ಮಿಮ್ಸ್ ವೈದ್ಯಕೀಯ ಅಧೀಕ್ಷಕ ಸೇರಿ 10 ನೌಕರರ ವಿರುದ್ಧ ಪ್ರಕರಣ ದಾಖಲು
ಮಂಡ್ಯ: ನ್ಯಾಯಾಂಗ ಬಂಧನದಲ್ಲಿದ್ದ ಕೈದಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಅನಧಿಕೃತ ಚಿಕಿತ್ಸೆ ಮತ್ತು ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಪ್ರಕರಣ ಗಳಿಗೆ ಸಂಬಂಧಿಸಿ ವೈದ್ಯಕೀಯ ಅಧೀಕ್ಷಕ ಮತ್ತು ಕಾರಾಗೃಹದ ಅಧೀಕ್ಷಕಿ ಸೇರಿ 10 ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತ ದಲ್ಲಿ ಸ್ವಯಂಪ್ರೇರಿತ ದೂರು(ಸುಮೊಟೊ) ದಾಖಲಾಗಿದೆ.
ಮಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಜಿ., ವೈದ್ಯಾಧಿಕಾರಿ ಡಾ.ಅಮರ್ದೀಪ್, ಹಿಂದಿನ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಶಾಂತಮ್ಮ, ಹಿಂದಿನ ವಾರ್ಡರ್ ಶಿವರಾಜು, ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ ಕರ್ಣ ಭೀಮಣ್ಣ ಕ್ಷತ್ರಿಯ, ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೆಬಲ್ಗಳಾದ ರಾಜ್ ಗೋಪಾಲ್. ಚಂದನ್ಕುಮಾರ್, ಚಾಂದ್, ನಾಗರಾಜ್ ಛಲವಾದಿ ಮತ್ತು ಕ್ಯಾತುಂಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇವರಿಗೆ ಪೂರಕ ದಾಖಲಾತಿಗಳೊಂದಿಗೆ ಹಾಜರಾಗಲು ಅ.28ರಂದು ವಿಚಾರಣೆಗೆ ಉ ಪ ಲೋ ಕಾ ಯುಕ್ತ – 2 ನ್ಯಾಯಮೂರ್ತಿ ಆದೇಶಿಸಿದ್ದಾರೆ. ಬಿ.ವೀರಪ್ಪ
ಪ್ರಕರಣ ಏನು?: ನಕಲಿ ದಾಖಲೆ
ಸೃಷ್ಟಿಸಿದ ಆರೋಪದ ಮೇರೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಭೂದಾಖಲೆ ಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಜೂನ್ನಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಎಂಟು ಸರ್ಕಾರಿ ನೌಕರರು ಮತ್ತು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದರು.
ಈ ಪ್ರಕರಣದ ಎ-1 ಆರೋಪಿ ಎಡಿಎಲ್ಆರ್ ಮಹಮ್ಮದ್ ಹುಸೇನ್ ತಲೆಮರೆಸಿಕೊಂಡಿದ್ದರು. ಎರಡು ತಿಂಗಳ ನಂತರ ಆ.6ರಂದು ರಾಯಚೂರಿನಲ್ಲಿ ಗೆಳತಿ ಜತೆ ಇದ್ದಾಗ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಕೈದಿಗಳಿಗೆ ರಾಜಾತಿಥ್ಯ
ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದ ಇವರನ್ನು ಕೋರ್ಟ್ ಅನುಮತಿ ಪಡೆಯದೇ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳರೋಗಿಯಾಗಿ ದಾಖ ಲಿ ಸ ಲಾಗಿತ್ತು . ಬೆನ್ನುನೋವಿನ ಚಿಕಿತ್ಸೆ ನೆಪದಲ್ಲಿ ಗೆಳತಿಯೊಂದಿಗೆ ಆಸ್ಪತ್ರೆಯ ಪ್ರತ್ಯೇಕ ಕೋಣೆ ಯಲ್ಲಿ ಕಾಲ ಕಳೆಯುತ್ತಿದ್ದಾಗ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ತಂಡಕ್ಕೆ ಆ.24ರಂದು ಸಿಕ್ಕಿಬಿದ್ದಿ ದ್ದರು. ‘ಭದ್ರತೆ ಒದಗಿಸುವಲ್ಲಿ ಕರ್ತ-ವ್ಯಲೋಪವಾಗಿದೆ’ ಎಂಬ ಆರೋಪದ ಮೇರೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೆಬಲ್ ಚಂದನ್ ಅವರನ್ನು ಎಸ್ಪಿ ಶೋಭಾರಾಣಿ ಅಮಾನತುಗೊಳಿಸಿದ್ದಾರೆ.
ಅಧೀಕ್ಷಕಿ ಎತ್ತಂಗಡಿ: ‘ಜಿಲ್ಲಾ ಕಾರಾಗೃಹದಲ್ಲಿ
ಲಂಚ ಕೊಟ್ಟರೆ ರಾಜಾತಿಥ್ಯ ಸಿಗುತ್ತದೆ’ ಎಂದು ಆರೋಪಿಸಿರುವ ವಿಚಾರಣಾ ಬಂದಿಗಳ ಪತ್ರ ಬಹಿರಂಗವಾಗಿದ್ದರಿಂದ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ. ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಆ.31ರಂದು ವರ್ಗಾಯಿಸಲಾಗಿದೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮುಗುಂ:ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಇಷ್ಟೆಲ್ಲ ಘಟನೆಗಳು ನಡೆದರೂ ವೈದ್ಯಕೀಯ ಶಿಕ್ಷಣ ಇಲಾಖೆ ಸಂಬಂದಿತ ಅಧಿಕಾರಿಗಳ ವಿರುದ್ದ ಯಾವುದೆ ಕ್ರಮ ತನಿಖೆಗೂ ಆದೇಶಿಸದೆ ಮುಗುಮ್ಮಾಗಿರುವುದು ಎಲ್ಲರ ಹುಬ್ಬೇರಿಸಿದೆ.
ವೈದ್ಯಕೀಯ ಶಿಕ್ಷಣ ಮಂತ್ರಿ ಡಾ.ಶರಣ ಪ್ರಕಾಶ್ ಪಾಟೀಲ ಇನ್ನಾದರೂ ಕ್ರಮಕ್ಕೆ ಮುಂದಾಗುವರೆ ನೋಡಬೇಕಿದೆ.
ಈಗಾಗಲೇ ಮಿಮ್ಸ್ ವೈದ್ಯಕೀಯ ಅಧೀಕ್ಷಕರ ವಿರುದ್ದ ಅದಕ್ಷ ಆಡಳಿತ ಹಾಗೂ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ವಾಸ್ತವ್ಯ ಇಲ್ಲದಿರುವುದು ಸೇರಿದಂತೆ ಹಲವು ಆರೋಪಗಳಿದ್ದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೌನ ಸಾರ್ವಜನಿಕರಿಗೆ ಅಚ್ಚರಿ ಎನಿಸಿದೆ.


