ಒಳಸೇತುವೆ ನಿರ್ಮಾಣ ಕಾರಣ ಹಲವು ರೈಲುಗಳು ರದ್ದು
ಮಂಡ್ಯ ನಗರದಲ್ಲಿ ಒಳಸೇತುವೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ*ಕೆಲವು ರೈಲುಗಳು ರದ್ದು/ಭಾಗಶಃ ರದ್ದು/ಮಾರ್ಗ ಬದಲಾವಣೆ/ನಿಯಂತ್ರಣ ಮಾಡಲಾಗಿದೆ.ಈ ಸಂಬಂದ ರೈಲ್ವೇ ಇಲಾಖೆ ಪ್ರಕಟಣೆ ಹೊರಡಿಸಿದೆ
ಮಂಡ್ಯ ನಿಲ್ದಾಣ ಹತ್ತಿರದ ಲೆವಲ್ ಕ್ರಾಸ್ ಗೇಟ್– 73ರ ಕೆಳ ಸೇತುವೆ ಕಾಮಗಾರಿಯ ಸಲುವಾಗಿ ಜುಲೈ 04 ರಿಂದ 31 ರವರೆಗೆ ಈ ಕೆಳಗಿನ ಕೆಲವು ರೈಲುಗಳನ್ನು ರದ್ದು/ಭಾಗಶಃ ರದ್ದು/ಮಾರ್ಗ ಬದಲಾವಣೆ ಮತ್ತು ನಿಯಂತ್ರಿಸಲಾಗುತ್ತಿದೆ. ಅವುಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.
ರೈಲು ರದ್ದು:
- ಜುಲೈ 22 ರಂದು ಮೈಸೂರಿನಿಂದ ಪ್ರಾರಂಭಿಸುವ ರೈಲು ಸಂಖ್ಯೆ 06269 ಮೈಸೂರು – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ರದ್ದುಗೊಳಿಸಲಾಗುತ್ತಿದೆ.
ಭಾಗಶಃ ರದ್ದು:
- ರೈಲು ಸಂಖ್ಯೆ 06255 ಕೆ.ಎಸ್.ಆರ್ ಬೆಂಗಳೂರು – ಮೈಸೂರು ಮೆಮು ರೈಲನ್ನು ಜುಲೈ 17 ಮತ್ತು 22 ರಂದು ಮದ್ದೂರು-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರಿನಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.
- ರೈಲು ಸಂಖ್ಯೆ 06560 ಮೈಸೂರು – ಕೆ.ಎಸ್.ಆರ್ ಬೆಂಗಳೂರು ಮೆಮು ರೈಲನ್ನು ಜುಲೈ 17 ಮತ್ತು 22 ರಂದು ಮೈಸೂರು-ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಿಂದ ಹೊರಡಲಿದೆ.
- ರೈಲು ಸಂಖ್ಯೆ 06267 ಅರಸೀಕೆರೆ – ಮೈಸೂರು ಎಕ್ಸ್ಪ್ರೆಸ್ ವಿಶೇಷ ರೈಲನ್ನು ಜುಲೈ 22 ರಂದು ಹಾಸನ-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಹಾಸನದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.
- ರೈಲು ಸಂಖ್ಯೆ 06559 ಕೆ.ಎಸ್.ಆರ್ ಬೆಂಗಳೂರು – ಮೈಸೂರು ಮೆಮು ರೈಲನ್ನು ಜುಲೈ 26 ಮತ್ತು 31 ರಂದು ಮದ್ದೂರು-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.
- ರೈಲು ಸಂಖ್ಯೆ 06256 ಮೈಸೂರು – ಕೆ.ಎಸ್.ಆರ್ ಬೆಂಗಳೂರು ಮೆಮು ರೈಲನ್ನು ಜುಲೈ 26 ಮತ್ತು 31 ರಂದು ಮೈಸೂರು-ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಿಂದ ಹೊರಡಲಿದೆ.
ಮಾರ್ಗ ಬದಲಾವಣೆ:
- ಜುಲೈ 22 ಮತ್ತು 30 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16585 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಬಾನಸವಾಡಿ, ಹೆಬ್ಬಾಳ, ಯಶವಂತಪುರ ಎ ಕ್ಯಾಬಿನ್, ಚಿಕ್ಕ ಬಾಣಾವರ, ನೆಲಮಂಗಲ, ಹಾಸನ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬೆಂಗಳೂರು ಕಂಟೋನ್ಮೆಂಟ್, ಕೆ.ಎಸ್.ಆರ್ ಬೆಂಗಳೂರು, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು, ಕೃಷ್ಣರಾಜನಗರ ಮತ್ತು ಹೊಳೆ ನರಸಿಪುರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ತಡವಾಗಿ ಪ್ರಾರಂಭ/ನಿಯಂತ್ರಣ:
- ಜುಲೈ 23 ರಂದು ಮೈಸೂರಿನಿಂದ ಪ್ರಾರಂಭಿಸುವ ರೈಲು ಸಂಖ್ಯೆ 12610 ಮೈಸೂರು – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲನ್ನು ಮೂಲ ನಿಲ್ದಾಣದಿಂದ 45 ನಿಮಿಷ ತಡವಾಗಿ ಮತ್ತು 30 ನಿಮಿಷ ಕಾಲ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.
- ಜುಲೈ 23 ರಂದು ಬೆಂಗಳೂರಿನಿಂದ ಪ್ರಾರಂಭಿಸುವ ರೈಲು ಸಂಖ್ಯೆ 06559 ಕೆ.ಎಸ್.ಆರ್ ಬೆಂಗಳೂರು – ಮೈಸೂರು ಮೆಮು ರೈಲನ್ನು ಮೂಲ ನಿಲ್ದಾಣದಿಂದ 45 ನಿಮಿಷ ತಡವಾಗಿ ಮತ್ತು 30 ನಿಮಿಷ ಕಾಲ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.
- ಜುಲೈ 23 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06256 ಮೈಸೂರು – ಕೆ.ಎಸ್.ಆರ್ ಬೆಂಗಳೂರು ಮೆಮು ರೈಲನ್ನು 60 ನಿಮಿಷ ಕಾಲ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ.
- ಜುಲೈ 25 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06270 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ರೈಲನ್ನು ಮೂಲ ನಿಲ್ದಾಣದಿಂದ 70 ನಿಮಿಷ ಕಾಲ ತಡವಾಗಿ ಪ್ರಾರಂಭಿಸಲಾಗುತ್ತಿದೆ.
ಮಾರ್ಗ ಮಧ್ಯ ನಿಯಂತ್ರಣ:
- ಜುಲೈ 16 ರಂದು ಅಜ್ಮೀರ್ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16209 ಅಜ್ಮೀರ್ – ಮೈಸೂರು ಎಕ್ಸ್ಪ್ರೆಸ್ ರೈಲನ್ನು ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ತಲಾ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
- ಜುಲೈ 17 ರಂದು ಮಂಗಳೂರು ಸೆಂಟ್ರಲ್ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16586 ಮಂಗಳೂರು ಸೆಂಟ್ರಲ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಮಾರ್ಗ ಮಧ್ಯ 45 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
- ಜುಲೈ 17 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06270 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ರೈಲನ್ನು ಮಾರ್ಗ ಮಧ್ಯ 10 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
- ಜುಲೈ 21 ರಂದು ಅಜ್ಮೀರ್ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16209 ಅಜ್ಮೀರ್ – ಮೈಸೂರು ಎಕ್ಸ್ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
- ಜುಲೈ 22 ರಂದು ರೆಣಿಗುಂಟಾದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22136 ರೆಣಿಗುಂಟಾ – ಮೈಸೂರು ಎಕ್ಸ್ಪ್ರೆಸ್ ರೈಲನ್ನು ಮಾರ್ಗ ಮಧ್ಯ 75 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
- ಜುಲೈ 23 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06256 ಮೈಸೂರು – ಕೆ.ಎಸ್.ಆರ್ ಬೆಂಗಳೂರು ಮೆಮು ರೈಲನ್ನು ಮಾರ್ಗ ಮಧ್ಯ 10 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
- ಜುಲೈ 23 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17326 ಮೈಸೂರು – ಬೆಳಗಾವಿ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
- ಜುಲೈ 30 ರಂದು ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16021 ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ – ಮೈಸೂರು ಎಕ್ಸ್ಪ್ರೆಸ್ ರೈಲನ್ನು ಮಾರ್ಗ ಮಧ್ಯ 90 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
- ಜುಲೈ 30 ರಂದು ತಿರುಪತಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16220 ತಿರುಪತಿ – ಚಾಮರಾಜನಗರ ಎಕ್ಸ್ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.