ಉಚ್ಚಾಟನೆಗೆ ತಡೆ ಎತ್ತಿಹಿಡಿದ ಮೇಲ್ಮನವಿ ನ್ಯಾಯಾಲಯ: ಸಿಟಿ ಕ್ಲಬ್ ಸಮಿತಿಯ ಅಪೀಲು ಅರ್ಜಿ ವಜಾ
ಕಬಡ್ಡಿ ಪುಟ್ಟಸ್ವಾಮಿ ಹಾಗೂ ನೃಪತುಂಗ ಅವರನ್ನು ಉಚ್ಚಾಟಿಸಿದ್ದ ಸಿಟಿ ಕ್ಲಬ್ ಆಡಳಿತ ಮಂಡಳಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಉಚ್ಚಾಟನೆಗೆ ಕೆಳಹಂತದ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಕ್ಲಬ್ ಸಮಿತಿ ಸಲ್ಲಿಸಿದ್ದ ಮೇಲ್ಮನವಿ (ಅಪೀಲು) ಅರ್ಜಿಯನ್ನು ಮೇಲ್ಮನವಿ ನ್ಯಾಯಾಲಯ ವಜಾಗೊಳಿಸಿದೆ.
ಪುಟ್ಟಸ್ವಾಮಿ ಮತ್ತು ನೃಪತುಂಗ ಅವರನ್ನು ಕಾನೂನುಬಾಹಿರವಾಗಿ ಉಚ್ಚಾಟಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಕ್ರಮಕ್ಕೆ ಕೆಳಹಂತದ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಕ್ಲಬ್ ಸಮಿತಿ ಮೇಲ್ಮನವಿ ಸಲ್ಲಿಸಿತ್ತು. ಆದರೆ ಮೇಲ್ಮನವಿ ನ್ಯಾಯಾಲಯ ಅರ್ಜಿಯನ್ನು ರದ್ದುಗೊಳಿಸಿ, ಕೆಳಹಂತದ ನ್ಯಾಯಾಲಯದ ತಡೆಯಾಜ್ಞೆಯನ್ನು ಎತ್ತಿಹಿಡಿದಿದೆ.
ಇದರಿಂದ ಸಮಿತಿಗೆ ಮೇಲಿನ ನ್ಯಾಯಾಲಯದಲ್ಲೂ ಮುಖಭಂಗವಾಗಿದೆ ಎಂದು ಹೇಳಲಾಗಿದೆ.


