Tuesday, October 13, 2026
spot_img

ಉದ್ಯಾನವನದಲ್ಲಿ ಕಟ್ಟಡ ನಿರ್ಮಾಣ.ಮಿಮ್ಸ್ ಅವ್ಯವಸ್ಥೆ ಖಂಡಿಸಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಮಂಡ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಆವರಣದಲ್ಲಿ ರೋಗಿಗಳು ಮತ್ತು ಸಾರ್ವಜನಿಕರಿಗೆ ಗಾಳಿ, ಬೆಳಕು ಹಾಗೂ ವಿಶ್ರಾಂತಿಗೆ ಪೂರಕವಾಗಿದ್ದ ಉದ್ಯಾನವನವನ್ನು ನಾಶಪಡಿಸಿ, ಅದೇ ಜಾಗದಲ್ಲಿ ಹಿರಿಯ ನಾಗರಿಕರ ಆರೈಕೆ ಕೇಂದ್ರದ ಕಟ್ಟಡ ನಿರ್ಮಾಣ ಮಾಡುತ್ತಿರುವ ಕ್ರಮವನ್ನು ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಮೆಡಿಕಲ್ ಕಾಲೇಜು ಒಟ್ಟು ಭೂಮಿಯಲ್ಲಿ ಶೇ೮೦ ರಷ್ಟು ಪ್ರದೇಶದಲ್ಲಿ ಕಿಷ್ಕಿಂಧವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಒಂದು ಮೆಡಿಕಲ್ ಕಾಲೇಜಿಗೆ ಇರಬೇಕಾದ ಅಗತ್ಯ ಲಂಗ್ ಸ್ಪೇಸ್ ಬಿಡದೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.ಈ ಸಂಬಂದ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಗಮನಕ್ಕು ತರಲಾಗುವುದು.ಸ್ಥಳಾವಕಾಶ ಕೊರತೆಯ ಹೆಸರಿನಲ್ಲಿ ಕಾಂಕ್ರೀಟ್ ಸ್ಲಂ ನಿರ್ಮಿಸುವುದು ಎಷ್ಟು ಸರಿ? ಯಾವುದೆ ಬಡಾವಣೆ ನಿರ್ಮಾಣದಲ್ಲಿ ಶೇ ೪೦ ರಷ್ಟು ನಾಗರೀಕ ಅಗತ್ಯಗಳಾದ ಉದ್ಯಾನವನ ಆಟದ ಮೈದಾನಗಳಿಗೆ ಸ್ಥಳಾವಕಾಶ ನಿಗದಿಗೊಳಿಸುವ ಆಡಳಿತವೇ ತನ್ನದೇ ಕಟ್ಟಡ ನಿರ್ಮಾಣದಲ್ಲಿ ಈ ಎಲ್ಲ ಕಾನೂನುಗಳನ್ನು ಉಲ್ಲಂಘಿಸುವುದು ಯಾವುದೆ ಕಾರಣಕ್ಕು ಒಪ್ಪತಕ್ಕದ್ದಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

 

ಆಸ್ಪತ್ರೆ ಆವರಣದಲ್ಲಿರುವ ಈ ತೆರೆದ ಉದ್ಯಾನವನವು ಕಟ್ಟಡಗಳಿಗೆ ನೈಸರ್ಗಿಕ ಗಾಳಿ ಮತ್ತು ಬೆಳಕು ಸಿಗಲು ಸಹಕಾರಿಯಾಗಿದ್ದು. ಅಲ್ಲಿ ಹೊಸ ಕಟ್ಟಡ ನಿರ್ಮಿಸಿದರೆ ಸುತ್ತಲಿನ ವಾರ್ಡ್‌ಗಳಿಗೆ ಗಾಳಿ ಬೆಳಕು ಕಡಿಮೆಯಾಗಿ ರೋಗಿಗಳಿಗೆ ಮತ್ತು ಅವರ ಸಹಾಯಕರಿಗೆ ತೊಂದರೆಯಾಗಲಿದೆ.
ರೋಗಿಗಳು ಮತ್ತು ಅವರ ಕುಟುಂಬದವರು ವಿಶ್ರಾಂತಿ ಪಡೆಯುತ್ತಿದ್ದ ಹಸಿರು ಸ್ಥಳ ಇಲ್ಲವಾಗುತ್ತಿದೆ. ಆಸ್ಪತ್ರೆ ಆವರಣದಲ್ಲಿ ಹಸಿರು ಹಾಗೂ ತೆರೆದ ಜಾಗ ಉಳಿಸಿಕೊಳ್ಳುವುದು ರೋಗಿಗಳ ಆರೋಗ್ಯ ಮತ್ತು ಚೇತರಿಕೆಗೆ ಅಗತ್ಯ.

ಈ ಹಿಂದೆ ಈ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆದಾಗ ಅಧಿಕಾರಿಗಳು ಮೌನ ವಹಿಸಿದ್ದರು. ಈಗ ಯಾವುದೇ ಸೂಚನೆ ಅಥವಾ ಸಾರ್ವಜನಿಕ ಸಮಾಲೋಚನೆ ಇಲ್ಲದೆ ದಿಢೀರನೆ ಕಾಮಗಾರಿ ಆರಂಭಿಸಿರುವುದು ಸರಿಯಲ್ಲ.
ಹಿರಿಯ ನಾಗರಿಕರ ಆರೈಕೆ ಕೇಂದ್ರ ಸ್ವಾಗತಾರ್ಹ ಯೋಜನೆಯೇ ಆಗಿದೆ. ಆದರೆ ಅದನ್ನು ಉದ್ಯಾನವನ ನಾಶಪಡಿಸದೆ ಒತ್ತುವರಿಯಾಗಿರುವ ಮೆಡಿಕಲ್ ಕಾಲೇಜಿನ ೧೪ ಎಕರೆ ಒತ್ತುವರಿ ತೆರವುಗೊಳಿಸಿ ಅಲ್ಲಿ ಕಟ್ಟಡ ನಿರ್ಮಿಸಬೇಕು.

ಉದ್ಯಾನವನದ ಜಾಗದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು.

ನಾಶವಾಗಿರುವ ಉದ್ಯಾನವನವನ್ನು ಪುನಃ ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕು.
ತಾವು ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳದಿದ್ದಲ್ಲಿ, ರೋಗಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಿನ ಹೋರಾಟ ಹಾಗೂ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.

ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯ ನಿರತ ವೈದ್ಯರು‌ ಹಾಜರಿರುವುದಿಲ್ಲ.ಕಲಿಕಾ ವಿದ್ಯಾರ್ಥಿಗಳೇ ಎಲ್ಲವನ್ನು ನಿಭಾಯಿಸುವುದಾದರೆ ವೈದ್ಯರಿಗೆ ವೇತನ ನೀಡುವ ಅವಶ್ಯವಿಲ್ಲ.ತುರ್ತುಚಿಕಿತ್ಸಾ ಘಟಕದಲ್ಲಿ ಒಪಿಡಿ ಚೀಟಿ ನೀಡುವುದು.ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಆಸ್ಪತ್ರೆಯ ಸಿಬ್ಬಂದಿ ಮೂಲಕವೇ ಮಾಡಿಸಬೇಕು.ಇದಕ್ಕಾಗಿ ರೋಗಿಗಳ ಸಹಾಯಕರನ್ನು ಅಲೆದಾಡಿಸಬಾರದು.ಪಾರ್ಕಿಂಗ್ ಶುಲ್ಕ ಸಂಗ್ರಹಿಸಬಾರದು.ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸೇರಿದಂತೆ ಹೃದ್ರೋಗ ಚಿಕಿತ್ಸೆಗಳಿಗೆ ಅಗತ್ಯ ತಜ್ಞರನ್ನು ನೇಮಕಗೊಳಿಸಬೇಕು.

ಕೆಲಸದಿಂದ ವಿನಾಕಾರಣ ಕಿತ್ತು ಹಾಕಿರುವ ಹೊರಗುತ್ತಿಗೆ ನೌಕರರನ್ನು ಮರು ನೇಮಕಾತಿಗೊಳಿಸುವಂತೆ ಒತ್ತಾಯಿಸಿದರು.

ಈ ಸಂಬಂದ ಅಗತ್ಯ‌ಕ್ರಮ ಕೈಗೊಂಡು ಮುಂದಿನ ವಾರದೊಳಗೆ ಸಮಸ್ಯೆಗಳ ಇತ್ಯರ್ಥಕ್ಕೆ ಜನ ಸಂಪರ್ಕ ಸಭೆ ನಡೆಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶಿವಕುಮಾರ್. ಉದ್ಯಾನವನದಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ಅಗತ್ಯ ಸೂಚನೆ ನೀಡುವುದಾಗಿ ಹೊರಗುತ್ತಿಗೆ ನೌಕರರನ್ನು ಮರು ನೇಮಕಗೊಳಿಸಿ ಜನಸಂಪರ್ಕ ಸಭೆ ನಡೆಸುವುದಾಗಿ ಭರವಸೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ. ಅಮರ್.ಆಟೋ ಘಟಕದ ವೆಂಕಟೇಶ್ ಗೋವಿಂದರಾಜ್. ಸೋಮಶೇಖರ. ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ.ಕುಮಾರ್ ಕನ್ನಡಿಗ.ಕರ್ತವ್ಯ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಎ.ಸಿ ಉಮಾ ಶಂಕರ.ಎಂ.ವೀರಪ್ಪ.ಚೇತನ್ .ರಕ್ಷಿತ್ ಕಡಿಲುವಾಗಿಲು.ಸ್ವಂತಮನೆ ನಮ್ಮ ಹಕ್ಕು ಸಂಘಟನೆಯ ಬಿ.ಕೆ ಸತೀಶ್.ಸುನೀಲ್.ಶೋಷಿತರ ಒಕ್ಕೂಟದ ರಾಜೇಂದ್ರ ಸಿಂಗ್ ಬಾಬು.ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!