ಲೋಕಾಯುಕ್ತ ಬಲೆಗೆ ಬಿದ್ದ ತಾಲೋಕು ಸರ್ವೇಯರ್
ಮಂಡ್ಯ:ನ.18.ಸರ್ವೇ ಮಾಡಿ ವರದಿ ನೀಡಲು 1 ಸಾವಿರ ರೂ. ಬೇಡಿಕೆಇಟ್ಟಿದ್ದ ತಾಲೋಕು ಸರ್ವೇಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಡ್ಯ ತಾಲ್ಲೂಕು ಎಡಿಎಲ್’ಆರ್ ಕಚೇರಿ ಸರ್ವೇಯರ್ ಶಿವಕುಮಾರ್ ಕೆ.ಎನ್ ಲೋಕಾಯುಕ್ತ ಬಲೆಗೆ ಬಿದ್ದ ಮಿಕವಾಗಿದ್ದಾರೆ.
ಫಿರ್ಯಾದಿ ರೈತ ಡಣಾಯಕನಪುರ ರವಿಕುಮಾರ್ ಡಿ ಎಸ್ ರವರಿಂದ
ಪಾಂಡವಪುರ ಬಸ್ ನಿಲ್ದಾಣದಲ್ಲಿ ರೈತನಿಂದ ಹಣ ಸ್ವೀಕರಿಸುವಾಗ ಸರ್ವೇಯರ್ ಶಿವಕುಮಾರ್ ಬಲೆಗೆ ಬಿದ್ದಿದ್ದಾರೆ.
ಲಂಚದ ಹಣ ಪಡೆಯಲು ದೂರುದಾರ ರೈತನನ್ನು ಪಾಂಡವಪುರ ಕ್ಕೆ ಬಾ ಎಂದು ರೈತನನ್ನು ಕರೆಸಿಕೊಂಡಿದ್ದ ಅಧಿಕಾರಿಯನ್ನು ಸಾಕ್ಷ್ಯಾ ಸಮೇತ ಲೋಕಾಯುಕ್ತ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಕಾಯುಕ್ತ ಎಸ್ ಪಿ ಸಜೀತ್ ರವರ ನೇತೃತ್ವ ದಲ್ಲಿ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ ಮತ್ತು ಮೋಹನ್ ರೆಡ್ಡಿ ಸಿಬ್ಬಂದಿಗಳಾದ ಶರತ್ ಶಂಕರ್ ಮಹದೇವಸ್ವಾಮಿ ಕಾರ್ಯಾಚರಣೆಯಲ್ಲಿ ಭಾಗೀಯಾಗಿದ್ದು ತನಿಖೆ ಮುಂದುವರಿದಿದೆ