Sunday, October 18, 2026
spot_img

ಕೃಷ್ಣರಾಜ ಪೇಟೆ:ಮಾಜಿ ಜಿಪಂ ಸದಸ್ಯ‌ಡಾ ಕೃಷ್ಣಮೂರ್ತಿ ನಿಧನ

*ಖ್ಯಾತ ವೈದ್ಯ,ಜಿ.ಪಂ. ಮಾಜಿ ಸದಸ್ಯ ಡಾ. ಕೃಷ್ಣಮೂರ್ತಿ (80) ನಿಧನ*

ಕೆ.ಆರ್.ಪೇಟೆ:ಮಂಡ್ಯ ಮೂಲದವರಾಗಿದ್ದರೂ ಕೆ.ಆರ್.ಪೇಟೆ ತಾಲ್ಲೂಕಿನ ಪ್ರತಿ ಮನೆಯ ಮಗನಾಗಿದ್ದ ಖ್ಯಾತ ವೈದ್ಯ ಹಾಗೂ ಹಿರಿಕಳಲೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಡಾ. ಕೃಷ್ಣಮೂರ್ತಿ (80) ಅವರು ವಯೋಸಹಜ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ.

ಸುಮಾರು 35 ವರ್ಷಗಳ ಕಾಲ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರ್ಕಾರಿ ವೈದ್ಯರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ನಂತರ ಹಿರಿಕಳಲೆ ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು. ಇಳಿವಯಸ್ಸಿನಲ್ಲೂ ವೈದ್ಯ ವೃತ್ತಿಯನ್ನು ಮುಂದುವರಿಸಿ, ತಮ್ಮ ಖಾಸಗಿ ಆಸ್ಪತ್ರೆ ಮೂಲಕ ಬಡ ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದರು.ಮೃತರು ಪುತ್ರರಾದ ಡಾ. ಪ್ರಯಾಗ್ ರಾಜ್, ಡಾ. ಪ್ರೊ. ನಿರೀಕ್ಷಣ್, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೃತದೇಹವನ್ನು ಇಂದು ಬೆಳಿಗ್ಗೆ 10 ಗಂಟೆಯವರೆಗೆ ಕೆ.ಆರ್.ಪೇಟೆ ತಾಲ್ಲೂಕು ಆಸ್ಪತ್ರೆಯ ಹಿಂಭಾಗ ಇರುವ ಅವರ ನಿವಾಸದಲ್ಲಿ ಇರಿಸಲಾಗಿದೇ.ನಂತರ ಮಂಡ್ಯದಲ್ಲಿರುವ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪುರಸಭೆ ಮಾಜಿ ಸದಸ್ಯ‌ ಲೋಕೇಶ್ ರವರು ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಬರಲಿ ಎಂದು ಸಂತಾಪ ವ್ಯಕ್ತಪಡಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!