Thursday, July 16, 2026
spot_img

ಮೈಶುಗರ್ ಆಡಳಿತದಲ್ಲಿ ಅವ್ಯವಹಾರ ಸಾಬೀತು:ಅಧ್ಯಕ್ಷ.ಎಂ.ಡಿ ಪದಚ್ಯುತಿಗೆ ಒತ್ತಾಯ

ಮೈಶುಗರ್ ಆಡಳಿತದಲ್ಲಿನ ಅಕ್ರಮ ಸಾಬೀತು:ಅಧ್ಯಕ್ಷ.ಎಂಡಿ ಪದಚ್ಯುತಿಗೆ ಆಗ್ರಹ

ಮೈಶುಗರ್ ಆಡಳಿತ ಮಂಡಳಿಯ ವಿರುದ್ದ ಮಾಡಲಾಗಿದ್ದ ಆರೋಪಗಳ ಕುರಿತು ನೇಮಿಸಲಾಗಿದ್ದ ಮಹರಾಷ್ಟದ ನಿವೃತ್ತ ಸಕ್ಕರೆ ಆಯುಕ್ತ ಶೇಖರ ಗಾಯಕವಾಡ ನೇತೃತ್ವದ ತನಿಖಾ ಸಮಿತಿಯು ವರದಿ ನೀಡಿದ್ದು. ಈ ವರದಿಯಲ್ಲಿ ಬಹುತೇಕ ಹಗರಣಗಳು ಸಾಬೀತಾಗಿದ್ದು ಕಾರ್ಖಾನೆಯ ಆಡಳಿತದ ದೃಷ್ಟಿಯಿಂದ ಮೈಶುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ರನ್ನು ಪದಚ್ಯುತಗೊಳಿಸಿ ಅಗತ್ಯ ತನಿಖೆಗೆ ಎರ್ಪಾಟು ಮಾಡುವಂತೆ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರಿಗೆ ಮೈಶುಗರ್ ಉಳಿಸಿ ಹೋರಾಟ ಸಮಿತಿ ಆಗ್ರಹಿಸಿದೆ

ಮಂಡ್ಯ ಪತ್ರಿಕಾ ಭವನದಲ್ಲಿ ಮಾತನಾಡಿದ ಸಮಿತಿಯ ಎಂ.ಬಿ.ನಾಗಣ್ಣಗೌಡ ತನಿಖಾ ಸಮಿತಿಯು ವಿಸೃತವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು.ಈ ವರದಿಯಲ್ಲಿ ನಿಯಮಗಳ ಉಲ್ಲಂಘನೆ ಸ್ವಜನಪಕ್ಷಪಾತ ಹಣ ದುರ್ಬಳಕೆ ಆಗಿರುವ ಅಂಶಗಳನ್ನು ಬಹಿರಂಗಗೊಳಿಸಿದೆ.ಮುಖ್ಯವಾಗಿ ಕಾರ್ಖಾನೆಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ಕೆಟಿಟಿಪಿ ನಿಯಮದ ಅನುಸಾರ ಜಾಹೀರಾತು ನೀಡಿ ಇ-ಪ್ರೋಕ್ಯೂರ್ ಮೆಂಟ್ ಮೂಲಕ ಏಜೆನ್ಸಿಗಳನ್ನು ಅಹ್ವಾನಿಸಿಲ್ಲ.ಬದಲಿಗೆ ನೇರ ಗುತ್ತಿಗೆ ನೀಡಲಾಗಿದೆ.ಸ್ವಿಸ್ ಎಂಬ ಹೊರಗುತ್ತಿಗೆ ಏಜೆನ್ಸಿಗೆ ಒಪ್ಪಿಕೊಂಡ ಶೇ ೧ ರ ಸೇವಾಶುಲ್ಕದ ಬದಲು ಶೇ ೩ ರಷ್ಟು ಸೇವಾ ಶುಲ್ಕ ಪಾವತಿಸಿ ಕಂಪನಿಗೆ ೩.೮೧.೫೫೭ ರೂಗಳನ್ನು ನಷ್ಟ ಉಂಟು ಮಾಡಲಾಗಿದೆ.ಈ ನೇಮಕಾತಿಯಲ್ಲಿ ಯಾವುದೆ ರೋಸ್ಟರ್ ಪಾಲಿಸಿಲ್ಲ.ಸಕ್ಕರೆ ಮಾರಾಟದಲ್ಲು ಟೆಂಡರ್ ದಾರರಿಂದ ಇಎಂಡಿ ಪಡೆಯದೆ ಅವಕಾಶ ನೀಡಿದ್ದರಿಂದ ಸಕಾಲಕ್ಕೆ ಸಕ್ಕರೆ ಎತ್ತುವಳಿ ಮಾಡದೆ ಕಂಪನಿಗೆ ೧೯.೮೯.೦೦೦ ನಷ್ಟ ಉಂಟು ಮಾಡಲಾಗಿದೆ. ಕಂಪನಿಗೆ ಅನಗತ್ಯ ನೇಮಕಾತಿಗಳನ್ನು ನಡೆಸಲಾಗಿದ್ದು.ನಿಯಮಬಾಹಿರವಾಗಿ ನಿವೃತ್ತ ನೌಕರರನ್ನು ನೇಮಿಸಿಕೊಂಡಿರುವುದನ್ನು ವರದಿ ಧೃಡೀಕರಿಸಿದೆ.

ಕಾರ್ಖಾನೆಯ ಆವರಣದಲ್ಲಿ ನಿಯಮಬಾಹಿರವಾಗಿ ಮರಗಳನ್ನು ಕಡಿದು ಸಾಗಿಸಿರುವುದನ್ನು ವರದಿ ಬೊಟ್ಟು ಮಾಡಿದ್ದು.ಅಕ್ರಮ ಮರಗಳ ಕಡಿತವನ್ನು ಬಯಲಿಗೆಳೆದಿದೆ ಎಂದರು.

ಮುಂದುವರಿದು ಮಾತನಾಡಿದ ಅವರು ಮೈಶುಗರ್ ಆವರಣದಲ್ಲಿ ಸಿಸಿ ಟಿವಿ ಅಳವಡಿಕೆಯನ್ನು ಆರ್ ಬಿ ಟೆಕ್ ಏಜೆನ್ಸಿಯೆ ಮಾಡಿಕೊಂಡಿದೆ ಎಂದು ಆರಂಭದಲ್ಲಿ ಅಧ್ಯಕ್ಷರು ರೈತರನ್ನು ದಿಕ್ಕು ತಪ್ಪಿಸಿದ್ದರು.

ಆದರೆ ತನಿಖಾ ವರದಿಯ ಪ್ರಕಾರ ಆರ್ ಬಿ ಟೆಕ್ ಏಜೆನ್ಸಿ ಸಿಸಿ ಟಿವಿ ಬಾಬ್ತು ಹಣವನ್ನು ಐಟಿ ವರ್ಲ್ಡ್ ಕಂಪನಿಗೆ ಪಾವತಿಸುವಂತೆ ಕೋರಿದ್ದು.ಅದರಂತೆ ಸಿಸಿಟಿವಿ ಅಳವಡಿಕೆಗಾಗಿ ಐಟಿ ವರ್ಲ್ಡ್ ಕಂಪನಿಗೆ ಮೈಶುಗರ್ ನಿಂದ ೧೦.೪೯.೪೦೦ ರೂಗಳನ್ನು ಅಕ್ರಮವಾಗಿ ಪಾವತಿಸಲಾಗಿದೆ.

ಸಿಸಿಟಿವಿ ಅಳವಡಿಕೆಗೆ ನಿಯಮಾನುಸಾರ ಟೆಂಡರ್ ಕರೆಯದೆ ರೈತರನ್ನು ದಾರಿ ತಪ್ಪಿಸಿದ ಮೈಶುಗರ್ ಆಡಳಿತ ಮಂಡಳಿಯ ಸಂಚು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.

ಸೂಕ್ತ ನಿರ್ವಹಣೆ ಮಾಡದ ಕಾರಣ ೨೦ ಮೆಟ್ರಿಕ್ ಟನ್ ಮೊಲಾಸ್ ನಷ್ಟ ಉಂಟು ಮಾಡಲಾಗಿದೆ.ಇದರಿಂದ ಕಾರ್ಖಾನೆಗೆ ೨.೫ ಲಕ್ಷ ನಷ್ಟ ಉಂಟಾಗಿದೆ ಎಂದರು.

ಇದಲ್ಲದೆ ಕಾರ್ಖಾನೆಯ ಸ್ವಚ್ಚತೆಯನ್ನು ತಮಗೆ ಬೇಕಾದವರಿಗೆ ನೀಡುವ ಸಲುವಾಗಿ ಒಂದೇ ವರ್ಷದಲ್ಲಿ ಹಲವು ಉಪಗುತ್ತಿಗೆಗಳನ್ನು ನೀಡಲಾಗಿದೆ.ಇಲ್ಲಿ ಕೆಟಿಟಿಪಿ ನಿಯಮದಂತೆ ಟೆಂಡರ್ ತಪ್ಪಿಸುವ ಸಲುವಾಗಿ ಹಲವು ಗುತ್ತಿಗೆದಾರರಿಗೆ ಸ್ವಚ್ಚತೆಯ ಗುತ್ತಿಗೆ ನೀಡಿರುವುದನ್ನು ಸಮಿತಿ ಬೊಟ್ಟು ಮಾಡಿದೆ.ವಾಸ್ತವವಾಗಿ ಅಂತರಿಕ ಸ್ವಚ್ವತೆ. ಕಾರ್ಖಾನೆಯ ನಿರ್ವಹಣೆ ಹೊಣೆ ಹೊತ್ತಿದ್ದ ಆರ್ ಬಿ ಟೆಕ್ ಏಜೆನ್ಸಿಯದಾಗಿದ್ದು ಆದರೆ ಇಲ್ಲಿ ನಿಯಮಬಾಹಿರ ಗುತ್ತಿಗೆ ನೀಡಿ ಸುಮಾರು ೩೦ ಲಕ್ಷ ರೂಪಾಯಿ ಮೈಶುಗರ್ ಹಣವನ್ನು ಲೂಟಿ ಮಾಡಲಾಗಿದೆ.

ಇದಲ್ಲದೆ ಅಂತರಿಕ ಸ್ವಚ್ಚತೆ ಹೆಸರಿನಲ್ಲಿ ಆರ್ ಬಿ ಟೆಕ್ ಹೆಸರಿನಲ್ಲಿ ೪.೪೦.೦೦೦ ನೀಡಲಾಗಿದ್ದು.ಇದಕ್ಕೆ ಸ್ವತ ಆರ್ ಬಿ ಟೆಕ್ ಕಂಪನಿ ಸಮ್ಮತಿಯ ಯಾವುದೆ ದಾಖಲೆ ನೀಡಿಲ್ಲ.ಅಂದರೆ ಆರ್ ಬಿ ಟೆಕ್ ಹೆಸರಿನಲ್ಲಿ ಕಾರ್ಖಾನೆಯನ್ನು ಆಡಳಿತ ಮಂಡಳಿಯೆ ಹಣ ಲಪಟಾಯಿಸಿರುವ ಸಾಧ್ಯತೆಗಳಿವೆ.

ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಕಾರ್ಖಾನೆಗೆ ನೇಮಕವಾಗುವ ಮುನ್ನಾ ದಿನದ ಕಡತಗಳಿಗೂ ತಮ್ಮ ಸಹಿ ಹಾಕಿದ್ದು ಇದನ್ನು ಸ್ವತಃ ಅವರು ತನಿಖಾ ಸಮಿತಿ ಮುಂದೆ ಒಪ್ಪಿಕೊಂಡಿದ್ದರು ಸಮಿತಿಗೆ ಕಡತವನ್ನು ಮಂಡಿಸಿಲ್ಲ.

ಮೈಶುಗರ್ ಆಡಳಿತ ಮಂಡಳಿಯ ಕೇವಲ ನಿರ್ಣಯದ ಆಧಾರದ ಮೇಲೆ ಸುಮಾರು ೧೨ ಕೋಟಿ ಬೆಲೆ ಬಾಳುವ ಬಿ ಮಿಲ್ ನ್ನು ಕೇವಲ ನಾಲ್ಕು ಕೋಟಿ ಹತ್ತು ಲಕ್ಷಕ್ಕೆ ಮಾರಾಟ ಮಾಡಲಾಗಿದೆ.ಇದಕ್ಕೆ ಸರಕಾರದ ಯಾವುದೆ ಅನುಮತಿ ಪಡೆದಿಲ್ಲ.ಈ ಸಂಬಂದ ಈಗಾಗಲೇ ಕಾರಣ ಕೇಳಿ ಸರಕಾರ ನೋಟಿಸ್ ಜಾರಿ ಮಾಡಿದೆ.

ನಮ್ಮ ಹೋರಾಟದ ಕಾರಣಕ್ಕೆ ಮೈಶುಗರ್ ಭೂಮಿ ವಿಲೇವಾರಿ ಪ್ರಕ್ರಿಯೆಗೆ ತಡೆ ಬಿದ್ದಿದೆ.ಇಲ್ಲದಿದ್ದಲ್ಲಿ ಅಗ್ಗದ ದರಕ್ಕೆ ಮೈಶುಗರ್ ಭೂಮಿ ವಿಲೇವಾರಿಯಾಗುವ ಪ್ರಯತ್ನ ಈ ವೇಳೆಗೆ ಮುಗಿದು ಮೈಶುಗರ್ ಇನ್ನೊಂದು ಅಸಿಟೇಟ್ ಕಾರ್ಖಾನೆಯಾಗುತ್ತಿತ್ತು..ಇದು ನಮ್ಮ ಹೋರಾಟದ ಫಲವಾಗಿದೆ.

ರೈತರ ಹಿತಾಸಕ್ತಿಯ ಬದಲು ತಮ್ಮ ಸ್ವಾರ್ಥ ಸಾಧನೆಗೆ ಮೈಶುಗರ್ ಕಾರ್ಖಾನೆಯನ್ನು ದುರ್ಬಳಕೆ ಮಾಡಿಕೊಂಡ ಅಧ್ಯಕ್ಷ ಸಿ.ಡಿ ಗಂಗಧರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ರನ್ನು ತಕ್ಷಣವೆ ಪದಚ್ಯುತಗೊಳಿಸಿ ಸೂಕ್ತ ತನಿಖೆಗೆ ಎರ್ಪಾಡು ಮಾಡುವಂತೆ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರಿಗೆ ಒತ್ತಾಯಸಿದ ಮೈಶುಗರ್ ಕಬ್ಬು ಬೆಳೆಗಾರರ ಸಂಘದ ಸಾತನೂರು ವೇಣುಗೋಪಾಲ್

ಈ ಭ್ರಷ್ಟರ ಪರವಾಗಿ ಜಿಲ್ಲೆಯ ಯಾವುದೆ ಜನಪ್ರತಿನಿಧಿ ವಕಾಲತ್ ಹಾಕಿದರೆ ಜಿಲ್ಲೆಯ ರೈತರ ದೃಷ್ಟಿಯಿಂದ ಯಾವುದೆ ಮಾನ್ಯತೆ ನೀಡಬಾರದೆಂದು ಕೋರಿದರು.

ನಾಗರಾಜಪ್ಪ ಆಸ್ತಿ ಮುಟ್ಟುಗೋಲಿಗೆ ಮೀನಾಮೇಷ: ಮೈಶುಗರ್ ಕಾರ್ಖಾನೆಯಲ್ಲಿ ೧೧೯ ಕೋಟಿ ನಷ್ಟಕ್ಕೆ ಕಾರಣರಾಗಿದ್ದ ಈ ಹಿಂದಿನ ಮೈಶುಗರ್ ಅಧ್ಯಕ್ಷ ನಾಗರಾಜಪ್ಪ ಆಸ್ತಿ ಮುಟ್ಡುಗೋಲಿಗೆ ಸ್ವತ ಹೈಕೋರ್ಟ್ ಆದೇಶ ನೀಡಿದರೂ ಮುಟ್ಟುಗೋಲಿಗೆ ಮೀನಾಮೇಷ ಎಣಿಸಲಾಗುತ್ತಿದೆ.
ಭೂ ಕಂದಾಯ ಬಾಕೀಯಂತೆ ಆಸ್ತಿ ಮುಟ್ಟುಗೋಲಿಗೆ ಅವಕಾಶವಿದ್ದು.ಅಗತ್ಯ ಮಾಹಿತಿ ಕ್ರೋಡೀಕರಿಸಿ ಜಿಲ್ಲಾಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಈ ಸಂಬಂದ ಸರಕಾರದೊಂದಿಗೆ ಅಗತ್ಯ ಸಮನ್ವಯತೆ ಕಾಯ್ದುಕೊಂಡು ತಪ್ಪಿತಸ್ಥರಿಗೆ ಸೂಕ್ತ ಸಂದೇಶ ನೀಡುವಂತೆ ಅವರು ಒತ್ತಾಯಿಸಿದರು.

ಗೋಷ್ಡಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್‌ಡಿ ಜಯರಾಂ. ಎಸ್ ಕೆ ರಾಜೂಗೌಡ.ರೈತಸಂಘದ ಶಿವಳ್ಳಿ ಚಂದ್ರಶೇಖರ.ಕೆ ಆರ್ ಎಸ್ ಪಕ್ಷದ ರಾಜ್ಯ ಮುಖಂಡ ರಮೇಶ್ ಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!