Saturday, October 31, 2026
spot_img

ಬೈಕಲಿ ಬಂದ್ರೆ ₹300 ಬಸ್ಸಲಿ ಬಂದ್ರೆ ₹200

ಬೈಕ್ ಲಿ ಬಂದರೆ 300
ಬಸ್ಸಲಿ ಬಂದರೆ 200

ಮಂಡ್ಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಾಮಗಾರಿ ಉದ್ಘಾಟನೆಗೆ ಸಿದ್ದತೆ ನಡೆಸಿದೆ.

ಭರ್ತಿ ಸಾವಿರದ ಏಳುನೂರು ಕೋಟಿಯ ಹಲವು ಕಾಮಗಾರಿಗಳ ಮೂಲಕ ಮಾಜೀ ಮುಖ್ಯಮಂತ್ರಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಶಾಸಕರು ಬಯಸಿದ್ದಾರೆ.ಡಿಕೆಶಿ ಸಹ ಇದಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ.

ಮಂಡ್ಯ ವಿವಿ ಆವರಣದಲ್ಲಿ 25 ಸಾವಿರ ಕೂರಲು ಅಗತ್ಯ ತಯಾರಿ ನಡೆಸಲಾಗಿದೆ‌.ಕಾರ್ಯಕ್ರಮಕ್ಕೆ ಜನ ಸೇರಿಸಲು ಜಿಲ್ಲಾಡಳಿತದ ಜತೆಗೆ ಕಾಂಗ್ರೆಸ್ ಪಕ್ಷ ಸಹ ಕೈ ಜೋಡಿಸಿದೆ‌.

ಇದಕ್ಕಾಗಿ ಸಮಾರಂಭಕ್ಕೆ ಬೈಕಿನಲ್ಲಿ ಬರುವವರಿಗೆ ತಲಾ ಮೂರು ನೂರು ಬೈಕಿನಲ್ಲಿ ಇಬ್ಬರು ಬಂದರೆ ಐದು ನೂರು.ಇದರ ಬದಲು ಸಮಾರಂಭಕ್ಕೆ ಆಯೋಜಿಸಿರುವ ಬಸ್ಸಿನಲ್ಲಿ ಬಂದರೆ ಎರಡು ನೂರು ಗಳನ್ನು ನಿಗದಿಗೊಳಿಸಲಾಗಿದೆ.

ಒಟ್ಟಿನಲ್ಲಿ ಸಮಾರಂಭದ ಯಶಸ್ಸಿಗೆ ಜಿಲ್ಲಾಡಳಿತದ ಜತೆಗೆ ಕಾಂಗ್ರೆಸ್ ಸಹ ಟೊಂಕ ಕಟ್ಟಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!