Sunday, June 16, 2024
spot_img

ಪಟಾಕಿ ಅಂಗಡಿಗೆ ಅನುಮತಿ ಕಡ್ಡಾಯ:ಜಿಲ್ಲಾಧಿಕಾರಿ ಕುಮಾರ್

ಪಟಾಕಿ ಅಂಗಡಿ ತೆರೆಯಲು ಸಮಿತಿಯಿಂದ ಅನುಮತಿ ಕಡ್ಡಾಯ: ಡಾ: ಕುಮಾರ

ಮಂಡ್ಯ:ಆ.೧೪ ಪಟಾಕಿ ಅಂಗಡಿಗಳನ್ನು ತೆರೆಯಲು ತಾಲ್ಲೂಕು ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಟಾಕಿ ಅಂಗಡಿ ಅನುಮತಿ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ನವೆಂಬರ್ 11 ರಿಂದ 14 ರವರೆಗೆ ತಾತ್ಕಲಿಕ ಪಟಾಕಿ ಅಂಗಡಿ ತೆರೆಯಲು ತಾಲ್ಲೂಕು ಸಮಿತಿ ಸ್ಥಳ ನಿಗದಿಮಾಡಲಿದ್ದು, ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಅಂಗಡಿ ತೆರೆಯಲು ಅರ್ಜಿಗಳನ್ನು ಪರಿಶೀಲಿಸಿ ಅವಕಾಶ ನೀಡಲಾಗುವುದು ಎಂದರು.

ಶಾಶ್ವತವಾಗಿ ಕಾರ್ಯನಿರ್ವಹಿಸುತ್ತಿರುವ ಪಟಾಕಿ‌ ಅಂಗಡಿಗಳಿಗನ್ನು ಸಹ ಸಮಿತಿ ಪರಿಶೀಲಿಸಿ ಷರತ್ತುಗಳು ಪೂರೈಸಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಲಿದೆ ಎಂದರು.

ಅನಧಿಕೃತವಾಗಿ ರಸ್ತೆ ಬದಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ‌ ನಿಯಮಾನುಸಾರ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಟಾಕಿ‌ ಅಂಗಡಿ ತೆರೆಯಲು‌ ಸಮಿತಿಯಿಂದ ಅನುಮತಿ ಪಡೆಯುವವರೂ ಎಲ್ಲಾ ಷರತ್ತುಗಳನ್ನು ಪೂರೈಸಬೇಕು. ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಪಟಾಕಿ ಮಾರಾಟದ ದರಗಳನ್ನು ಅನಾವರಣಗೊಳಿಸಬೇಕು. ಅಂಗಡಿಯಲ್ಲಿ ಅಡಿಗೆ ಮಾಡುವುದು, ದೂಮಪಾನ ಮಾಡುವುದು ನಿಷೇಧಿಸಲಾಗಿದೆ ಎಂದರು.

ಮುನ್ನಚ್ಚರಿಕಾ ಕ್ರಮವಾಗಿ ಅಂಗಡಿ ಅವರು ಸಾವಿರ ಲೀಟರ್ ನೀರು, ಸ್ಯಾಂಡ್ ಬ್ಯಾಗ್, ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಯ ನಡುವೆ ಅಂತರ, ಅಂಗಡಿಯ ಒಳಗೆ ಹಾಗೂ ಹೊರಗೆ ತೆರಳಲು ಸ್ಥಳಾವಕಾಶ ಇರಬೇಕು. ಇವುಗಳನ್ನು ಸಮಿತಿ ಅವರು ಪರಿಶೀಲಿಸಿ ವರದಿ ನೀಡಬೇಕು ಎಂದರು.

ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ
ದೀಪಾವಳಿ ಹಬ್ಬದಲ್ಲಿ ಸಾರ್ವಜನಿಕರು ಹಸಿರು ಪಟಾಕಿ ಮಾತ್ರ ಖರೀದಿಸಬೇಕು. ಪಟಾಕಿ ಪ್ಯಾಕ್ ಮೇಲೆ ಸಿ.ಎಸ್.ಐ.ಆರ್ ಲೋಗೋ ಮತ್ತು ಸಂಖ್ಯೆ ಇರುವುದನ್ನು ಪರಿಶೀಲಿಸಿಕೊಳ್ಳಿ ಎಂದರು.

ಇತ್ತೀಚಿನ ದಿನಗಳಲ್ಲಿ ಪಟಾಕಿಗಳ ಸಿಡಿಸುವುದರಿಂದ ಪರಿಸರ ಮಾಲಿನ್ಯ ಹಾಗೂ ಅನೇಕ ರೀತಿ ಅವಘಡಗಳು ಸಂಬವಿಸುತ್ತಿದ್ದು ಅದನ್ನು ನಿಯಂತ್ರಿಸುವ ಸಲುವಾಗಿ ಅನೇಕ ರೀತಿಯ ಕಾನೂನು ಕ್ರಮಗಳನ್ನು ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಪಟಾಕಿ ಮಾಲೀಕರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಕೆ.ಪಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್. ಹೆಚ್ ನಿರ್ಮಲ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!