Monday, September 21, 2026
spot_img

ಸೆ 22 ರಂದು ಮಂಡ್ಯದಲ್ಲಿ ಕಬ್ಬು ಬೆಳೆಗಾರರ ವಿಚಾರ ಸಂಕಿರಣ

ಹೆಚ್ಚುತ್ತಿರುವ ಉತ್ಪಾದನೆ ವೆಚ್ಚ ಕಾರ್ಮಿಕರ ಕೊರತೆ ನೀರಿನ ಸಮಸ್ಯೆಗಳು ಹಾಗೂ ಕಬ್ಬಿನ ಬೆಲೆ ಸೇರಿದಂತೆ ಕೃಷಿ ಮೇಲೆ ಪರಿಣಾಮ ಬೀರುತ್ತಿರುವ ವಿಷಯಗಳ ಕುರಿತು ಸೆ 22 ರಂದು ರಾಜ್ಯಮಟ್ಟದ ಕಬ್ಬು ಬೆಳೆಗಾರರ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ಹಾಡ್ಯ ರಮೇಶ್ ರಾಜು ತಿಳಿಸಿದರು

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ಮುಂದಿನ ದಿನಗಳಲ್ಲಿ ರೈತ ಕಬ್ಬು ಬೆಳೆಯುವುದನ್ನು ಬಿಟ್ಟರೆ ಸಕ್ಕರೆ ಕಾರ್ಖಾನೆಗಳು ಮುಚ್ಚುವ ಸ್ಥಿತಿ ದೂರವಿಲ್ಲ ಈ ಹಿನ್ನೆಲೆಯಲ್ಲಿ ಡಾ.ಸಿ ರಂಗರಾಜನ್ ಸಮಿತಿ ವರದಿಯ ಪ್ರಕಾರ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರು ರೈತರ ನಡುವೆ ಲಾಭವನ್ನು ಹಂಚಿಕೊಳ್ಳುವ ಸೂತ್ರವನ್ನು ಸೂಚಿಸಿದ್ದಾರೆ.

ಸಕ್ಕರೆ ಮತ್ತು ಉಪ ಉತ್ಪನ್ನಗಳ ಲಾಭದಲ್ಲೇ ರೈತರ ಪಾಲು ಶೇಕಡ 70ರಷ್ಟು ಇರಬೇಕು
ಕಾರ್ಖಾನೆಯ ಪಾಲು ಶೇಕಡ 30ರಷ್ಟು ಇರಬೇಕೆಂದು ಹೇಳಿದೆ.

ಕಾರ್ಖಾನೆ ಸಕ್ಕರೆ ಜೊತೆಗೆ ಎಥನಾಲ್, ವಿದ್ಯುತ್, ಮಾಲಾಸಿಸ್, ಮಾರಾಟದಿಂದ ನೂರಾರು ಕೋಟಿ ಲಾಭವಾಗುತ್ತಿದೆ ಇದರ ಲಾಭವನ್ನು ನ್ಯಾಯಯುತವಾಗಿ ರೈತರಿಗೆ ನೀಡಬೇಕು. ಉತ್ಪಾದನೆ ವೆಚ್ಚಕ್ಕೆ ಸಂಬಂಧಿಸಿದಂತೆ ಕಬ್ಬಿನ ಬೆಳೆಗೆ ಬೆಲೆ ನಿಗದಿ ಮಾಡಬೇಕು ಇನ್ನಿತರ ಸಮಸ್ಯೆಗಳ ಕುರಿತಾಗಿ ರಾಜ್ಯಮಟ್ಟದ ಕಬ್ಬು ಬೆಳೆಗಾರರ ವಿಚಾರ ಸಂಕಿರಣವನ್ಮು ಸೆ 22 ರಂದು ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿಗಳಾದ ಡಾ. ಕುಮಾರ್ ಉದ್ಘಾಟಿಸಲಿದ್ದು ಭಾರತೀಯ ಕಿಸಾನ್ ಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಕೆ ಸಾಯಿ ರೆಡ್ಡಿ ರವರು ಭಾಗವಹಿಸಲಿದ್ದಾರೆ ಅತಿ ಹೆಚ್ಚು ಕಬ್ಬು ಬೆಳೆಗಾರರು ಬೆಳೆಯುವ ಜಿಲ್ಲೆಯ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು
ಪತ್ರಿಕಾಗೋಷ್ಠಿಯಲ್ಲಿ ಬಿಪಿ ಅಪ್ಪಾಜಿ, ಜೆಕೆ ಬಸವರಾಜು, ಅಪ್ಪಾಜಿಗೌಡ, ಪ್ರಭುಸ್ವಾಮಿ, ಹೊಳಲು ಶಿವಣ್ಣ, ನಾಗಸುಂದರ್, ರಾಘವೇಂದ್ರ ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!