Friday, September 18, 2026
spot_img

ಸೆ.25 ರಂದು ‘ಕಾಮನ್ ಮ್ಯಾನ್’ ಬಿಡುಗಡೆ

ಕಾಮನ್ ಮ್ಯಾನ್ ನಾನೇ ಸಿಎಂ ಕನ್ನಡ ಸಿನಿಮಾ ಇದೇ ತಿಂಗಳು 25ರಂದು ಬೆಳ್ಳಿ ತೆರೆಗೆ ಬರಲಿದೆ ಎಂದು ನಾಯಕ ನಟ ಗೌರಿಶಂಕರ್ ತಿಳಿಸಿದರು.

ನಗರದ ಪತ್ರಿಕ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಮನ್ ಮ್ಯಾನ್ ನಾನೇ ಸಿಎಂ ಎಂಬ ಶೀರ್ಷಿಕೆ ತುಂಬಾ ಆಕರ್ಷಕವಾಗಿದ್ದು ಜೊತೆಗೆ ಈ ಚಿತ್ರದ ಕಥೆ ಹಂದರ ರಾಜಕೀಯ ವ್ಯವಸ್ಥೆ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಆಧರಿಸಿದ್ದು ಕಾಮನ್ ಮ್ಯಾನ್ ಸಿನಿಮಾ ಈಗಿನ ಸಂದರ್ಭಕ್ಕೆ ಬಹಳ ಪ್ರಸ್ತುತವಾಗಿರುವ ಸಿನಿಮವಾಗಿದೆ ಎಂದರು.

ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಅವರು ನಿರ್ದೇಶನ ಮಾಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಿರ್ಮಾಪಕರಾದ ನರಸಿಂಹಮೂರ್ತಿ ಅವರು ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ನಿರ್ಮಿಸಲು ಸಹಕರಿಸಿ ಕಥೆ ಬರೆದು ಒಂದು ಮುಖ್ಯ ಪಾತ್ರದಲ್ಲೂ ಅಭಿನಯಿಸಿದ್ದಾರೆ ಹೀಗಾಗಿ ಬಹು ನಿರೀಕ್ಷಿತ ಸಿನಿಮಾ ವಾಗಿದ್ದು 4 ಗೀತೆಗಳು 2 ಫೈಟಿಂಗ್ ಸೇರಿ ಒಂದು ರಾಜಕೀಯ ಹಿನ್ನೆಲೆ ಇರುವಂತ ಸಿನಿಮವಾಗಿದೆ. ಈ ಸಿನಿಮಾದಲ್ಲಿ ಹಿರಿಯ ನಟರಾದ ರಮೇಶ್ ಭಟ್, ಅಶೋಕ್, ನಾಗೇಂದ್ರ, ಬಲೆರಾಜ ವಾಡಿ ಇನ್ನು ಹಲವಾರು ನುರಿತ ಕಲಾವಿದರು ಚಿತ್ರಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ ಚಿತ್ರದ ನಾಯಕಿ ನಟಿಯಾದ ಸೋನಾ ಲಡ್ವ, ಸ್ಯಾಬಿ ಸೂರಿ ಪ್ರಮುಖ ಪಾತ್ರದಲ್ಲಿದ್ದಾರೆ ಸಾಹಸ ತ್ರಿಲರ್ ಮಂಜು ಗೌರವ ವೆಂಕಟೇಶ್ ಸಂಗೀತ ವಿನಯ್ ಚಂದ್ರು ಛಾಯಾಗ್ರಹಣ ಜೆಜಿ ಕೃಷ್ಣ ದೀಪ ಕುಮಾರ್ ಸಂಕಲನ ಮುನಿರಾಜು ಇದ್ದಾರೆ ಎಂದು ತಿಳಿಸಿದರು
ನಂತರ ಸಿನಿಮಾದ ನಿರ್ಮಾಪಕರಾದ ನರಸಿಂಹಮೂರ್ತಿ ಮಾತನಾಡಿ ಈ ಸಿನಿಮಾಕ್ಕೆ ನಾನೇ ಕಥೆ ಕತೆ ಬರೆದು ಹಾಗೂ ಈ ಚಿತ್ರದಲ್ಲಿ ಸಿಎಂ ಪಾತ್ರವನ್ನು ಅಭಿನಯಿಸಿದ್ದೇನೆ ಹಣ ಮುಖ್ಯವಲ್ಲ ಆದರೆ ಒಳ್ಳೆಯ ಸಿನಿಮಾಗಳು ಕನ್ನಡಕ್ಕೆ ಬರಬೇಕಾಗಿದೆ ತುಂಬಾ ಒಳ್ಳೆಯ ಸಿನಿಮಾಗಳು ಜನರ ಮೆಚ್ಚುಗೆಗೆ ಪಾತ್ರ ವಾಗುವಂತಹ ಸಿನಿಮಾ ಎಂಬುದರಲ್ಲಿ ಸಂಶಯವಿಲ್ಲ
ರಾಜ್ಯದಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 25ರಂದು ತೆರೆ ಕಾಣಲಿದೆ ರಾಜ್ಯದಲ್ಲಿ ಅತಿ ಹೆಚ್ಚು ಸಿನಿಮಾ ಅಭಿಮಾನಿಗಳು ಇರುವಂತಹ ಜಿಲ್ಲೆ ಅದು ಮಂಡ್ಯ ಸಿನಿಮಾ ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿನಿಮಾ ನೋಡಿ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಹಂಚಿಕೆದಾರರಾದ ಚರಣ್ ಶ್ರೀನಿವಾಸ್ ಗೌಡ ಸಂಗೀತ ನಿರ್ದೇಶಕರಾದ ವಿನೋದ್ ನಾಗೇಶ್ ಕದಂಬ ಸೇನೆಯ ಬೇಕರಿ ರಮೇಶ್ ಭಾಗವಹಿಸಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!