Sunday, March 1, 2026
spot_img

ಪಶುಸಂಗೋಪನೆ ಇಲಾಖೆ ಹೊರಗುತ್ತಿಗೆ ಟೆಂಡರ್ ಹಗರಣ:ಸದನದಲ್ಲಿ ಚರ್ಚಿಸಲು ವಿಪಕ್ಷ ನಾಯಕರಿಗೆ ಮನವಿ

 

ಪಶು ಸಂಗೋಪನಾ ಇಲಾಖೆ ಟೆಂಡರ್ ಹಗರಣ:ಸದನದಲ್ಲಿ ಚರ್ಚಿಸಲು ಮನವಿ

ಪಶುಸಂಗೋಪನೆ ಇಲಾಖೆಯು ರಾಜ್ಯದ ಪಶು ಚಿಕಿತ್ಸಾಲಯಗಳಿಗೆ ಎರಡುವರೆ ಸಾವಿರ ಡಿ ಗ್ರೂಪ್ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ಒದಗಿಸುವ ಟೆಂಡರ್ ನಲ್ಲಿ ನಡೆದಿರುವ ಹಗರಣದ ಕುರಿತು ಬಜೆಟ್ ಅಧಿವೇಶನದಲ್ಲಿ ಚರ್ಚಿಸುವಂತೆ ವಿಪಕ್ಷ ನಾಯಕ ಆರ್ ಅಶೋಕ್ ಗೆ ಕರುನಾಡ ಸೇವಕರು ಸಂಘಟನೆ ಮನವಿ ಸಲ್ಲಿಸಿತು.

ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮನವಿ ಸಲ್ಲಿಸಿ

ರಾಜ್ಯದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ೧೫೦೦ ಹಾಗೂ ೭೫೬ ಹುದ್ದೆಗಳ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆದಿರುವುದು ಸರಿಯಷ್ಟೆ.

ಈ ಸಂಬಂದ ೫/೦೧/೨೦೧೬ ರಂದು ಹೊರಗುತ್ತಿಗೆ ಆಧಾರದಲ್ಲಿ ಸೇವೆ ಒದಗಿಸಲು ಕ್ರಮವಾಗಿ ೧.ಮೇ// ಆಬ್ಜೆಕ್ಟ್ ಟೆಕ್ನಾಲಜೀಸ್. ಬೆಂಗಳೂರು
೨.ಮೇ//ಮಾತಾ ಟೆಕ್ನಾಲಜೀಸ್‌. ಧಾರವಾಡ ಎಂಬ ಎರಡು ಏಜೆನ್ಸಿಗಳಿಗೆ ಸೇವೆ ಒದಗಿಸಲು ಶೇ ೧೧.೫ರ ದರದಲ್ಲಿ ಸೇವಾ ಶುಲ್ಕ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ.

ಈ ಎರಡು ಏಜೆನ್ಸಿಗಳ ಮೂಲ ಮಾಲೀಕರು ಒಂದೇ ಹಿನ್ನೆಲೆಯವರು ಎನ್ನಲಾಗಿದೆ.ಹೊರಗುತ್ತಿಗೆ ಸೇವೆ ಪಡೆಯುವ ಸಂಬಂದ ಸರ್ಕಾರದ ಕಾರ್ಯದರ್ಶಿಗಳು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಇವರು ಆಯುಕ್ತರು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಬರೆದಿರುವ ಪತ್ರ ಸಂಖ್ಯೆ :ಪಸಂಮೀ ೨೫೫ ಪ ಅ ಸೇ ೨೦೧೫.ರ ಕ್ರಮ ಸಂಖ್ಯೆಯಲ್ಲಿ ಸ್ಪಷ್ಟವಾಗಿ ನೀಡಿರುವ ನಿರ್ದೇಶನದಲ್ಲಿ ಈ ರೀತಿ ಹೇಳಿರುತ್ತಾರೆ.

ಕರ್ನಾಟಕ ಪಾರದರ್ಶಕ ನಿಯಮ೧೯೯೯ ಮತ್ತು ೨೦೦೦ ರಂತೆ ನಿಯಮಾನುಸಾರ ಸೂಕ್ತವಾದ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಟೆಂಡರ್ ಕರೆದು ಸರ್ಕಾರದಿಂದ ಮುಂದಿನ ನೇರನೇಮಕಾತಿ ಆಗುವವರೆಗೆ ಟೆಂಡರ್ ನ್ನು ನೀಡುವುದು ಎಂದು ನಿರ್ದೇಶನ ನೀಡಿರುತ್ತಾರೆ.ನೇರ ನೇಮಕಾತಿ ನಡೆಸುವುದು ಸರಕಾರದ ವ್ಯಾಪ್ತಿಗೆ ಒಳಪಟ್ಟ ವಿಷಯವಾಗಿದ್ದು.ಮುಂದಿನ ನೇರ ನೇಮಕಾತಿವರೆಗೆ ಟೆಂಡರ್ ನೀಡುವುದು ಎಂದರೆ ವರ್ಷಗಟ್ಟಲೆ ಯಾವುದೆ ಟೆಂಡರ್ ನಡೆಸದೆ ಎರಡು ಏಜೆನ್ಸಿಗಳನ್ನು ನಿರಂತರವಾಗಿ ಮುಂದುವರಿಸಿ ಎಂದು ಅರ್ಥವಲ್ಲ.ಬದಲಿಗೆ ಮುಂದಿನ ನೇರನೇಮಕಾತಿವರೆಗೆ ಹೊರಗುತ್ತಿಗೆ ಮೂಲಕ ಮಾನವ ಸಂಪನ್ಮೂಲ ಪಡೆಯಿರಿ ಎಂದಾಗಿರುತ್ತದೆ.

ಸರಕಾರ ತನ್ನ ಆದೇಶದಲ್ಲಿ ಸ್ಪಷ್ಟ ನಿರ್ದೇಶನ ನೀಡಿದ್ದರು ಆದೇಶವನ್ನು ತಿರುಚಿ ಮುಂದಿನ ನೇರ ನೇಮಕಾತಿವರೆಗೆ ಈ ಮೇಲ್ಕಂಡ ಏಜೆನ್ಸಿಗಳಿಗೆ ಟೆಂಡರ್ ಮುಂದುವರಿಸಲಾಗಿದೆ.

ಕೆಟಿಪಿಪಿ ನಿಯಮದ ಪ್ರಕಾರ ಪ್ರತಿ ಮಾರ್ಚ್ ನಲ್ಲಿ ಟೆಂಡರ್ ನಡೆಸಬೇಕಿರುತ್ತದೆ.ಆದರೆ ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿ ಕಳೆದ ಏಳು ವರ್ಷಗಳಿಂದ ಯಾವುದೆ ಟೆಂಡರ್ ನಡೆಸದೆ ಮೆಲ್ಕಂಡ ಏಜೆನ್ಸಿಗಳಿಗೆ ಟೆಂಡರ್ ಮುಂದುವರಿಸಲಾಗಿದೆ.

ಇದಲ್ಲದೆ ಶೇ ೫ರ ಸೇವಾ ಶುಲ್ಕದ ಒಳಗೆ ಹೊರಗುತ್ತಿಗೆ ಸೇವೆ ಒದಗಿಸುವ ಸಾಕಷ್ಟು ಹೊರಗುತ್ತಿಗೆ ಏಜೆನ್ಸಿಗಳು ಲಭ್ಯವಿದ್ದರು ಈ ಕುರಿತು ಕ್ರಮವಹಿಸದೆ ಸರಕಾರದ ನಿರ್ದೇಶನಗಳನ್ನು ತಿರುಚಿ ಸದರಿ ಏಜೆನ್ಸಿಗಳಿಗೆ ಶೇ೧೧.೫ರ ದುಬಾರಿ ಸೇವಾ ಶುಲ್ಕ ನೀಡುತ್ತಾ ಬರಲಾಗಿದೆ.ಇದರಿಂದ ರಾಜ್ಯ ಸರಕಾರಕ್ಕೆ ಸರಿ ಸುಮಾರು ₹೧೫ ಕೋಟಿ ನಷ್ಟವುಂಟು ಮಾಡಲಾಗಿದೆ.

ಇದು ಪಶು ಸಂಗೋಪನೆ ಇಲಾಖೆಯಲ್ಲಿ ಕಳೆದ ಎಂಟು ವರ್ಷಗಳಿಂದ ಅಧಿಕಾರ ನಡೆಸಿದ ಎಲ್ಲ ಅಧಿಕಾರಿಗಳು ಮತ್ತು ಗುತ್ತಿಗೆ ಏಜೆನ್ಸಿ ಭಾಗೀಯಾಗಿ ನಡೆಸಿರುವ ಹಗರಣವಾಗಿದ್ಚು.ಈ ಸಂಬಂದ ನಿಯಮಾನುಸಾರ ಕ್ರಮ ಜರುಗಿಸಿ ತಪ್ಪಿತಸ್ಥ ಅಧಿಕಾರಿಗಳಿಂದ ಸರಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡುವಂತೆ ಹಾಗೂ ಈ ಹಗರಣಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಇಲಾಖಾ ತನಿಖೆಗೆ ಆದೇಶಿಸಲು ಈ ಸಾರಿಯ ಬಜೆಟ್‌ನಲ್ಲಿ ಈ ಕುರಿತು ಚರ್ಚಿಸುವಂತೆ ಮನವಿಯಲ್ಲಿ ಕೋರಲಾಗಿದೆ.

ಮನವಿ ಸ್ವೀಕರಿಸಿದ ವಿಪಕ್ಷ ನಾಯಕ ಆರ್ ಅಶೋಕ್ ಸದನದಲ್ಲಿ ಹಗರಣದ ಕುರಿತು ಚರ್ಚಿಸುವ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಕರುನಾಡ ಸೇವಕರು ಸಂಘಟನೆಯ ರಾಜೇಂದ್ರ ಬಾಬು.ಎಸ್ ಕೆ ರಾಜೂಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!