Saturday, October 10, 2026
spot_img

ಮೇಕೆದಾಟು ಮುಳುಗಡೆ ಅರಣ್ಯಕ್ಕೆ ಮಂಡ್ಯದಲ್ಲಿ ಪರ್ಯಾಯಾ ಭೂಮಿ ನೀಡಲು ವಿರೋಧ

ಮೇಕೆದಾಟು ಯೋಜನೆಯಲ್ಲಿ ಮುಳುಗಡೆ ಆದ ಅರಣ್ಯ ಭೂಮಿಗೆ ಪರ್ಯಾಯವಾಗಿ ನಾಗಮಂಗಲದಲ್ಲಿ ರೈತರು ಉಳುಮೆ ಮಾಡುತ್ತಿರುವ ಸರಕಾರಿ ಭೂಮಿಯನ್ನು ಅರಣ್ಯೀಕರಣಕ್ಕೆ ನೀಡುವ ಕ್ರಮವನ್ನು ವಿರೋಧಿಸುವುದಾಗಿ ನಾಗಮಂಗಲ ಮಾಜೀ ಶಾಸಕ ಸುರೇಶ್ ಗೌಡ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು.ಮೇಕೆ ದಾಟು ಯೋಜನೆಯಿಂದ ಮುಳುಗಡೆ ಯಾಗುವ ಅರಣ್ಯ ಭೂಮಿಗೆ ಎರಡು ಪಟ್ಟು ಸರಕಾರಿ ಭೂಮಿ ನೀಡಿ ಅರಣ್ಯೀಕರಣ ಮಾಡುವ ಸಲುವಾಗಿ ನಾಗಮಂಗಲ ತಾಲೂಕಿನಲ್ಲಿ 1000 ಹೆಕ್ಟರ್ ಭೂಮಿಯನ್ನು ಜಿಲ್ಲಾಡಳಿತ ಗುರುತಿಸಿದ್ದು ಈ ಕ್ರಮವನ್ನು ತಾವು ವಿರೋಧಿಸಿ ಮಾತನಾಡಿ ನಾವು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಲ್ಲ ಆದರೆ ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಮಾತ್ರ ಉಪಯೋಗವಾಗುತ್ತದೆ ಬದಲಾಗಿ ಮಂಡ್ಯದ ಜಿಲ್ಲೆಯ ರೈತರಿಗೆ ಉಪಯೋಗವೇನು ಎಂದು ಪ್ರಶ್ನಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ತಾಲೂಕಿನಲ್ಲಿ ಸರ್ಕಾರಿ ಬೀಳು ಭೂಮಿಯಲ್ಲಿ ರೈತರು ಸಣ್ಣಪುಟ್ಟ ಕೃಷಿ ಭೂಮಿಯನ್ನು ಮಾಡುತ್ತಿದ್ದಾರೆ ಕೆಲವರು ಫಾರಂ 53 .50 ರಲ್ಲಿ ಅರ್ಜಿ ಸಲ್ಲಿಸಿದ್ದು ವ್ಯವಸಾಯ ಮಾಡುತ್ತಿದ್ದಾರೆ ಜಿಲ್ಲಾಡಳಿತ ಯಾವ ಭೂಮಿಯನ್ನು ಗುರುತಿಸಿದೆ ಎಂಬುದು ಗೊತ್ತಿಲ್ಲ.ಆದರೆ ನಾಗಮಂಗಲದಲ್ಲಿ ಒಂದು ಎಕರೆ ಭೂಮಿ ಸಹ ಖಾಲಿ ಉಳಿದಿಲ್ಲ ಬದಲಿಗೆ ಕೃಷಿ ಮಾಡುತ್ತಿದ್ದಾರೆ.

ಒಂದು ವೇಳೆ ನನ್ನ ಕ್ಷೇತ್ರದ ರೈತರಿಗೆ ತೊಂದರೆಯಾದರೆ ಅದನ್ನು ಸಹಿಸಿಕೊಂಡು ಕುಳಿತುಕೊಳ್ಳುವುದಿಲ್ಲ ಅದರ ವಿರುದ್ಧ ಬೀದಿಗಳಿದು ರೈತರ ಜೊತೆ ಹೋರಾಟ ಮಾಡಲಾಗುವುದು ಹಾಗೂ ಕಾನೂನು ಹೋರಾಟವನ್ನು ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

*ಮಂಡ್ಯಜಿಲ್ಲಾಧಿಕಾರಿಗಳು ಭೂಗಳ್ಳರ ಜೊತೆ* ಶಾಮೀಲಾಗಿದ್ದು
ಅಕ್ರಮವಾಗಿ ಖಾತೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ.ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಜಿಲ್ಲಾಧಿಕಾರಿಗಳವರೆಗು ಎಲ್ಲರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಂಥ ಕೆಟ್ಟ ಜಿಲ್ಲಾಧಿಕಾರಿಗಳನ್ನು ಜಿಲ್ಲೆಯ ಜನ ನೋಡಿರಲಿಲ್ಲ.

ಕಾನೂನು ಸುವ್ಯವಸ್ಥೆ ಹಾಗೂ ಕಾನೂನು ಎತ್ತಿ ಹಿಡಿಯಬೇಕಾದ ಅಧಿಕಾರಿಗಳು. ಜನ ಪ್ರತಿನಿಧಿಗಳ ಜೊತೆ ಸೇರಿ ಅಕ್ರಮ ಮಾಡುತ್ತಿದ್ದಾರೆ ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನನ್ನ ಅವಧಿಯಲ್ಲಿ ನಾಗಮಂಗಲದಲ್ಲಿ ದರಖಾಸ್ತು ಕಮಿಟಿಯ ಅಧ್ಯಕ್ಷತೆ ಅವಧಿಯಲ್ಲಿ ಸಾವಿರಾರು ರೈತರಿಗೆ ಭೂಮಿ ಮಂಜೂರು ಮಾಡಲಾಗಿದೆ. ಸರ್ಕಾರ ರೈತ ಪರವಾದ ಕಾರ್ಯಕ್ರಮಗಳನ್ನು ರೂಪಿಸುವ ಬದಲಾಗಿ ರೈತ ವಿರೋಧಿ ನೀತಿಗಳನ್ನು ಮತ್ತು ಎಲ್ಲೇ ಮೀರಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚೆನ್ನಪ್ಪ, ಕೃಷ್ಣ, ಕುಶಾಲ್, ರಾಮಲಿಂಗಯ್ಯ, ಮೇನಕ ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!