
ನಾಳೆ ನಗರದಲ್ಲಿ ಕೊರವಂಜಿ ಸಂಸ್ಕೃತಿ ಉತ್ಸವ
ರಾಜ್ಯಮಟ್ಟದ ಕೊರವಂಜಿ ಪ್ರಶಸ್ತಿ ಪ್ರದಾನ ಸಮಾರಂಭ
ಮAಡ್ಯ: ಜಿಲ್ಲಾ ಕುಳುವ ಸಮಾಜ ಹಾಗೂ ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ಡಿ.೨೮ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೊರವಂಜಿ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಹಾಗೂ ಎಕೆಎಂಎಸ್‌ನ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ತಿಳಿಸಿದ್ದಾರೆ.
೨೮ರ ಗುರುವಾರ ಬೆಳಿಗ್ಗೆ ೧೧.೩೦ಕ್ಕೆ ಕಾರ್ಯಕ್ರಮವನ್ನು ಚಂದ್ರವನ ಆಶ್ರಮದ ಪೀಠಾಧ್ಯಕ್ಷರಾದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯದಲ್ಲಿ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಸಂಗಪ್ಪ ತಂಗಡಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ವಿಧಾನಸಭೆಯ ಉಪಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಕೊರವಂಜಿ ಪ್ರಶಸ್ತಿ ಪ್ರಧಾನ ಮಾಡುವರು.
ಸಂಸ್ಕೃತಿ ಚಿಂತಕ ಡಾ.ಎಸ್.ಜಿ.ಸಿದ್ದರಾಮಯ್ಯ ಅವರು ನೆಲಮೂಲ ಸಂಸ್ಕೃತಿಯ ಪ್ರಧಾನ ಭಾಷಣ ಮಾಡುವವರು. ಬಳಿಕ ದಸಂಸದ ಹಿರಿಯ ಮುಖಂಡ ಗುರುಪ್ರಸಾದ್ ಕೆರಗೋಡು ಅವರು ವಿಶೇಷ ಉಪನ್ಯಾಸ ನೀಡಲಿದ್ದು, ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷರಾದ ಬಿ.ಎಸ್.ಶಿವಣ್ಣ ಆಶಯ ನುಡಿಯಾಡಲಿದ್ದಾರೆ ಹಾಗೂ ಮಂಡ್ಯ ಜಿಲ್ಲಾ ಕುಳುವ ಸಮಾಜದ ಅಧ್ಯಕ್ಷರಾದ ಕೃಷ್ಣಕುಮಾರ್ ಗಣಂಗೂರ್ ಅಧ್ಯಕ್ಷತೆ ವಹಿಸುವರು. ಕಿರಣ್‌ಕುಮಾರ್ ಕೊತ್ತಗೆರೆ ಪ್ರಸ್ತಾವಿಕ ನುಡಿ ಆಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಸದರಾದ ಸುಮಲತಾ ಅಂಬರೀಶ್, ಕರ್ನಾಟಕ ಕುಳುವ ಮಹಾಸಂಘ ರಾಜ್ಯಾಧ್ಯಕ್ಷರಾದ ಶಿವಾನಂದ ಭಜಂತ್ರಿ, ಮಾಜಿ ಶಾಸಕ ಬಿ.ಚಂದ್ರಣ್ಣ ದೇವನಹಳ್ಳಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ರವಿಕುಮಾರ್‌ಗೌಡ, ರಮೇಶ್‌ಬಾಬು ಬಂಡಿಸಿದೇಗೌಡ, ನರೇಂದ್ರಸ್ವಾಮಿ, ಕೆ.ಎಂ.ಉದಯ್, ಎಚ್.ಟಿ. ಮಂಜು, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ, ಹನೂರಿನ ಮಂಜುನಾಥ್, ಶ್ರವಣಬೆಳಗೊಳದ ಶಾಸಕ ಡಾ.ಸಿ.ಎನ್.ಬಾಲಕೃಷ್ಣ, ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಇಕ್ಬಾಲ್ ಹುಸೈನ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಅವರುಗಳು ಭಾಗವಹಿಸುವರು. ವಿಶೇಷವಾಗಿ ಎಕೆಎಂಎಸ್‌ನ ರಾಜ್ಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ವಿಶೇಷ ಅಹ್ವಾನಿತರಾಗಿದ್ದಾರೆ.
ಶಿಕಾರಿಪುರ ಕೆ.ವೆಂಕಟಪ್ಪ ವೇದಿಕೆಯಲ್ಲಿ ರಾಜ್ಯಮಟ್ಟದ ಕೊರವಂಜಿ ಸಂಸ್ಕೃತಿ ಉತ್ಸವ ನಡೆಯುತ್ತಿದ್ದು, ವೇದಿಕೆಯಲ್ಲಿ ರಾಜ್ಯಮಟ್ಟದ ಕೊರವಂಜಿ ಪ್ರಶಸ್ತಿ ಪುರಸ್ಕೃತರಾದ ಕೋಲಾರದ ಲಕ್ಷ್ಮಿಪತಿ, ಪತ್ರಿಕೋದ್ಯಮಿ ಗಾ.ರಾ.ಶ್ರೀನಿವಾಸ್, ಜನಪದ ಕ್ಷೇತ್ರದ ಸಿ.ಎನ್.ಮಂಜೇಶ್, ಚನ್ನಾಪುರ ಸುನಿಲ್ ಮಾನ್ಪಡೆ, ಕುಡಿಯರ ಮುತ್ತಪ್ಪ ಹಾಗೂ ಜೂಲಿಯಾನ ಪೆದ್ರು ಫರ್ನಾಂಡಿಸ್ ಸಿದ್ದಿ ಅವರುಗಳನ್ನು ಗೌರವಿಸಲಾಗುವುದು.
ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಜನಪದ ಕಲಾತಂಡಗಳ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಚಾಲನೆ ನೀಡುವರು ಎಂದು ಕಿರಣ್‌ಕುಮಾರ್ ಕೊತ್ತಗೆರೆ ತಿಳಿಸಿದ್ದಾರೆ.
—ಬಾಕ್ಸ್—-
ಭಾರತೀಯರು ನೆಲಮೂಲ ಸಂಸ್ಕೃತಿಯನ್ನು ಮರೆತು ವಲಸೆ ಸಂಸ್ಕೃತಿಯನ್ನು ವಿಜೃಂಭಿಸುವುದರ ಮೂಲಕ ನೆಲಮೂಲ ಅಸ್ಮಿತೆಯಾದ ಕೊರವಿ ತಾಯಿಯನ್ನು ಇಂದು ಮರೆತ್ತಿದ್ದೇವೆ ಇದನ್ನು ಅನಾವರಣಗೊಳಿಸಿ,
ಮೂಲನಿವಾಸಿಗಳಿಗೆ ಸ್ವಾಭಿಮಾನ ಮತ್ತು ಆತ್ಮಗೌರವನ್ನು ಮರಕಳಿಸುವ ಕೆಲಸವನ್ನು ಡ್ರೀಮ್ ಫೌಂಡೇಶನ್ ಟ್ರಸ್ಟ್ ಮೂಲಕ ಕೊರವಂಜಿ ಸಾಂಸ್ಕೃತಿಕ ಉತ್ಸವನ್ನು ಹಮ್ಮಿಕೊಳ್ಳಲಾಗಿದೆ
-ಕಿರಣ್‌ಕುಮಾರ್ ಕೊತ್ತಗೆರೆ,
ಅಧ್ಯಕ್ಷರು, ಡ್ರೀಮ್‌ಫೌಂಡೇಷನ್ ಟ್ರಸ್ಟ್ ಹಾಗೂ ಜಂಟಿ ಕಾರ್ಯದರ್ಶಿ, ಎಕೆಎಂಎಸ್.