Sunday, December 22, 2024
spot_img

ಮೈಸೂರು: ಕೆ ಆರ್ ಆಸ್ಪತ್ರೆ ವೈದ್ಯರ ವಿರುದ್ದ ಲೋಕಾ’ಗೆ ದೂರು ದಾಖಲು

ಬೆಂಗಳೂರ:ಜು.12.ಕರ್ತವ್ಯದ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಹಾಜರಿರದ ನಗರದ ಕೆಆರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸೇರಿದಂತೆ ಎಂಟು ಮಂದಿ ವೈದ್ಯರ ವಿರುದ್ದ ರಾಜ್ಯ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ. ಕಳೆದ ಜುಲೈ 09ರಂದು ರೋಗಿಯೊಬ್ಬರ ಆರೋಗ್ಯ ವಿಚಾರಿಸಲು ಕೆ ಆರ್ ಆಸ್ಪತ್ರೆಗೆ ಭೇಟಿ ನೀಡಿದಾಗ ಎಮ್ ಎಸ್ ಬಿ ವಾರ್ಡ್ ನಂ 5ರಲ್ಲಿ ಅಂದು ಕರ್ತವ್ಯದಲ್ಲಿರಬೇಕಾದ ವಿಭಾಗ ಮುಖ್ಯಸ್ಥ ಡಾ.ಚಂದ್ರಶೇಖರ ಸಹ ಪ್ರಾಧ್ಯಾಪಕ ಡಾ.ಲೋಕೇಶ್ ಹಿರಿಯ ನಿವಾಸಿ ವೈದ್ಯರಾದ ಡಾ.ನಿಶ್ಚಿತ ಡಾ.ಕುಶಾಲ್ ಕರ್ತವ್ಯದ ಸ್ಥಳದಲ್ಲಿ ಹಾಜರಿರಲಿಲ್ಲವೆಂದು ದೂರಿನಲ್ಲಿ ವಿವರಿಸಲಾಗಿದೆ.ಈ ಸಂಧರ್ಭದಲ್ಲಿ ಇಡೀ ವಾರ್ಡನ್ನು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಹಿಸಿದ್ದು ಜವಾಬ್ದಾರಿಯುತ ಸ್ಥಾನದಲ್ಲಿರಬೇಕಾದ ವೈದ್ಯರು ಕರ್ತವ್ಯದ ಸ್ಥಳದಲ್ಲಿ ಹಾಜರಿರದೆ ರೋಗಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.ವೈದ್ಯರು ಸ್ಥಳದಲ್ಲಿ ಇಲ್ಲದ ಕುರಿತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸೂಕ್ತ ಮಾಹಿತಿ ನೀಡದೆ ದಿಕ್ಕುತಪ್ಪಿಸಿ ಸದರಿ ವೈದ್ಯರು ತುರ್ತುಚಿಕಿತ್ಸಾ ಘಟಕದಲ್ಲಿ ಇದ್ದಾರೆಂದು ಸುಳ್ಳು ಮಾಹಿತಿ ನೀಡಿದ್ದಾರೆ.ತುರ್ತುಚಿಕಿತ್ಸಾ ಘಟಕದಲ್ಲಿ ಪರೀಶೀಲಿಸಿದಾಗ ಅಲ್ಲಿಯೂ ಸಹ ಈ ವೈದ್ಯರು ಕಂಡುಬಂದಿಲ್ಲ.ಇದಲ್ಲದೆ ತುರ್ತುಚಿಕಿತ್ಸಾ ಘಟಕದಲ್ಲಿ ಕರ್ತವ್ಯದಲ್ಲಿ ಇರಬೇಕಾದ ವೈದ್ಯರುಗಳಾದ ಡಾ.ಬಿಎನ್ ಅನಂದರವಿ ಡಾ.ದೀಪಾ ಡಾ.ಆರ್ ಡಿ ಮಂಜುನಾಥ್ ಸಹ ಸ್ಥಳದಲ್ಲಿ ಸ್ಥಳದಲ್ಲಿ ಕಂಡುಬಂದಿಲ್ಲ.ಈ ಕುರಿತು ಇನ್ನುಳಿದ ವೈದ್ಯರನ್ನು ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದ್ದಾರೆ. ಜೀವನ್ಮರಣದ ಹೋರಾಟ ನಡೆಸುವ ರೋಗಿಗಳಿಗೆ ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಬೇಕು.ಇಲ್ಲಿಯೆ ವೈದ್ಯರು ನಾಪತ್ತೆಯಾಗಿದ್ದಾರೆ.ಈ ಕುರಿತು ಜವಾಬ್ದಾರಿ ವಹಿಸಬೇಕಾದ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ನಂಜುಂಡಸ್ವಾಮಿಯು ನಿರ್ಲಕ್ಷ ವಹಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಈ ಘಟನೆಯ ನಂತರ ವಿಭಾಗ ಮುಖ್ಯಸ್ಥ ಡಾ.ಚಂದ್ರಶೇಖರ ರೋಗಿಗಳಿಗೆ ಬೆದರಿಕೆ ಹಾಕಿ ತಾನು ಚಿಕಿತ್ಸೆ ಮಾಡುವುದಿಲ್ಲ ಯಾರಿಗಾದರೂ ದೂರು ಕೊಡಿ.ಡಿಸ್ಚಾರ್ಜ್ ಮಾಡಿಕೊಂಡು ಹೋಗುವಂತೆ ಬೆದರಿಸಿದ್ದು ಈ ಬಗೆಯೂ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರಿನಲ್ಲಿ ಪ್ರಸ್ರಾಪಿಸಲಾಗಿದೆ.

ಕೆಲದಿನಗಳ ಹಿಂದಷ್ಟೆ ಶುಚಿತ್ವದ ಕೊರತೆ ಅಸಮರ್ಪಕ ಸೇವೆಯ ಕಾರಣಕ್ಕೆ ಲೋಕಾಯುಕ್ತ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ನಂತರವು ಅದೇ ಚಾಳಿ ಮುಂದುವರಿಸಿದ ವೈದ್ಯರ ವಿರುದ್ದ ಮತ್ತೊಂದು ದೂರು ದಾಖಲಾಗಿ ಕೆ ಆರ್ ಆಸ್ಪತ್ರೆ ಗಮನಸೆಳೆದಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!