Friday, September 18, 2026
spot_img

ಕೃಷಿ ಸಚಿವರ ವಿರುದ್ದ ಸೆ ೨೧ ರಂದು ಮಳವಳ್ಳಿಯಲ್ಲಿ ಎನ್ ಡಿ ಎ ಪ್ರತಿಭಟನೆ

ಮಳವಳ್ಳಿಯಲ್ಲಿ ನಡೆಯುತ್ತಿರುವ ಭೂಕಬಳಿಕೆ ಭ್ರಷ್ಟಾಚಾರ ಹಾಗೂ ರೈತರ ಸಮಸ್ಯೆಗಳಿಗೆ ಕೃಷಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಕಾರಣ ಎಂದು ಮಳವಳ್ಳಿ ಮಾಜಿ ಶಾಸಕ ಡಾ. ಅನ್ನದಾನಿ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಳವಳ್ಳಿ ಬ್ರಹ್ಮಾಂಡ ಭೂಕಬಳಿಕೆ ನಡೆದಿದ್ದು ಈ ಕಬಳಿಕೆಗೆ ಕೃಷಿ ಸಚಿವ ಪಿಎಂ ನರೇಂದ್ರಸ್ವಾಮಿ ಕೊಡುಗೆ ನೀಡಿದ್ದಾರೆ. ಬೆಂಡರವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗೋಮಾಳಕ್ಕೆ ಮೀಸಲಿದ್ದ 74 ಎಕರೆ ಭೂಮಿಯನ್ನು ಕಾನೂನು ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿದ್ದಾರೆ.
ಪುರಸಭೆಯಲ್ಲಿ ಜನ ಪ್ರತಿನಿಧಿಗಳು ಇಲ್ಲದ ಕಾರಣ ಅಕ್ರಮವಾಗಿ ಖಾತೆ ಮಾಡುತ್ತಿದ್ದು ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿ ಸಾಬೀತಾಗಿದ್ದರು ಸಹ ಇದುವರೆಗೂ ಅವರನ್ನು ಅಮಾನತು ಮಾಡಿಲ್ಲ.

ಮಳವಳ್ಳಿಯಲ್ಲಿ 800 ಎಕರೆ ಭೂಕಬಳಿಕೆ 305 ಎಕರೆಗೆ ಸಂಬಂದಿಸಿದ ಆರ್. ಟಿ .ಸಿ ಗಳು ರದ್ದಾಗಿದ್ದರೂ ಈವರೆಗೂ ಸರ್ಕಾರ ತನ್ನ ವಶಕ್ಕೆ ಪಡೆದಿಲ್ಲ.

ಇಷ್ಟೆಲ್ಲ ಭ್ರಷ್ಟಾಚಾರ ನಡೆದಿದ್ದರೂ ಜಿಲ್ಲಾಧಿಕಾರಿಗಳು ಪರೋಕ್ಷವಾಗಿ ಭ್ರಷ್ಟರ ಪರವಾಗಿ ನಿಂತಿದ್ದಾರೆ ಅಧಿಕಾರಿಗಳು ಜನಪ್ರತಿನಿಧಿಗಳು ಒಟ್ಟಾರೆಯಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.

ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ 105 ಅಡಿ ನೀರು ಇದ್ದು ಇದುವರೆಗೂ ಮಳವಳ್ಳಿಯ ಒಂದು ಕೆರೆಗೂ ನೀರು ತುಂಬಿಸುವ ಪ್ರಯತ್ನ ಮಾಡಿಲ್ಲ. ಕೆರೆಗಳೆಲ್ಲ ಒಣಗಿ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಸಮಸ್ಯೆಗಳು ಉಂಟಾಗಿದೆ.

ಅಭಿವೃದ್ಧಿ ಎಂದು ಹೇಳುವ ಪಿ.ನರೇಂದ್ರಸ್ವಾಮಿಯವರು ಸುಳ್ಳು ಆಶ್ವಾಸನೆ ನೀಡುತ್ತಾ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಸಹಕಾರ ಸಂಘದ ಚುನಾವಣೆ ಹಲವು ವರ್ಷಗಳಿಂದಲೂ ನಡೆದಿಲ್ಲ ಹಾಗೂ ಟಿಎಪಿಸಿಎಂಎಸ್ ನಲ್ಲಿಯೂ 64 ಲಕ್ಷ ಅವ್ಯವಹಾರ ನಡೆದಿದೆ ಎಂದು ತೆರಿಗೆ ಲೆಕ್ಕ ಪರಿಶೋಧಕರು ವರದಿ ನೀಡಿದ್ದಾರೆ.

ಅವ್ಯವಹಾರದಲ್ಲಿ ಭಾಗಿಯಾದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಈ ಎಲ್ಲ ಭ್ರಷ್ಟಚಾರ ಭೂಕಬಳಿಕೆ ವಿರುದ್ದ ಮಳವಳ್ಳಿ ಟಿ ಎಪಿಸಿಎಂಎಸ್ ಎದುರು ಇದೇ 21 ರಂದು ಎನ್ ಡಿ ಎ. ಬಿಜೆಪಿ ಜಾತ್ಯತೀತ ಜನತಾದಳ ಸೇರಿದಂತೆ ರೈತರು ಒಳಗೊಂಡಂತೆ ಧರಣಿ ಸತ್ಯಾಗ್ರಹ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹನುಮಂತು, ಶ್ರೀಧರ್ ಚಿಕ್ಕಪೂದಿ, ಸಿದ್ದ ಚಾರಿ, ಜಯರಾಮ್, ಶಂಕರ್ ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!