ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ.
ಕೆಆರ್‌ಎಸ್ ಡ್ಯಾಂಗೆ ಹರಿದು ಬರುತ್ತಿದೆ 10 ಸಾವಿರ ಕ್ಯೂಸೆಕ್ ನೀರು
ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ.ಗೆ ಒಳ ಹರಿವು ಹೆಚ್ಚಳವಾಗಿದೆ.
*ಇಂದು ಕೆಆರ್‌ಎಸ್‌ಗೆ 13,437 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು
ಈ ವರ್ಷದಲ್ಲಿ ಸದ್ಯ ಇದೇ ಅಧಿಕ ಪ್ರಮಾಣದ ಒಳಹರಿವು.
ನಿನ್ನೆ 3,856 ಕ್ಯೂಸೆಕ್ ಒಳಹರಿವು ಇತ್ತು.
24 ಗಂಟೆಯ ಅವಧಿಯಲ್ಲಿ 10 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದ್ದು.
ಅಲ್ಲದೇ ಒಂದೇ ದಿನದಲ್ಲಿ ಡ್ಯಾಂ ಹರಿದು ಬಂದಿರುವ 1 ಟಿಎಂಸಿಗೂ ಅಧಿಕ ನೀರು ಹರಿದುಬಂದಿದೆ.
49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್‌ನಲ್ಲಿ 16.118 ಟಿಎಂಸಿ ಸಂಗ್ರಹವಾಗಿದೆ
.
124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 90.30 ಅಡಿ ನೀರು ಇದ್ದು
ನದಿಗೆ 478 ಕ್ಯೂಸೆಕ್ ನೀರು ಬಿಡಲಾಗಿದೆ.
ಕಾವೇರಿ ಪಾತ್ರದ ಮತ್ತೊಂದು ನದಿಯಾದ ಕಬಿನಿ ಜಲಾನಯನ ಪ್ರದೇಶವಾದ ಕೇರಳದ ವಯನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಕಬಿನಿ ಜಲಾಶಯಕ್ಕೆ ಹದಿನಾರು ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು
ಮೂಡಿಗೆರೆ ಚಿಕ್ಕಮಗಳೂರು ಪ್ರದೇಶದಲ್ಲಿ ಸಹ ಮಳೆಯಾಗುತ್ತಿದ್ದು ಹೇಮಾವತಿಯು ಕಳೆಗಟ್ಟುತ್ತಿದ್ದು ಒಟ್ಟಾರೆ ಕಾವೇರಿ ಕಣಿವೆಯ ಜಲಾಶಯಗಳ ಒಳ ಹರಿವು ನಲವತ್ತು ಸಾವಿರ ಕ್ಯೂಸೆಕ್ ದಾಟುವ ಸಾಧ್ಯತೆ ಇದೆ.ಇದು ರೈತರಲ್ಲಿ ಮಂದಹಾಸ ಮೂಡಿಸಿದೆ