ಯಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ
ಮತ್ತೊಂದು ಘಟನೆಯಲ್ಲಿ ಬೆಂಗಳೂರು ನಗರದ ನಾಯಂಡಹಳ್ಳಿ ಪೆಟ್ರೊಲ್ ಬಂಕ್ ಬಳಿಯ ಮನೆಯಲ್ಲಿಯೊಂದರಲ್ಲಿ ವ್ಯಕ್ತಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಣಕಾಸಿನ ವಿಚಾರಕ್ಕೆ ಮಾರಕಾಸ್ತ್ರಗಳಿಂದ ಲಿಯಾಖತ್ ಅಲಿಖಾನ್ನನ್ನು( 44) ಕೊಚ್ಚಿ ಕೊಲೆಗೈದಿದ್ದಾರೆ. ಸ್ನೇಹಿತರಾದ ವಾಸೀಂ ಮತ್ತು ಜೋಹರ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಲೇಔಟ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.