Monday, September 21, 2026
spot_img

ಸೆ ೨೩ ರಂದು ಮಂಡ್ಯದಲ್ಲಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ

ಡಾ. ಎಚ್ ಡಿ ಚೌಡಯ್ಯರವರ ಅಭಿಮಾನಿ ಬಳಗದಿಂದ ಎಚ್. ಡಿ. ಸಿ. ಕಪ್ ಹೆಸರಿನಲ್ಲಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಚೆನ್ನೇಗೌಡ ತಿಳಿಸಿದರು.

ನಗರದ ಪತ್ರಿಕ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸೆಪ್ಟೆಂಬರ್ 23ರಂದು ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ನಗರದ ಪಿ.ಇ .ಎಸ್ ತಾಂತ್ರಿಕ ಕಾಲೇಜು ಆವರಣದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕಬ್ಬಡಿ ಪಂದ್ಯಾವಳಿ ನಡೆಯಲಿದೆ ಜಿಲ್ಲೆಯಾದ್ಯಂತ 32 ತಂಡಗಳು ಭಾಗವಹಿಸುತ್ತಿವೆ ಪ್ರತಿ ತಂಡದಲ್ಲಿ 10 ಜನ ಇದ್ದು 350ಕ್ಕೂ ಆಟಗಾರರು ಭಾಗವಹಿಸಲಿದ್ದು ಪ್ರತಿ ತಂಡಗಳಿಗೆ ಆಟದ ಸಮವಸ್ತ್ರ ನೀಡಲಾಗುವುದು.ಕ್ರೀಡಾಳುಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು. ಕಬಡ್ಡಿ ಪಂದ್ಯಾವಳಿಯ ನಿಯಮಗಳನ್ನು ಪಾಲಿಸಬೇಕು ಹಾಗೂ ವಿಜೇತರಿಗೆ ಕಪ್ ಸೇರಿದಂತೆ ಪ್ರಶಸ್ತಿ ಪತ್ರ ನೀಡಲಾಗುವುದು ಪ್ರವೇಶ ಶುಲ್ಕ ಉಚಿತವಾಗಿದೆ ಆದ್ದರಿಂದ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಬ್ಬಡಿ ಆಟಗಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ಲೇಶ್ ಯತೀಶ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು..

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!