ಪಾಂಡವಪುರ:ಜೂ.೧
‘ನಾನು ಅಮೇರಿಕಾಕ್ಕೆ ಕೆಲ ದಿನಗಳ ಕಾಲ ಹೋಗಿ ಬರ್ತೀನಿ. ನನ್ನ ಹೆಂಡತಿ, ಮಕ್ಕಳನ್ನು ಕಾಣುವುದಕ್ಕಾಗಿ ತೆರಳುತ್ತಿದ್ದೇನೆ’, ಹಾಗಾಗಿ 10 ದಿನಗಳ ಮಟ್ಟಿಗೆ ಅಮೇರಿಕಾ ಪ್ರವಾಸದಲ್ಲಿರುತ್ತೇನೆಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ಜನತೆ ತಿಳಿಸಿ, ಅಮೇರಿಕಾ ಪ್ರವಾಸ ಕೈಗೊಂಡಿದ್ದಾರೆ.
ಕ್ಷೇತ್ರದ ಜನತೆ ಏನೇ ಕೆಲಸ ಕಾರ್ಯಗಳು ಇದ್ದರೂ ನನ್ನ ಮೊಬೈಲ್ ಫೋನ್ ನಂಬರ್ ಗೆ ಕರೆ ಮಾಡಬಹುದು. ನನ್ನ ಅನುಪಸ್ಥಿತಿಯಲ್ಲಿ ರೈತ ಸಂಘಟನೆಯ ಮುಖಂಡರು, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ನನ್ನ ಪೋನ್ ನಂಬರ್ ಗೆ ಕರೆ ಮಾಡಿದರೆ ಅವರು ಅಟೆಂಡ್ ಮಾಡ್ತಾರೆ ಎಂದು ಕ್ಷೇತ್ರದ ಜನತೆಗೆ ತಿಳಿಸಿದ್ದಾರೆ.
ನನ್ನ ಜೊತೆಯಲ್ಲಿ ಮಾತಾಡಬೇಕೆಂದು ನೀವು ಹೇಳಿದರೆ ಅವರು ನನಗೆ ಕನೆಕ್ಟ್ ಮಾಡಿಕೊಡ್ತಾರೆ. ಎಲ್ಲರೂ
ಶಾಂತಿ ರೀತಿಯಲ್ಲಿ ಇರಿ, ವಾಪಸ್ಸು ಬಂದು ಎಲ್ಲರನ್ನೂ ಕಾಣ್ತೀನಿ ಎಂದು ಸ್ವತಃ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರೇ ವಿಡಿಯೋ ಸಂದೇಶ ನೀಡಿದ್ದಾರೆ.
ವಿದೇಶಕ್ಕೆ ತೆರಳುವ ಮುನ್ನ ಇಷ್ಟೂ ಮಾತುಗಳನ್ನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶಾಸಕರೇ ಬಿಡುಗಡೆ ಮಾಡಿದ್ದಾರೆ. ಆದರೆ ವಿದೇಶಕ್ಕೆ ತೆರಳಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರ ಹಾಗೂ ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಆದರೆ ಅಮೇರಿಕಾಕ್ಕೆ ಯಾವ ಕಾರಣಕ್ಕೆ ಹೋಗುತ್ತಿದ್ದೇನೆ ಎಂದು ಸ್ವತಃ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಪಷ್ಟಪಡಿಸಿರುವುದರಿಂದ ಇದು ಕೇವಲ 10 ದಿನದ ಭೇಟಿಯಷ್ಟೇ ಎಂದು ರೈತಸಂಘದ ಮುಖಂಡರು ಸ್ಪಷ್ಟಪಡಿಸಿದ್ದಾರೆ.