ರಂಗೇರಿರುವ ಮಂಡ್ಯ ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಈ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿ ಸಖತ್ ಸೌಂಡ್ ಮಾಡುತ್ತಿದೆ.ಅದರಲ್ಲೂ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡರಿಗೆ ಟಿಕೇಟ್ ಘೋಷಣೆ ಮಾಡಿರುವುದು ಕೂಡ ಅಚ್ಚರಿ ಮೂಡಿಸಿದೆ.
ನಾಗಮಂಗಲ ಕ್ಷೇತ್ರ ಜೆಡಿಎಸ್ ಭದ್ರಕೋಟೆ. ಬದಲಾಗಿ ಕಾಂಗ್ರೆಸ್ ನಾಯಕ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ಸ್ವಕ್ಷೇತ್ರ ಇಲ್ಲಿ ಬಿಜೆಪಿ ನಾಮಕಾವಸ್ಥೆ ಪಕ್ಷವಾಗಿಯಷ್ಟೆ ಗುರುತಿಸಿಕೊಂಡಿತ್ತು ಆದರೆ ಈ ಬಾರಿ ಇಲ್ಲೂ ಬಿಜೆಪಿ ಟಿಕೇಟ್ ಗಾಗಿ ಪ್ರಬಲ ಪೈಪೋಟಿ ಆಗಿದೆ ಇಷ್ಟೇ ಅಲ್ಲ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಉಂಟಾಗಿರುವ ಬಂಡಾಯದ ಬೇಗುದಿ ನಾಗಮಂಗಲದಲ್ಲಿಯೂ ಕಾಣುವ ಎಲ್ಲಾ ಲಕ್ಷಣಗಳು ಗೋಚರವಾಗುವ ಸಾಧ್ಯತೆಗಳು ದಟ್ಟವಾಗುತ್ತಿದೆ.
ಫೈಟರ್ ಬಂಡಾಯವೇಳುವರೇ?
ಬಿಜೆಪಿ ಸೇರಿದ ಆರಂಭದಲ್ಲಿ
ನಾನು ಫೈಟರ್ ಹೊರತು ಚೀಟರ್ ಅಲ್ಲ ಎನ್ನುತ್ತಲೇ ಮಾದ್ಯಮಗಳ ಸುದ್ದಿ ಮನೆಯಲ್ಲಿ ಕೆಲ ದಿನ ಚರ್ಚಿತ ವ್ಯಕ್ತಿಯಾಗಿ ರಾಜ್ಯದ ಗಮನ ಸೆಳೆದಿದ್ದ ಫೈಟರ್ ಅಲಿಯಾಸ್ ಮಲ್ಲಿಕಾರ್ಜುನ ರವಿ ನಾಗಮಂಗಲದಲ್ಲಿ ಬಿಜೆಪಿ ಪಕ್ಷಕ್ಕೆ ವೇಗ ಕೊಟ್ಟವರು
ಸಮಾಜ ಸೇವೆ ಹೆಸರಿನಲ್ಲಿ ಮೂಲಭೂತ ಸೌಕರ್ಯದ ಕುಡಿಯುವ ನೀರಿನ ಘಟಕ,ಸೇತುವೆಗಳನ್ನು ಸ್ವಂತ ಹಣದಲ್ಲಿ ನಿರ್ಮಾಣ, ಧಾರ್ಮಿಕ ಕೈಂಕರ್ಯಗಳಿಗೆ ಆರ್ಥಿಕ ನೆರವು ಹೀಗೆ ಹಲವಾರು ಕೆಲಸಗಳಿಂದ ಜನರ ಬಳಿ ತಲುಪಿದ್ದರು
ಅಲ್ಲದೆ ಕ್ಷೇತ್ರದಲ್ಲಿ ಸಾವಿರಾರು ಮಹಿಳೆಯರನ್ನು ಸೇರಿಸಿ ಹಾಲಿ ಮಾಜಿ ನಾಯಕರೆ ನಾಚುವಂತೆ ಬಿಜೆಪಿ ಸಮಾವೇಶ ಮಾಡಿ. ಕಣ್ಣಿಗೆ ಬಿದ್ದಿದ್ದರು.
ಅನಂತರದಲ್ಲಿ ಪಕ್ಷೇತರ ಸ್ಪರ್ಧೆ ಎಂದೆ ಅಬ್ಬರಿಸಿದ್ದ ಮಾಜಿ ಸಂಸದ ಶಿವರಾಮೇಗೌಡ ಮತ್ತು ಬೆಂಬಲಿಗರು ಬಿಜೆಪಿ ಟಿಕೇಟ್ ಮೇಲೆ ಕಣ್ಣಿಟ್ಟು ಪಕ್ಷ ಸೇರ್ಪಡೆ ಆಗಿದ್ದು ಫೈಟರ್ ಗೆ ನುಂಗಲಾರದ ತುತ್ತಾಗಿತ್ತು.
ರವಿ ತನಗಿರುವ ಪ್ರಭಾವ ಬೀರಿ ನನಗೆ ಟಿಕೇಟ್ ಕೊಡಬೇಕು ಎಂದು ಲಾಬಿ ನಡೆಸಿದರು.ಇನ್ನೇನು ಫೈಟರ್ ರವಿಗೆ ನಾಗಮಂಗಲ ಕ್ಷೇತ್ರದ ಬಿಜೆಪಿಯ ಭಿ ಫಾರಂ ಕೈಗೆ ಸಿಗುವದರೊಳಗೆ ಮೋದಿಯ ರೋಡ್ ಷೋ ವೇಳೆ ಮೋದಿಯೊಂದಿಗೆ ಕ್ಲಿಕ್ಕಿಸಿಕೊಂಡ ಚಿತ್ರವೆ ಫೈಟರ್ ರವಿಯ ಭಿ ಫಾರಂ ಕನಸಿಗೆ ಮುಳುವಾಯಿತು.ವಿಪಕ್ಷಗಳು ಮೀಡಿಯಾಗಳು ಮೋದಿಯೊಂದಿಗಿನ ಫೈಟರ್ ರವಿಯ ಚಿತ್ರವನ್ನು ಮುಂದಿಟ್ಟುಕೊಂಡು ಬಿಜೆಪಿಯ ರೌಡಿ ಸಂಪರ್ಕಗಳನ್ನು ಬಯಲಿಗೆಳೆದವು.
ಅಷ್ಟಕ್ಕೂ ಫೈಟರ್ ರವಿಯ ಹಿನ್ನೆಲೆ ಎಲ್ಲವನ್ಮು ನೋಡಿಯೆ ಬಿಜೆಪಿಗೆ ಪ್ರವೇಶ ನೀಡಲಾಗಿತ್ತು. ಬೆಟ್ಟಿಂಗ್ ಧಂಧೆಯಲ್ಲಿ ಚೆನ್ನಾಗಿ ಪಳಗಿದ್ದ ರವಿ ಬಿಜೆಪಿಗೆ ಸೂಕ್ತ ಅಭ್ಯರ್ಥಿ ಎಂದೆ ಪರಿಗಣಿಸಲಾಗಿತ್ತು.ಬಾವುಟ ಕಟ್ಟಲು ಜನರನ್ನು ಹುಡುಕುತ್ತಿದ್ದ ಬಿಜೆಪಿಗೆ ಭರ್ತಿ ಜೇಬಿನ ಫೈಟರ್ ರವಿ ಸಿಕ್ಕಿದ್ದು ನೋ ಬಾಲ್ ಗೆ ಸಿಕ್ಸರ್ ಹೊಡೆದಂಗೆ ಆಗಿತ್ತು.ಆದರೆ ಮೋದಿಯೊಂದಿಗಿನ ಫೈಟರ್ ರವಿ ಫೋಟೊ ಬಿಜೆಪಿಯ ಇಮೇಜ್ ಗೆ ಡ್ಯಾಮೇಜ್ ಆಗುತ್ತಿದ್ದಂತೆ ರವಿಯನ್ನು ದೂರವಿಡಲಾಯಿತು.ಅದೇ ಸಂಧರ್ಭಕ್ಕೆ ಎಲ್ ಆರ್ ಶಿವರಾಮೇಗೌಡರು ಸಿಕ್ಕರಾದರೂ ಅವರ ಬದಲು ಅಳಿಯ ಅಲ್ಲ ಮಗಳ ಗಂಡ ಎಂಬಂತೆ ಮಾಜಿ ಸಂಸದ ಶಿವರಾಮೇಗೌಡ ಬದಲಾಗಿ ಅವರ ಪತ್ನಿ ಸುಧಾ ಶಿವರಾಮೇಗೌಡಗೆ ಟಿಕೇಟ್ ನೀಡಿದೆ.
ಈಗ ಫೈಟರ್ ರವಿಯ ಬೆಂಬಲಿಗರು ಕಾರ್ಯಕರ್ತರು ಪಕ್ಷೇತರರಾಗಿ ಯಾದರೂ ನಿಲ್ಲಿ ಎಂದು ಸಲಹೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ
ಮಂಡ್ಯಕ್ಕೆ ಪ್ರಧಾನಿ ಮೋದಿ ಬಂದಾಗ ಕೈಮುಗಿದ ಘಟನೆಯಿಂದ ಹೊರಬರಲು ತಮ್ಮ ಮೇಲಿದ್ದ ರೌಡಿ ಶೀಟರ್ ಪಟ್ಟಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಆದೇಶ ತಂದರೂ ಬಿಜೆಪಿ ಟಿಕೇಟ್ ಗಿಟ್ಟಲಿಲ್ಲ ಎಂಬ ಕೊರಗು ಫೈಟರ್ ರವಿಗೆ ಇದೆ ಅದೇನೆ ಇರಲಿ ಶಿವರಾಮೇಗೌಡರೊಂದಿಗೆ ಸಂಧಾನದ ಮಾತುಕತೆ ಕೈಗೂಡಿಲ್ಲ ಎನ್ನಲಾಗಿದ್ದು ಬಂಡಾಯ ಸ್ಪರ್ಧೆಯ ಆಲೋಚನೆ ಕೂಡ ಇದೆ ಎನ್ನಲಾಗಿದೆ.ಆದರೆ ಬಂಡಾಯ ಸ್ಪರ್ದೆ ಮಾಡಿ ಫೀಲ್ಡಿನಲ್ಲಿ ಉಳಿಯುವುದು ಅಷ್ಟು ಸುಲಭವಲ್ಲ ಎಂಬುದು ರವಿಗೂ ಗೊತ್ತಿದೆ.ಅದಕ್ಕಾಗಿ ಕಡೇ ಗಳಿಗೆಯಲ್ಲಿ ಕಾಂಗ್ರೇಸಿಗರ ಸಹವಾಸ ಮಾಡಿ ಹಾಲೀ ಶಾಸಕ ಜ್ಯಾದಳದ ಸುರೇಶ್ ಗೌಡರನ್ನು ಕೆಡವಲು ಕೈ ಜೋಡಿಸಿದರೂ ಅಶ್ಚರ್ಯವಿಲ್ಲ.
ಂ