ಪ್ರಚಾರಕ್ಕೆ ಅಡ್ಡಿ:ರವೀಂದ್ರ ಶ್ರೀಕಂಠಯ್ಯ ವಿರುದ್ದ ಆಕ್ರೋಶ
ಮಂಡ್ಯ: ಮೇ.4. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮೇಳಾಪುರ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವಾಗ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಅಡ್ಡಿಪಡಿಸಿದ್ದು ಇದನ್ನು ಖಂಡಿಸುವುದಾಗಿ ಪಕ್ಷೇತರ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಡಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ಮೇ.3ರಂದು ವಿಧಾನಸಭಾ ವ್ಯಾಪ್ತಿಯ ಮೇಳಾಪುರ ಗ್ರಾಮದಲ್ಲಿ ಪ್ರಚಾರ ಮಾಡುವಾಗ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಎಂದು ಹೇಳಿಕೊಂಡ ಕೆಲವರು ಪಾನಮತ್ತರಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ದ ಪ್ರಚಾರದಲ್ಲಿ ಪ್ರಸ್ತಾಪಿಸದಂತೆ ಅಡ್ಡಿಪಡಿಸಿದರು.ಕಡೆಗೆ ಸ್ಥಳೀಯರು ಮಧ್ಯಪ್ರವೇಶಿಸಿ ಸಂಘರ್ಷ ತಪ್ಪಿಸಿದರು.ರವೀಂದ್ರ ಶ್ರೀಕಂಠಯ್ಯ ಕ್ಷೇತ್ರದಲ್ಲಿ ರೌಡಿ ಎಮ್ಮೆಲ್ಲೆಯಂತಾಗಿದ್ದು ಬೆಂಬಲಿಗರ ಮೂಲಕ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ.ಇದೇ ಧೋರಣೆ ಮುಂದುವರಿದಲ್ಲಿ ನಮ್ಮ ಬೆಂಬಲಿಗರು ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ತಿರುಗೇಟು ನೀಡಿದರು.ಗೋಷ್ಠಿಯಲ್ಲಿ ಲಂಕೇಶ್ ಮಂಗಲ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು