Tuesday, November 10, 2026
spot_img

ಮಾಗಡಿಗೆ ಹೇಮೆ ಯಾವುದೆ ವಿರೋಧವಿಲ್ಲ:ಕುಣಿಗಲ್ ಜ್ಯಾದಳ ಘೋಷಣೆ

ಲಿಂಕ್ ಕೆನಾಲ್ ಗೆ ಅಡ್ಡಿ ಮಾಡಲ್ಲ:ಕುಣಿಗಲ್ ಜಾತ್ಯಾತೀತ ಜನತಾದಳ

ಮಾಗಡಿಗೆ ಹೇಮೆ ನೀರು; ಆಕ್ಷೇಪ

ಕುಣಿಗಲ್‌: ಲಿಂಕ್ ಕೆನಾಲ್ ಕಾಮಗಾರಿಗೆ ರಾಜಕಾರಣಿಯಿಂದಲೂ ಯಾವ ಅಡ್ಡಿಯಿಲ್ಲ. ಆದರೆ, ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗಲು ಆಕ್ಷೇಪವಿದೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್.ಜಗದೀಶ್ ಸೋಮವಾರ ಹೇಳಿದರು.

ಶಾಸಕ ಡಾ.ಎಚ್.ಡಿ.ರಂಗನಾಥ್ ಅವರು ಲಿಂಕ್ ಕೆನಾಲ್‌ಗೆ ಜಿಲ್ಲೆಯ ಬಹುತೇಕ ರಾಜಕಾರಣಿಗಳಿಂದ ರಾಜಕೀಯ ಉದ್ದೇಶದಿಂದ ಅಡಚಣೆ ಇದೆ. ತಾಲ್ಲೂಕಿಗೆ ಹೇಮಾವತಿ ನೀರಿನ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು

ಆರೋಪಿಸಿದ್ದಕ್ಕೆ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ತಾಲ್ಲೂಕಿಗೆ ಹೇಮಾವತಿ ನೀರಿನ ವಿಚಾರದಲ್ಲಿ ಅನ್ಯಾಯವಾಗಿರುವುದೇ ಶಾಸಕ, ಮಾಜಿ ಸಂಸದ, ಶಾಸಕರ ಷಡ್ಡಕ ಮುಖ್ಯಮಂತ್ರಿ ಅವರಿಂದ ಎಂದು ಆರೋಪಿಸಿದರು.

ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ಒಂದು ಟಿಎಂಸಿ ನೀರು ನೀಡುವುದರ ಜತೆಗೆ ಶ್ರೀರಂಗ ಏತನೀರಾವರಿ ಯೋಜನೆ ಮೂಲಕ ಮಾಗಡಿ ಕೆರೆಗಳಿಗೆ ನೀರು ನೀಡುವ ಮೂಲಕ ತಾಲ್ಲೂಕಿಗೆ ಅನ್ಯಾಯ ಮಾಡಿದ್ದಾರೆ. ಮಾಗಡಿಗೆ ಕುಣಿಗಲ್

ಪಾಲಿನ ನೀರು ನೀಡುವ ಬದಲು ಮಾಗಡಿಗಾಗಿ ವಿಶೇಷ ಅಲಾಟ್‌ಮೆಂಟ್ ಮಾಡಿಸಿ ನೀರು ನೀಡಿ ಎಂದು ಆಗ್ರಹಿಸಿದರು.

ಲಿಂಕ್ ಕೆನಾಲ್‌ಗಾಗಿ ಅಡಚಣೆ ಮಾಡುತ್ತಿರುವವರ ಮನೆ ಮುಂದೆ ಪ್ರತಿಭಟನೆ ಮಾಡುವುದಾದರೇ ಗುಬ್ಬಿ ಶಾಸಕ ಶ್ರೀನಿವಾಸ್ ಮನೆ ಮುಂದೆ ಪ್ರತಿಭಟಿಸಲಿ ಎಂದರು.

240 ಹೇಮಾವತಿ ನಾಲೆಯ ಕಿ.ಮೀ.ವರೆಗಿನ ನಾಲಾ ಕಾಮಗಾರಿ ಪೂರ್ಣಗೊಳಿಸಿ ಹುಲಿಯೂರುದುರ್ಗಕ್ಕೆ ನೀರು ನೀಡುವಲ್ಲಿ, ಕಸಬಾ ಹೋಬಳಿಗೆ ಮತ್ತು ಕೊತ್ತಗೆರೆ ಏತನೀರಾವರಿ ಯೋಜನೆಗಳಿಗೆ ಚಾಲನೆ ನೀಡದೆ

ಅತುರದಲ್ಲಿ ₹970 ಕೋಟಿ ವೆಚ್ಚದ ಲಿಂಕ್ ಕೆನಾಲ್ ಕಾಮಗಾರಿಗೆ ಮುಂದಾಗಿದ್ದಾರೆ. ಲಿಂಕ್ ಕೆನಾಲ್ ಕಾಮಗಾರಿ ಶಾಸಕರ ಕುಟುಂಬದ ಕೂಸಲ್ಲ. ಡಿ.ನಾಗರಾಜಯ್ಯ ಶಾಸಕರಾಗಿದ್ದಾಗ ನೇರವಾಗಿ ನೀರು ಪಡೆಯಲು ಸಿದ್ದವಾಗಿದ್ದ ಎಕ್ಸ್‌ಪ್ರೆಸ್ ಕೆನಾಲ್‌ನ ಪರ್ಯಾಯ ರೂಪ. ಯಾರಿಂದ ಅನ್ಯಾಯವಾಗಿದೆ ಎಂಬ ವಿಷಯದ ಬಗ್ಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿದರು.

ಮುಖಂಡರಾದ ಕುಲುಮೆಪಾಳ್ಯ ಶಿವಣ್ಣ, ಕೆಂಪೀರೇಗೌಡ, ಶಿವಶಂಕರ್ ಯಲಚವಾಡಿ, ತರಿಕೆರೆ ಪ್ರಕಾಶ್, ರಂಗಸ್ವಾಮಿ ಜಗದೀಶ್, ಮಂಜಣ್ಣ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!