Monday, November 16, 2026
spot_img

ವಾರ್ತಾ ಇಲಾಖೆಯ ಅನುಬಂಧ:ಏನಿದರ ಬಂಧ?

ವಾರ್ತಾ ಇಲಾಖೆಯ ಸುತ್ತೋಲೆ:ಏನಿದರ ಮರ್ಮ

ಕೆಲದಿನಗಳ ಹಿಂದೆ ರಾಜ್ಯದ ದಿನಪತ್ರಿಕೆಗಳ ಮುದ್ರಣ ಸೇರಿದಂತೆ ಹಲವು ಅಂಶಗಳ ಕುರಿತು ವಾರ್ತಾ ಇಲಾಖೆಯ ಹೊರಡಿಸಿದ ಸುತ್ತೋಲೆ ಸಹಜವಾಗಿಯೇ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಆಕ್ರೋಶ ಹಾಗೂ ಕಳವಳಕ್ಕೆ ಕಾರಣವಾಗಿತ್ತು.

ಸುತ್ತೋಲೆಯನ್ನು ಹಿಂಪಡೆಯುವಂತೆ ರಾಜ್ಯದ ವಿವಿಧ ಸಂಪಾದಕರ ಸಂಘಗಳು ತಮ್ಮದೆ ಹೋರಾಟ ಆರಂಭಿಸಿದವು.
ಕಡೇಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿ ಸುತ್ತೋಲೆ ಹಿಂಪಡೆಯುವಂತೆ ಒತ್ತಾಯಿಸಿದವು.
ಆದರೆ ಸ್ವತಃ ಮುಖ್ಯಮಂತ್ರಿಗಳು ಖಚಿತವಾದ ತೀರ್ಮಾನ ಘೋಷಿಸದ ಬೆನ್ನಲ್ಲೆ ವಾರ್ತಾ ಇಲಾಖೆ ಹಲವು ದಾಖಲೆಗಳನ್ನು ಸಲ್ಲಿಸುವಂತೆ ಈಗಾಗಲೇ ಪತ್ರಿಕೆಯ ಮಾಲೀಕರಿಗೆ ಸೂಚಿಸಿದೆ.

ಮುಖ್ಯವಾಗಿ ಪತ್ರಿಕಾ ಸಂಪಾದಕರರು ಮಾಲೀಕರು ಪ್ರಕಾಶಕರ ಆಧಾರ್ ಪಡಿತರ ಚೀಟಿಗಳ ಧೃಡೀಕೃತ ಪ್ರತಿ ಕೇಳಿರುವುದು ಚಳಿಗಾಲದಲ್ಲಿ ಹಲವರ ಮಂಡೆ ಬೆಚ್ಚಗಾಗುವಂತೆ ಮಾಡಿದೆ.

ಈಗಿರುವ ಒಟ್ಟು ಪತ್ರಿಕೆಗಳ ಪೈಕಿ ಶೇ ೬೦ ರಷ್ಟು ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಿರುವುದು.ಕಳೆದ ವರ್ಷ ೪೪ ಕೋಟಿ ಇದ್ದ ಪ್ರೋತ್ಸಾಹಿತ ಜಾಹೀರಾತು ವೆಚ್ಚ ಈಗ ೮೯ ಕೋಟಿಗೆ ಜಿಗಿದಿರುವುದು ವಾರ್ತಾ ಇಲಾಖೆಯ ಕಣ್ಣು ಕೆಂಪಾಗಾಗಿಸಿದೆ.

ಇದರ ಜತೆಗೆ ಸುಧಾರಣೆಯ ಮೊದಲ ಹಂತವಾಗಿ ಒಂದೇ ಕುಟುಂಬದ ಹಲವರು ಬೇರೆ ಬೇರೆ ಹೆಸರಿನಲ್ಲಿ ಹಲವು ಜಿಲ್ಲೆಗಳಲ್ಲಿ ಪತ್ರಿಕೆಗಳನ್ನು ನಡೆಸುತ್ತಿರುವವರ ಮಾಹಿತಿ ಕಲೆ ಹಾಕುವುದು ಈಗಿನ ಅನುಬಂಧದ ಮೊದಲ ಉದ್ದೇಶ ಎನ್ನಲಾಗಿದೆ.

ಪಡಿತರ ಚೀಟಿ.ಆಧಾರ್ ಇತ್ಯಾದಿ ಜತೆಗೆ ಪತ್ರಿಕೆಯ ವಿಳಾಸ.ಮುದ್ರಿತ ಸ್ಥಳಗಳ ಪರೀಶೀಲನೆಗೆ ಈ ದಾಖಲೆಗಳನ್ನು ಬಳಸುವುದು ವಾರ್ತಾ ಇಲಾಖೆಯ ಉದ್ದೇಶ ಎನ್ನಲಾಗಿದೆ.

ಒಟ್ಟಿನಲ್ಲಿ ವಾರ್ತಾ ಇಲಾಖೆ ತನ್ನ ಬುಲ್ಡೋಜರ್ ಕಾರ್ಯಾಚರಣೆ ಆರಂಭಿಸಿರುವುದು ಸ್ಥಳೀಯ ಪತ್ರಿಕೆಗಳ ಆತಂಕ ಹೆಚ್ಚಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!