ತನಿಖಾ ವರದಿ ಬಹಿರಂಗಕ್ಕೆ ರೈತ ನಾಯಕ ನಕಾರ!
ಮಂಡ್ಯ ಜಿಲ್ಲೆಯ ಜೀವನಾಡಿ ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರದ ಸಂಬಂದ ತನಿಖಾ ವರದಿಯನ್ನು ಮಾಧ್ಯಮದೆದುರು ಹಂಚಿಕೊಳ್ಳಲು ರೈತಸಂಘದ ಬಡಗಲಪುರ ನಾಗೇಂದ್ರ ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಡಿಯಲ್ಲಿ ನಕಾರ ವ್ಯಕ್ತಪಡಿಸಿದ್ದಾರೆ.
ಮೈಶುಗರ್ ಕಾರ್ಖಾನೆಯಲ್ಲಿ ಗುಜರಿ ಲೆಕ್ಕದಲ್ಲಿ ಬಿ ಮಿಲ್ ಮಾರಾಟ.ನಿವೃತ್ತ ಅಧಿಕಾರಿಗಳ ನೇಮಕ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದವು.ಮೈಶುಗರ್ ಅಧ್ಯಕ್ಷ ಸಿ.ಡಿ ಗಂಗಧರ್.ಎಂ.ಡಿ ಮಂಗೋಲ್ ದಾಸ್ ಕಾರ್ಖಾನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿರುವ ಆರೋಪ ಪ್ರಬಲವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಗಾಯಕವಾಡ್ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಿಸಿತ್ತು.
ಈ ಸಮಿತಿಯಲ್ಲಿ ಮೈಸೂರಿನ ನಾಗೇಂದ್ರ ಬಡಗಲಪುರರನ್ನು ಸಹ ಸದಸ್ಯರನ್ನಾಗಿಸಿತು.ಮಂಡ್ಯ ಜಿಲ್ಲೆಯ ರೈತ ನಾಯಕರನ್ನು ತನಿಖಾ ಸಮಿತಿಗೆ ಸೇರ್ಪಡೆಗೊಳಿಸದ ಕುರಿತು ಸ್ಥಳೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ನಡುವೆ ತನಿಖಾ ಸಮಿತಿ ವರದಿ ನೀಡಿದ್ದು.ಅನಧಿಕೃತ ಮೂಲಗಳ ಪ್ರಕಾರ ಬಹುತೇಕ ಆರೋಪಗಳು ಸಾಬೀತಾಗಿದ್ದು ಕ್ರಮದ ನಿರೀಕ್ಷೆಯಲ್ಲಿದೆ.
ವರದಿ ಜಾರಿಯಾಗದಂತೆ ಅದು ಅಧಿಕೃತವಾಗಿ ಬಹಿರಂಗವಾಗದಂತೆ ಜಿಲ್ಲೆಯ ಸಚಿವರೊಬ್ಬರು ಬ್ಯಾಟಿಂಗ್ ನಡೆಸುತ್ತಿದ್ದಾರೆಂಬ ಆರೋಪ ಮೈಶುಗರ್ ಪರವಾಗಿನ ಹೋರಾಟಗಾರದ್ದಾಗಿದೆ.
ಸಮಿತಿಯ ಸದಸ್ಯರಾಗಿ ವರದಿಯನ್ನು ಬಹಿರಂಗಪಡಿಸಿ ಎಂಬ ಮಾಧ್ಯಮದವರ ಪ್ರಶ್ನೆಗೆ ರೈತ ನಾಯಕ ಬಡಗಲಪುರ ನಾಗೇಂದ್ರ ನಕಾರ ತೋರಿದ್ದಾರೆ.
ನೀವು ಸರಕಾರಿ ನೌಕರರಲ್ಲ.ರೈತ ಪ್ರತಿನಿಧಿಯಾಗಿ ವರದಿಯನ್ನು ಬಹಿರಂಗಪಡಿಸಿ ಕ್ರಮಕ್ಕೆ ಆಗ್ರಹಿಸಲು ಏನು ತೊಂದರೆ ಎಂಬ ಪ್ರಶ್ನೆಗೆ ಅವರ ನಿರಾಕರಣೆಯೆ ಉತ್ತರವಾಗಿತ್ತು.


