ಮಂಡ್ಯ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿರುವುದರಿಂದ ರೈತರು. ಕೃಷಿ ಕಾರ್ಮಿಕರು ಬ್ಯಾಂಕುಗಳಲ್ಲಿ ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ಎಲ್ಲಾ ರೀತಿಯ ಸಾಲಗಳನ್ನು ಮನ್ನ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ಮೂಲಕ ಒತ್ತಾಯಿಸಿದರು.
ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ರೈತ ಸಂಘದ ನೂರಾರು ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದರು.
ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲವೆಂದು ಘೋಷಣೆ ಆಗಿರುವುದರಿಂದ ರೈತರು ಪಡೆದಿರುವ ಸಾಲಗಳನ್ನು ಮನ್ನಾ ಮಾಡಬೇಕು.
ಹೊಸದಾಗಿ ರೈತರಿಗೆ ಬರ ಪರಿಹಾರ ಕೊಡಬೇಕು ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಐವತ್ತು ರೂಪಾಯಿ ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿಲ್ಲ.
ಆದ್ದರಿಂದ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟಿಸ ಬೇಕಾಗುತ್ತದೆ ಹಾಗೆ ಪ್ರತಿ ಕಬ್ಬಿಗೆ 8.5 ಇಳುವರಿ ಇದ್ದು ಪ್ರತಿ ಟನ್ ಕಬ್ಬಿಗೆ 5000 ನಿಗದಿ ಮಾಡಬೇಕು ಕೆ ಆರ್ಎಸ್ ನೀರನ್ನು ಮಂಡ್ಯ ಜಿಲ್ಲೆ ರೈತರಿಗೆ ಕೃಷಿಗೆ ಬಳಸಬೇಕಾಗಿ ಒತ್ತಾಯಿಸುತ್ತೇವೆ. ಆದರೆ ರಾಜ್ಯ ಸರ್ಕಾರ ಆರನೇ ಕುಡಿಯುವ ನೀರಿನ ಯೋಜನೆಯನ್ನು ಕೈ ಬಿಡಬೇಕು ಕೈ ಬಿಡದಿದ್ದ ಪಕ್ಷದಲ್ಲಿ ತೀವ್ರತರದ ರೈತ ಹೋರಾಟವನ್ನು ರಾಜ್ಯಾದ್ಯಂತ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಪದೇಪದೇ ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯೂ ಆರ್ ಸಿ ಮತ್ತು ಆದೇಶಗಳು ಜಿಲ್ಲಾ ರೈತ ಸಂಘ ಈ ನೀತಿಗಳ ವಿರುದ್ಧ ಹೋರಾಡಬೇಕಾಗಿದೆ ಪದೇ ಪದೇ ರೈತರಿಗೆ ಈ ನೀತಿಗಳು ಸುಟ್ಟ ಗಾಯಗಳ ಮೇಲೆ ಬರೆ ಹಾಕುವಂತೆ ಮಾಡುತ್ತಿವೆ ಕೆ ಆರ್ ಎಸ್ ಹೇಮಾವತಿ ಜಲಾಶಯ ಕೊಳ್ಳದ ಅಧ್ಯಯನ ತಂಡವನ್ನು ರಚಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವಾಸ್ತವ ಪರಿಸ್ಥಿತಿ ತಿಳಿಸಬೇಕು.
ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಂಘದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಅಕ್ರಮದ ವಿರುದ್ಧ ತಪ್ಪಿತಸ್ಥ ಅಧಿಕಾರಿಗಳು ಮತ್ತು ನಿರ್ದೇಶಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು ಪ್ರತಿಭಟನೆಯಲ್ಲಿ ಜಿಎಸ್ ಲಿಂಗಪ್ಪ ಜಿ ಎಸ್ ಕೆ ರವಿಕುಮಾರ್ ಅಣ್ಣಯ್ಯ ಬಾಲಕೃಷ್ಣ ಎಂ ಎಸ್ ವಿಜಯಕುಮಾರ್ ಜಿಲ್ಲೆಯ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದರು.


