Friday, October 16, 2026
spot_img

ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಯೊಂದೆ ದಾರಿ

ಉನ್ನತ ತನಿಖೆಯೊಂದೆ ದಾರಿ

ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಬಂದಪಟ್ಟದ್ದು ಎಂದು ಹೇಳಲಾದ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.ಅದರ ಸುತ್ತ ಬಣ್ಣ ಬಣ್ಣದ ಕತೆಗಳನ್ನು ಕಲ್ಪನೆಗೆ ತಕ್ಕಂತೆ ಹರಿಬಿಡಲಾಗಿದೆ.ಸಾರಾಂಶದಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಅಲ್ಪ ಸಂಖ್ಯಾತ ಸಮು್ಅಯದ ಮಹಿಳೆಯೊಂದಿಗೆ ವಿವಾಹೇತ್ತರ ಸಂಬಂದವೊಂದು ಇತ್ತು ಎಂದು ಸಾಧಿಸುವುದು ಈ ವಿಡಿಯೋ ನಿರ್ಮಾತೃಗಳ ಅಂತಿಮ ಉದ್ದೇಶವಾಗಿದೆ.

ಈ ನಡುವೆ ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸದರಿ ಸ್ಟಿಂಗ್ ಆಪರೇಷನ್ ನ ಸಮಗ್ರ ತನಿಖೆಗಾಗಿ ತಮ್ಮೆಲ್ಲ ಶ್ರಮ ಧಾರೆ ಎರೆಯುತ್ತಿದ್ದಾರೆ.

ಈ ಸ್ಟಿಂಗ್ ಆಪರೇಷನ್ ನ ಹಿಂದೆ ಇರುವ ವ್ಯಕ್ತಿ ಮಾಧ್ಯಮದ ಮುಸುಕಿನಲ್ಲಿ ಇರುವ ದಲ್ಲಾಳಿ ವ್ಯಕ್ತಿ ಎನ್ನಲಾಗಿದೆ.ಈ ಮನುಷ್ಯ ಈ ಹಿಂದೆ ಸಹ ಇಂಥದ್ದೆ ಕಾರಣಗಳಿಗೆ ಕುಖ್ಯಾತಿಯಾಗಿದ್ದು ಕನ್ನಡಿಗರು ಮರೆತಿಲ್ಲ.ಅಯಾ ಕಾಲಕ್ಕೆ ವಿವಿಧ ರಾಜಕೀಯ ಪಕ್ಷಗಳು ಈತನನ್ಮು ಬಳಸಿಕೊಂಡಿವೆ.ಈಗ ಸಿದ್ದರಾಮಯ್ಯ ವಿರೋಧಿಗಳ ಸರದಿಯಷ್ಟೆ.

ಈ ಹಿಂದೆ ಬೆಳಗಾವಿಯ ರಮೇಶ್ ಜಾರಕಿಹೋಳಿಗೆ ಸಂಬಂಧಿಸಿದ ಲೈಂಗಿಕ ವಿಡಿಯೋ ಒಂದು ಸ್ಟಿಂಗ್ ಆಪರೇಶನ್ ನಲ್ಲಿ ಹೊರಬಿದ್ದಿತು.ನಂತರದಲ್ಲಿ ರಮೇಶ್‌ಜಾರಕಿಹೊಳಿ ಚುನಾವಣೆಗಳಲ್ಲಿ ಆಯ್ಕೆಯಾದರೂ ಮೊದಲಿನಂತೆ ರಾಜಕಾರಣದ ಮುನ್ನಲೆಗೆ ಬರಲಾಗಲಿಲ್ಲ.ಮಾಜಿ ಸಚಿವ ಕೆ ಎನ್ ರಾಜಣ್ಣ ಸಹ ಈ ಸ್ಟಿಂಗ್ ಆಪರೇಷನ್ ನ ಮಿಕವೂ ಆಗಿದ್ದರು.ಜಾರಕಿ ಹೊಳಿ ಪ್ರಕರಣದಲ್ಲಿ ಭಾಗೀಯಾದ‌ ಕೆಲವರಿಗೆ‌ ಕಾಂಗ್ರೆಸ್ ಪಕ್ಷದ ಭಿ ಫಾರಂ ಸಹ ಸಿಕ್ಕಿದೆ ಎನ್ನಲಾಗಿದೆ.

ಈ ಹಿಂದೆ ಹಾಸನದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳನ್ನು ರಾಜಕೀಯ ಅನುಕೂಲಕ್ಕಾಗಿ ಬಳಸಿಕೊಂಡ ಯಾವುದೆ ಪಕ್ಷಗಳಿಗೆ ಈಗ ಈ ಸ್ಟಿಂಗ್ ಆಪರೇಷನ್ ಬಗ್ಗೆ ಅದರ ಮೇಲಿನ ಕ್ರಮದ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ.ಹಾಸನದ ಘಟನೆಯ ಬಗ್ಗೆ ಮೌನವಹಿಸಿದ್ದ ಕುಮಾರಸ್ವಾಮಿ ಈಗ ಛಂಗನೆ ಅಖಾಡಕ್ಕಿಳಿದಿರುವುದು ಘಟನೆಯ ಬಗೆಗಿನ ಅಸಮಾಧಾನಕ್ಕೋ..ಸಿದ್ದರಾಮಯ್ಯ ಮೇಲಿನ ಮಮಕಾರಕ್ಕೋ ಖಂಡಿತ ಅಲ್ಲ.
ಒಂದೇ ಏಟಿಗೆ ಡಿಕೆ ಶಿವಕುಮಾರ್ ರನ್ನು ಖಳನಾಗಿ ರೂಪಿಸುವ ಸಿದ್ದರಾಮಯ್ಯ ಯಾವ ವಿಚಾರ ಸಾರ್ವಜನಿಕ ಚರ್ಚೆಗೆ ಬಾರದಿರಲಿ ಎಂದು ಬಯಸುತ್ತಿದ್ದಾರೋ ಅದನ್ನು ಮುನ್ನಲೆಗೆ ತರುವುದಲ್ಲದೆ ಮತ್ತೇನಲ್ಲ.ಆ ಮೂಲಕ ಸದಾ ರಾಜಕೀಯವಾಗಿ ಚಾಲ್ತಿಯಲ್ಲಿರುವ ಪ್ರಯತ್ನವೆ ಆಗಿದೆ.

ಕರ್ನಾಟಕದ ಮಾಜೀ ಮುಖ್ಯಮಂತ್ರಿಯೊಬ್ಬರು ಪೋಸ್ಕೋ ಪ್ರಕರಣದಲ್ಲಿ ಸ್ವಲ್ಪದರಲ್ಲಿ ಜೈಲು ಪಾಲಾಗುವುದನ್ನು ತಪ್ಪಿಸಿಕೊಂಡಿದ್ದಾರೆ.(ಬಲವಂತದ ಕ್ರಮ ಬೇಡಾ ಎಂಬ ನ್ಯಾಯಾಲಯದ ಆದೇಶ ಮೇಲೆ.ಕಾನೂನು ಪ್ರಕಾರ ಕ್ರಮ ಜರುಗಿಸುವುದು ಅದ್ದೇಗೆ ಬಲವಂತದ ಕ್ರಮವಾದೀತು ಗೊತ್ತಿಲ್ಲ!) ಕರ್ನಾಟಕ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ೩೦೦ ಕ್ಕು ದೊಡ್ಡ ದೊಡ್ಡ ನಾಯಕರು ಈ ರೀತಿಯ ಲೈಂಗಿಕ ಹಗರಣಗಳು ವಿವಾಹೇತ್ತರ ಸಂಬಂದಗಳಲ್ಲಿ ಸಿಲುಕಿ ನ್ಯಾಯಾಲಯಗಳ ತಡೆಯಾಜ್ಞೆ ಪಡೆದು ಓಡಾಡುತ್ತಿದ್ದಾರೆ.

ಅವೆಲ್ಲ ಆಚೆ ಬಂದರೆ ಈ ಯಾವುದೆ ಪಕ್ಷಗಳಿಗೂ ಅವುಗಳ ಕುರಿತು ಮಾತನಾಡುವ ನೈತಿಕತೆಯೆ ಇರುವುದಿಲ್ಲ.ಎಲ್ಲ ಪಕ್ಷಗಳಲ್ಲು ಈ ರೀತಿಯ ನೂರಾರು ಕತೆಗಳು ಇರುವುದರಿಂದಲೆ ಅವು ತೆಪ್ಪಗಿವೆ.ಅಧಿಕಾರ ಹಂಚಿಕೆ ಆಪರೇಷನ್ ಕಮಲ ಇತ್ಯಾದಿಗಳ ಸಂಧರ್ಭದಲ್ಲಿ ಶಾಸಕರಿಗೆ ವಾರಗಟ್ಟಲೆ ಹೆಣ್ಣು ಹೆಂಡ ಪೂರೈಸಲಾಗುತ್ತದೆ.ಇಂಥದ್ದೆ ಸಂಧರ್ಭದ ವಿಡೀಯೋಗಳ ಮೂಲಕ ಭವಿಷ್ಯದುದ್ದಕ್ಕು ಅವರನ್ನು ಬ್ಲಾಕ್ ಮೇಲ್ ಮಾಡುತ್ತಾ ತಮಗೆ ಬೇಕಾದ ಕೆಲಸಗಳನ್ನು ಸಾಧಿಸಿಕೊಳ್ಳೋದೆ ಇದರ ಹಿಂದಿನ ಅಸಲಿಯತ್ತಾಗಿದೆ.ಈ ರೀತಿಯ ಕಚ್ಚೇ ಭದ್ರ ಇಲ್ಲದ ನಾಯಕರ ಕೈಗೆ ಅಧಿಕಾರ ಕೊಟ್ಟು ಆಳಿಸಿಕೊಳ್ಳುವ ಜನರ ಸ್ಥಿತಿ ನಿಜಕ್ಕು ಶೋಚನೀಯವಾಗಿದೆ.

ಈ ಸಂಧರ್ಭದಲ್ಲಿ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು.ಸ್ವತಃ ಅದರ ಹೈಕಮಾಂಡ್ ಯಾರೇ ಇದರಲ್ಲಿ ಭಾಗಿಯಾಗಿರಲಿ ಇದರ ಹೂರಣ ಆಚೆಗೆ ಬರಲೇಬೇಕು.ಇಲ್ಲದಿದ್ದರೆ ತಲೆಹಿಡುಕರು ದಲ್ಲಾಳಿಗಳು ಯಾವ ನೈತಿಕತೆ ಇಲ್ಲದ ಪುಡಾರಿಗಳು ರಾಜಕಾರಣದ‌ ಕೇಂದ್ರ ಸ್ಥಾನದಲ್ಲಿ ವಿಜೃಂಭಿಸುತ್ತಲೆ ಇರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!