ಪರಿಷ್ಕೃತ ಕನಿಷ್ಟ ವೇತನ ಜಾರಿಗೆ ಹೈಕೋರ್ಟ್ ಸಿಗ್ನಲ್
ಕಳೆದ ಮೇ ೨೨ ರಲ್ಲಿ ರಾಜ್ಯದ ವಿವಿಧ ಉದ್ದಿಮೆಗಳ ಕನಿಷ್ಟ ವೇತನ ಅಧಿಸೂಚನೆ ಜಾರಿಗೆ ಇದ್ದ ಅಡೆತಡೆಯನ್ನು ರಾಜ್ಯ ಹೈಕೋರ್ಟ್ ನಿವಾರಿಸಿದೆ.
ಪರಿಷ್ಕೃತ ಕನಿಷ್ಟ ವೇತನ ಅಧಿಸೂಚನೆಯನ್ನು ಕಳೆದ ಮೇ ೨೨ ರಂದು ರಾಜ್ಯ ಕಾರ್ಮಿಕ ಇಲಾಖೆ ಹೊರಡಿಸಿತ್ತು.
ಖಾಸಗಿ ಉದ್ದಿಮೆದಾರರು ಪರಿಷ್ಕೃತ ಕನಿಷ್ಟ ವೇತನ ಜಾರಿಗೆ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಖಾಸಗಿ ಉದ್ದಿಮೆದಾರರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವೂ ಸಹ ಪರಿಷ್ಕೃತ ವೇತನ ಜಾರಿಗೊಳಿಸದಂತೆ ವಿವಿಧ ಇಲಾಖೆಗಳು ಸುತ್ತೋಲೆ ಹೊರಡಿಸಿದ್ದವು.
ಈ ಸುತ್ತೋಲೆಯನ್ನು ಪ್ರಶ್ನಿಸಿ ಎಐಸಿಸಿಟಿಯೂ ಸಿಐಟಿಯೂ ಸೇರಿದಂತೆ ವಿವಿಧ ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು.
ಈ ಸುತ್ತೋಲೆಗಳಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ನೂತನ ಪರಿಷ್ಕೃತ ಕನಿಷ್ಟ ವೇತನ ಜಾರಿಗೆ ಇದ್ದ ಬಹುದೊಡ್ಡ ಅಡೆತಡೆಯನ್ನು ನಿವಾರಿಸಿದೆ.
ಇದರಿಂದ ಯಾವುದೆ ಇಲಾಖೆ ನೂತನ ಪರಿಷ್ಕೃತ ವೇತನ ಜಾರಿಗೆ ಯಾವುದೆ ಅಡ್ಡಿ ಇಲ್ಲದಂತಾಗಿದೆ.
.ಸ್ವಾಗತ:ರಾಜ್ಯ ಹೈಕೋರ್ಟ್ ನೀಡಿರುವ ಆದೇಶಕ್ಕೆ ಸಂತಸ ವ್ಯಕ್ತಪಡಿಸಿರುವ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಈ ಆದೇಶವೂ ಲಕ್ಷಾಂತರ ಮಂದಿ ಕಾರ್ಮಿಕರು ಹೊರಗುತ್ತಿಗೆ ನೌಕರರ ನ್ಯಾಯಯುತ ವೇತನದ ಹಕ್ಕನ್ನು ಎತ್ತಿಹಿಡಿದಿದೆ.
ರಾಜ್ಯ ಸರ್ಕಾರ ಯಾವುದೆ ವಿಳಂಬವಿಲ್ಲದೆ ಪರಿಷ್ಕೃತ ವೇತನ ಜಾರಿಗೊಳಿಸಬೇಕು.ಬಾಕೀ ಇರುವ ಹಿಂಬಾಕಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.


