
ಮಂಡ್ಯ: ತಮಿಳು ಕಾಲೋನಿ ಸ್ಥಳಾಂತರಕ್ಕೆ ಅಗತ್ಯ ಕ್ರಮ
ಮಂಡ್ಯ: ಜೂ.೨೭.ಮಂಡ್ಯ ಆಸ್ಪತ್ರೆಗೆ ಹೊಂದಿಕೊಂಡತೆ ಇರುವ ತಮಿಳು ಕಾಲೋನಿ ಸ್ಲಂ ನಿವಾಸಿಗಳನ್ನು ನೂತನ ವಸತಿಗೃಹಗಳಿಗೆ ಶೀಘ್ರವಾಗಿ ಸ್ಥಳಾಂತರಿಸಿ ಆಸ್ಪತ್ರೆಯ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಭರವಸೆ ನೀಡಿದ್ದಾರೆ.
ಜಿಪಂ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಪರೀಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಂಡ್ಯ ಜಿಲ್ಲಾಸ್ಪತ್ರೆಯನ್ನು ಉನ್ನತ ದರ್ಜೆಗೆ ಏರಿಸಬೇಕಿದೆ.ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದು ತುರ್ತುಚಿಕಿತ್ಸಾ ಕೇಂದ್ರ ಒಂದು ಸಾವಿರ ಬೆಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಸಾಕಷ್ಟು ಭೂಮಿಯ ಅವಶ್ಯಕತೆ ಇದೆ.ತಮಿಳು ಕಾಲೋನಿ ಸ್ಥಳಾಂತರಕ್ಕೆ ಕೈಗೊಂಡ ಕ್ರಮಗಳ ಕುರಿತು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ತಮಿಳು ಕಾಲೋನಿಯ ನಿವಾಸಿಗಳಿಗಾಗಿ ಮಂಡ್ಯದ ವಿವೇಕಾನಂದ ಬಡಾವಣೆಯಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಈ ನಿವಾಸಿಗಳನ್ನು ಸ್ಥಳಾಂತರಿಸಿ ಸದರಿ ಭೂಮಿಯನ್ನು ಮೂಲ ಮಾಲೀಕರಾದ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸುವಂತೆ ರಾಜ್ಯ ಹೈಕೋರ್ಟ್ ಆದೇಶ ಮಾಡಿದೆ.ಆದಾಗಿಯೂ ಈವರೆಗೆ ಈ ಆದೇಶ ಜಾರಿಯಾಗಿಲ್ಲ.ಪರಿಣಾಮವಾಗಿ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದೆ ಈ ಕುರಿತು ಸದ್ಯದಲ್ಲೆ ಅಗತ್ಯ ಕ್ರಮಕೈಗೊಂಡು ತಮಿಳು ಕಾಲೋನಿ ನಿವಾಸಿಗಳನ್ನು ಸ್ಥಳಾಂತರಿಸಲಾಗುವುದೆಂದು ತಿಳಿಸಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಗಣಿಗ ರವಿಕುಮಾರ್ ಅಗತ್ಯ ಮೂಲಭೂತ ಸೌಕರ್ಯ ಒದಗಿಸದಿದ್ದರೆ ನಿವಾಸಿಗಳು ಸ್ಥಳಾಂತರಕ್ಕೆ ಒಪ್ಪುವುದಿಲ್ಲ ಅಗತ್ಯ ಸೌಲಭ್ಯ ಒದಗಿಸಿ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಸೂಚಿಸಿದರು
2008ರಲ್ಲಿ ಬೆಂಕಿ ಅನಾಹುತಕ್ಕೆ ಸಿಲುಕಿ ಮಂಡ್ಯ ಜಿಲ್ಲಾ ಆಸ್ಪತ್ರೆ ಪಕ್ಕದ ತಮಿಳು ಕಾಲೋನಿಯ ನಾಲ್ಕುನೂರಕ್ಕು ಹೆಚ್ಚು ಗುಡಿಸಲುಗಳು ಬೆಂಕಿಗಾಹುತಿಯಾಗಿದ್ದವು.ಸ್ಲಂ ನಿವಾಸಿಗಳು ವಾಸಿಸುತ್ತಿರುವ ಭೂಮಿ ಸರಕಾರಿ ಆಸ್ಪತ್ರೆಗೆ ಸೇರಿದ್ದು ಎಂದು ಕೆಲವರು ರಾಜ್ಯ ಹೈಕೋರ್ಟ್ ಮೊರೆ ಹೊಕ್ಕಿದ್ದರು.ಹೈಕೋರ್ಟ್ ಅರ್ಜಿದಾರರ ವಾದವನ್ನು ಎತ್ತಿಹಿಡಿದಿತ್ತು.ಸದ್ಯ ಈ ನಿವಾಸಿಗಳಿಗಾಗಿ ವಿವೇಕಾನಂದ ಬಡಾವಣೆಯಲ್ಲಿ 512ಮನೆಗಳನ್ನು ನಿರ್ಮಿಸಿದ್ದು.ನಿವಾಸಿಗಳು ನೂತನ ವಸತಿಗೃಹಕ್ಕೆ ತೆರಳಲು ನಿರಾಕರಿಸಿದ್ದಾರೆ