ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ಆಸ್ಪತ್ರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಸಂಬಂದ ರಿಟ್ ಅರ್ಜಿ ೧೮೬೨೨/೨೦೨೩ ರ ಸಂಬಂದ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶದಲ್ಲಿ ಅರ್ಜಿದಾರರಾದ ಸುಶೀಲ ಮತ್ತು ಇತರೆ ೨೪ ಮಂದಿ ತಮಿಳು ಕಾಲೋನಿ ನಿವಾಸಿಗಳನ್ನು ತೆರವುಗೊಳಿಸದಂತೆ ಆದೇಶ ಇದೆಯೆ ಹೊರತು ಉಳಿದವರನ್ನು ತೆರವುಗೊಳಿಸಲು ಯಾವುದೆ ಆದೇಶ ಇಲ್ಲವೆಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ ಆರ್ ರವೀಂದ್ರ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು.
ತಮ್ಮನ್ನು ತಮಿಳು ಕಾಲೋನಿಯಿಂದ ಸ್ಥಳಾಂತರಗೊಳಿಸದಂತೆ ಸುಶೀಲ ಮತ್ತು ಇತರೆ ೨೪ ಮಂದಿ ಸಲ್ಲಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಾತ್ರ ನ್ಯಾಯಲಯ ತಾತ್ಕಾಲಿಕ ತಡೆಯಾಜ್ನೆ ನೀಡಿದೆಯೆ ವಿನಾ ಇನ್ನುಳಿದ ತಮಿಳು ಕಾಲೋನಿ ನಿವಾಸಿಗಳನ್ನು ಹೊರಹಾಕಲು ಯಾವುದೆ ನ್ಯಾಯಾಲಯದ ಅಡೆತಡೆ ಇಲ್ಲವಾಗಿದೆ. ಮಂಡ್ಯ ಜಿಲ್ಲಾಧಿಕಾರಿಗಳು ಇನ್ನುಳಿದ ತಮಿಳು ನಿವಾಸಿಗಳನ್ನು ತೆರವುಗೊಳಿಸಬೇಕು ಎಂದರು.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಫ್ರೌಢ ಶಾಲೆಗೆ ಸೇರಿದ ಜಾಗವು ಒಟ್ಟು ಜಾಗವೂ 78 ಎಕರೆ ವಿಸ್ತೀರ್ಣವಿದ್ದು.
ಅತಿಕ್ರಮವಾಗಿ ೧೯ ಎಕರೆ ಭೂಮಿ ಒತ್ತುವರಿಗೊಳಿಸಿದ್ದು ಬಲಿಷ್ಠರು ಹಾಗೂ ತಮಿಳು ಕಾಲೋನಿ ನಿವಾಸಿಗಳು ವಾಸ ಮಾಡುತ್ತಿದ್ದಾರೆ ಸುಶೀಲ ಸೇರಿದಂತೆ 25 ಅರ್ಜಿದಾರರ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಗೆ ಸಂಬಂದಿಸಿದಂತೆ ಮಾತ್ರ 5- 9 2023 ರಂದು ಗೌರವಾನ್ವಿತ ನ್ಯಾಯಾಧೀಶರಾದ ಸೂರಜ್ ಗೋವಿಂದರಾಜರವರ ಏಕ ಸದಸ್ಯ ಪೀಠವು ಮುಂದಿನ ವಿಚಾರಣೆಯ ದಿನಾಂಕದವರೆಗೆ ಅರ್ಜಿದಾರರನ್ನು ಯಾವುದೇ ರೀತಿಯಲ್ಲಿ ತೆರವುಗೊಳಿಸದಂತೆ ಪ್ರತಿವಾದಿಗಳಿಗೆ ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡಿರುತ್ತಾರೆ.
ಸದರಿ ಅರ್ಜಿದಾರರನ್ನು ಹೊರತುಪಡಿಸಿ ಇನ್ಮುಳಿದವರನ್ನು ಸ್ಥಳಾಂತರಿಸಲು ಯಾವುದೆ ಅಡತಡೆ ಇಲ್ಲವಾಗಿದೆ. ಉಳಿದ ಎಲ್ಲಾ ಅತಿಕ್ರಮ ವಾಸ ಮಾಡುತ್ತಿರುವ ಹಾಗೂ ಅಕ್ರಮ ಖಾತೆ ಮಾಡಿಸಿಕೊಂಡು ವಾಸಿಸುವರ ಮೇಲೆ ಯಾವುದೇ ರೀತಿಯ ಹೈಕೋರ್ಟಿನ ತಡೆ ಆಜ್ಞೆ ಇರುವುದಿಲ್ಲ.
ಆದರೂ ಈ ಎಲ್ಲ ವಿಷಯದ ಬಗ್ಗೆ ದಾಖಲಾತಿಗಳನ್ನು ಸಲ್ಲಿಸಿದರು ವಿಳಂಬ ನೀತಿ ಅನುಸರಿಸುತ್ತಿರುವುದು ಅತಿಕ್ರಮ ಪ್ರವೇಶ ಮಾಡಿದ ನಿವಾಸಿಗಳ ಪರವಾಗಿ ಅಕ್ರಮವಾಸಿಗಳ ಪರವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಾವು ಉಪವಾಸ ಸತ್ಯಾಗ್ರಹ ಮಾಡಿದ ತಕ್ಷಣವೇ ಈ ಎಲ್ಲ ತಡೆಯಾಜ್ಞೆ ಗಳನ್ನು ತೆರವುಗೊಳಿಸುವಂತೆ ಅಡ್ವೀಕೇಟ್ ಜನರಲ್ ಜೊತೆ ಮಾತನಾಡಿ ಸದ್ಯದಲ್ಲೇ ತೆರವುಗೊಳಿಸುವ ಕಾರ್ಯಕ್ರಮ ಮಾಡುತ್ತೇವೆಂಬ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹಾಗೂ ಜಿಲ್ಲಾಧಿಕಾರಿಗಳು ಡಾ. ಕುಮಾರ್ ಭರವಸೆ ನೀಡಿದರೂ ಇದುವರೆಗೂ ಯಾವುದೇ ಪ್ರಕ್ರಿಯೆಗಳು ಕಂಡುಬಂದಿಲ್ಲ.
ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಗೋಷ್ಡಿಯಲ್ಲಿ ಆಟೋ ಕೃಷ್ಣಾ. ಮಂಚೇಗೌಡ.ಉಪಸ್ಥಿತರಿದ್ದರು.


