ಬಾಯ್ಲರ್ ನಲ್ಲಿ ಕಾರ್ಮಿಕ ಸಾವು:ಮೈಶುಗರ್ ವಿರುದ್ದ ಪ್ರಕರಣ ದಾಖಲು
ಮಂಡ್ಯ:ಸೆ.೧೧.ಮೈಶುಗರ್ ಕಾರ್ಖಾನೆಯ ಬಾಯ್ಲರ್ ನಲ್ಲಿ ಹೊರಗುತ್ತಿಗೆ ಕಾರ್ಮಿಕ ಚರಣ್ ಮೃತಪಟ್ಟ ಸಂಬಂದ ಮೈಶುಗರ್ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಕಾರ್ಖಾನೆಯನ್ನು ನಡೆಸಿ ನಿರ್ವಹಿಸಲು ಗುತ್ತಿಗೆ ಹಿಡಿದಿರುವ ಶ್ರೇಯಾ ಏಜೆನ್ಸಿ ವಿರುದ್ದ ಇಲ್ಲಿನ ಸೆಂಟ್ರಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಚರಣ್ ಪತ್ನಿ ಪಲ್ಲವಿ ನೀಡಿರುವ ದೂರಿನಂತೆ ಭಾರತೀಯ ನ್ಯಾಯ ಸಂಹಿತೆ 106(1) (3)5 2023 ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ ಗಂಡ ಚರಣ್ ಕುಮಾರ್ ಎಸ್.ಹೆಚ್. ಆಗಿದ್ದು , ನಮಗೆ
ಇಬ್ಬರು ಮಕ್ಕಳಿರು ತ್ತಾರೆ. 1ನೇ ಪನ್ವಿತ್ ಸಿ.ಗೌಡ, 2ನೇ ದನ್ವಿತಾ ಸಿ. ಗೌಡ ಆಗಿರುತ್ತಾರೆ. ನನ್ನ ಗಂ ಡ ಚರಣ್ ಕುಮಾರ್ ಈಗ್ಗೆ 1 1/2
ವರ್ಷ ದಿಂ ದ ಟೈಮ್ ಆಫೀ ಸ್ ನಲ್ಲಿ ಸೂ ಪರ್ವೈ ಸರ್ ಆಗಿ ಕೆಲಸ ಮಾಡಿಕೊಂ ಡಿದ್ದರು. ಎಂ ದಿನಂ ತೆ ದಿನಾಂ ಕ: 06.09.2026 ರಂದು ಬೆಳಿಗ್ಗೆ
ಪಾಳಿಗೆ ಹೋ ಗಲು ಬೆಳಗಿನ ಜಾವ ಸು ಮಾರು 5.30 ಗಂ ಟೆಗೆ ಮನೆಯಿಂ ದ ಕೆಲಸಕ್ಕೆ ಮೈಷುಗರ್ ಫ್ಯಾಕ್ಟರಿಗೆ ಹೋ ಗಿದ್ದರು. ಬೆಳಿಗ್ಗೆ
ಸು ಮಾರು 7.45 ಗಂ ಟೆಯ ಸಮಯದಲ್ಲಿ ಫ್ಯಾಕ್ಟರಿಯಿಂ ದ ಯಾರೋ ನನಗೆ ಫೋ ನ್ ಮಾಡಿ ನಿಮ್ಮ ಗಂ ಡ ಮೈಷುಗರ್ ಫ್ಯಾಕ್ಟರಿಯ
ವೇ ಸ್ಟೇ ಜ್ ನೀ ರು ಹೋ ಗುವ ಬಾಯ್ಲರ್ಗೆ ಬಿದ್ದು ಸು ಟ್ಟಗಾಟ್ಟ ಯಗಳಾಗಿದ್ದು ಅವರನ್ನು ಫ್ಯಾಕ್ಟರಿಯವರು ಮಂ ಡ್ಯ ಜಿಲ್ಲಾ ಆಸ್ಪತ್ರೆಗೆ
ಕರೆದು ಕೊಂ ಡು ಹೋ ಗಿದ್ದಾರೆ ಎಂ ದು ತಿಳಿಸಿದರು. ನಂ ತರ ಸ್ವಲ್ಪ ಸಮಯದ ನಂ ತರ ಮತ್ತೆ ನನಗೆ ಫ್ಯಾಕ್ಟರಿಯವರು ನನಗೆ ಫೋ ನ್
ಮಾಡಿ ಹೆಚ್ಚಿನ ಚಿಕಿತ್ಸೆಗೆ ನಿಮ್ಮ ಗಂ ಡನನ್ನು ಕೆ.ಆರ್. ಆಸ್ಪತ್ರೆಗೆ ಕರೆದು ಕೊಂ ಡು ಹೋಗುತ್ತಿರುವುದಾಗಿ ತಿಳಿಸಿದ್ದು , ನಾನು ಮೈಸೂ ರಿನ
ಕೆ.ಆರ್. ಆಸ್ಪತ್ರೆಗೆ ಹೋ ಗಿ ನೋಡಲಾಗಿ ನನ್ನ ಗಂಡ ಚರಣ್ಕು ಮಾರ್ರವರಿಗೆ ಕತ್ತಿನ ಕೆಳಭಾಗಕ್ಕಾದಂತೆ ಪೂತರ್ಿ ಮೈಕೈ ಗೆ ಹಾಗೂ
ದೇ ಹದ ಇತರೆ ಕಡೆಗಳಲ್ಲಿ ಸುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದರು. ನನ್ನ ಗಂಡನನ್ನು ಘಟನೆ ಹೇ ಗಾಯಿತು ಎಂದು ವಿಚಾರ
ಮಾಡಿದಾಗ, ಬೆಳಿಗ್ಗೆ ಸು ಮಾರು 6.00 ಗಂ ಟೆಗೆ ಫ್ಯಾಕ್ಟರಿಗೆ ಕೆಲಸಕ್ಕೆ ಬಂದು ಅಟೆಂ ಡೆನ್ಸ್ ಹಾಕಿ ನಂ ತರ ಬೆಳಿಗ್ಗೆ ಸು ಮಾರು 7.00 ಗಂ ಟೆಯ
ಸಮಯದಲ್ಲಿ ಫ್ಯಾಕ್ಟರಿಯಲ್ಲಿನ ಕೆಲಸಗಾರರನ್ನು ಚೆಕ್ ಮಾಡಲು ಬಾಯ್ಲಿಂ ಗ್ ಹೌಸ್ಗೆ ಹೋ ಗಿದ್ದು , ಅಲ್ಲಿ ಬಾಯ್ಲಿಂ ಗ್ ಹೌಸ್ ಚೇಂ ಬರ್ನ
ಮೇ ಲೆ ನಡೆದು ಕೊಂ ಡು ಬರು ತ್ತಿದ್ದಾಗ ಚೇಂ ಬರ್ಗೆ ಹಾಕಿದ್ದ ಸ್ಲಾಬ್ ಚೇಂ ಬರ್ ಒಳಕ್ಕಾದಂ ತೆ ಜಾರಿಕೊಂ ಡು ನಾನು ಬಿಸಿನೀ ರಿನ
ಬಾಯ್ಲರ್ ಒಳಗೆ ಬಿದ್ದು ಬಿಟ್ಟೆನು . ಆಗ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರುಗಳು ನನ್ನನ್ನು ಬಿಸಿನೀ ರಿನ ಬಾಯ್ಲರ್ನಿಂ ದ ಎತ್ತಿ
ಉಪಚರಿಸಿ, ನನ್ನನ್ನು ಮಂ ಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದು ಕೊಂಡು ಬಂದು ಚಿಕಿತ್ಸೆಗೆ ಸೇ ರಿಸಿದ್ದು , ನಂ ತರ ಹೆಚ್ಚಿನ ಚಿಕಿತ್ಸೆಗೆ ಮೈಸೂ ರಿನ
ಕೆ.ಆರ್. ಆಸ್ಪತ್ರೆಗೆ ಕರೆದು ಕೊಂ ಡು ಬಂ ದರು ಎಂ ದು ತಿಳಿಸಿದರು. ನಾನು ನನ್ನ ಗಂ ಡನಿಗೆ ಮೈಸೂ ರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ
ಕೊಡಿಸು ತ್ತಿದ್ದು ದಿನಾಂಕ: 08.09.2026 ರಂದು ಸಂ ಜೆ ಸು ಮಾರು 5.00 ಗಂ ಟೆಯಲ್ಲಿ ನನ್ನ ಗಂ ಡ ಚಿಕಿತ್ಸೆ ಫಲಕಾರಿಯಾಗದೇ
ಮೃ ತಪಟ್ಟಿರು ತ್ತಾರೆ. ನನ್ನ ಗಂ ಡ ಚರಣ್ಕು ಮಾರ್ರವರ ಶವವು ಹಾಲಿ ಮೈಸೂ ರು ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ. ಮೈಷುಗರ್
ಕಾಖರ್ಾ ನೆಯ ಬಾಯ್ಲರ್ ಹೌಸ್ನಲ್ಲಿನ ಬಿಸಿ ನೀ ರಿನ ಬಾಯ್ಲರ್ಗೆ ಯಾರಾದರು ಬಿದ್ದರೆ ಅವರಿಗೆ ಪ್ರಾಣಹಾನಿಯಾಗುವ ಸಂ ಭವವಿದೆ
ಎಂದು ತಿಳಿದಿದ್ದರೂ ಸಹ ಮೈಷುಗರ್ ಕಂ ಪನಿಯ ಅಧ್ಯಕ್ಷರು , ವ್ಯವಸ್ಥಾಪಕರು ಆಡಳಿತ ಮಂ ಡಳಿ ಮತ್ತು ಶ್ರೇ ಯಾ ಮ್ಯಾನ್ ಪವರ್
ಕನ್ಸಲ್ಟಿಂ ಗ್ರ ವರ ಯಾವುದೇ ಮುಂ ಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳದೇ ನನ್ನ ಗಂ ಡ ಚರಣ್ಕು ಮಾರ್ರವರ ಸಾವಿಗೆ ಕಾರಣವಾಗಿದ್ದು ,
ಅವರು ಗಳ ವಿರು ದ್ದ ಕಾನೂ ನು ರೀ ತ್ಯಾ ಕ್ರಮ ಜರುಗಿಸಬೇ ಕೆಂ ದು ತಮ್ಮಲ್ಲಿ ಕೋರಿದ್ದಾರೆ.
ಪೋಲಿಸರ ಪಾತ್ರ:ದೂರಿನಲ್ಲಿ ಸ್ಪಷ್ಟವಾಗಿ ಮೈಶುಗರ್ ಎಂಡಿ ಹಾಗೂ ಅಧ್ಯಕ್ಷರ ವಿರುದ್ದ ದೂರು ಸಲ್ಲಿಸಿದ್ದರೂ ಪೋಲಿಸರು ಎಫ್ ಐ ಆರ್ ನಲ್ಲಿ ಮೈಶುಗರ್ ಆಡಳಿತ ಮಂಡಳಿ ಎಂದು ದಾಖಲಿಸುವುದರೊಂದಿಗೆ ಪ್ರಕರಣದಲ್ಲಿ ಕೆಳಹಂತದ ಅಧಿಕಾರಿಗಳಿಗೆ ಹೊಣೆ ಹೊರಿಸಿ ಅಧ್ಯಕ್ಷ ಹಾಗೂ ಎಂಡಿಯನ್ಮು ಪ್ರಕರಣದಿಂದ ಕೈ ಬಿಡುವ ಪ್ರಯತ್ನ ನಡೆಸಿರಬಹುದೆಂದು ಕರವೇ ಜಿಲಾಧ್ಯಕ್ಷ ಎಚ್ ಡಿ ಜಯರಾಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನ್ವಯವಾಗುವ ಕ್ರಿಮಿನಲ್ ಆರೋಪಗಳು: ಅಪಘಾತ ಸಂಭವಿಸಿದ ದಿನಾಂಕವನ್ನು ಅವಲಂಬಿಸಿ, ಪೊಲೀಸರು ಎರಡು ಕಾನೂನು ಚೌಕಟ್ಟುಗಳಲ್ಲಿ ಒಂದರ ಅಡಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನು (FIR) ದಾಖಲಿಸುತ್ತಾರೆ: ಜುಲೈ 1, 2024 ರ ನಂತರ ಸಂಭವಿಸಿದ ಘಟನೆಗಳಿಗೆ: ನಿರ್ಲಕ್ಷ್ಯದಿಂದಾಗಿ ಸಾವು ಸಂಭವಿಸಿದ ಆರೋಪದ ಮೇಲೆ ಆರೋಪಿಯ ವಿರುದ್ಧ ‘ಭಾರತೀಯ ನ್ಯಾಯ ಸಂಹಿತೆ’ಯ (BNS) ಸೆಕ್ಷನ್ 106(1) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಇದಕ್ಕೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವಿದೆ. [1], [2], [3] ಹಳೆಯ ಘಟನೆಗಳಿಗೆ (ಜುಲೈ 1, 2024 ಕ್ಕಿಂತ ಮೊದಲು): ಪ್ರಕರಣವನ್ನು ‘ಭಾರತೀಯ ದಂಡ ಸಂಹಿತೆ’ಯ (IPC) ಸೆಕ್ಷನ್ 304A ರ ಅಡಿಯಲ್ಲಿ ದಾಖಲಿಸಲಾಗುತ್ತದೆ, ಇದಕ್ಕೆ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. [1], [2] ಬಾಯ್ಲರ್ ದೋಷಪೂರಿತವಾಗಿದೆ ಎಂಬುದು ಕಾರ್ಖಾನೆಯ ಮಾಲೀಕರಿಗೆ ಮೊದಲೇ ತಿಳಿದಿದ್ದರೂ, ಅವರು ಕಾರ್ಮಿಕರನ್ನು ಅದನ್ನು ನಿರ್ವಹಿಸುವಂತೆ ಒತ್ತಾಯಿಸಿದ್ದರು ಎಂಬುದು ಸಾಬೀತಾದರೆ, ಪೊಲೀಸರು ಆರೋಪವನ್ನು ‘ಕೊಲೆಗೆ ಸಮಾನವಲ್ಲದ ನರಹತ್ಯೆ’ಗೆ (BNS ನ ಸೆಕ್ಷನ್ 105 / IPC ಯ ಸೆಕ್ಷನ್ 304 ಭಾಗ II ರ ಅಡಿಯಲ್ಲಿ) ಬದಲಾಯಿಸಬಹುದು; ಇದು ಜಾಮೀನು ರಹಿತ ಅಪರಾಧವಾಗಿದ್ದು, 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒಳಗೊಂಡಿರುತ್ತದೆ.


