Saturday, July 27, 2024
spot_img

ಮಂಡ್ಯ :ಅಕ್ರಮ ನಿರ್ಮಾಣ.ನಕ್ಷೇ ಉಲ್ಲಂಘನೆ ಅಬಾಧಿತ.ನಗರಸಭೆಲಿ ಕೇಳೋರಿಲ್ಲ

ಮಂಡ್ಯ: ಅಕ್ರಮ ನಿರ್ಮಾಣ ಅಭಾಧಿತ. ಹೇಳೋರಿಲ್ಲ ಮಂಡ್ಯ ನಗರಸಭೆಯಲಿ

ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ನಿರ್ಮಾಣ ನಕ್ಷೇ ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸುವ ಪ್ರವೃತ್ತಿ ಎಗ್ಗಿಲ್ಲದೆ ಸಾಗಿದೆ.ಸಾಮಾನ್ಯವಾಗಿ ಕಟ್ಟಡಗಳನ್ನು ನಿರ್ಮಿಸುವವರು ನಗರಸಭೆಯಿಂದ ಪರವಾನಗಿ ಪಡೆದು ಕಟ್ಟಡಗಳನ್ನು ನಿರ್ಮಿಸುತ್ತಾರಾದರೂ ಅನುಮೋದಿತ ನಕ್ಷೇಗೂ ನಿರ್ಮಾಣವಾಗುವ ಕಟ್ಟಡಕ್ಕು ಅಜಗಜಾಂತರವಿರುತ್ತದೆ.

ನಿರ್ಮಾಣದ ಪರವಾನಗಿ ನೀಡಿದ ನಂತರ ನಗರಸಭೆಯ ಇಂಜನೀಯರುಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರೀಶೀಲಿಸಬೇಕು.ನಕ್ಷೇ ಉಲ್ಲಂಘನೆಯಾಗದಂತೆ ಎಚ್ಚರಿಸಬೇಕು.ನಗರಸಭೆಯ ಕರ ವಸೂಲಿಗಾರರು ಕಂದಾಯಾಧಿಕಾರಿಗಳು ಎಂಜಿನಿಯರುಗಳು ಈಬಗ್ಗೆ ನಿಗಾ ಇಟ್ಟಿರಬೇಕು.ಆದರೆ ನಗರಸಭೆ ಅಧಿಕಾರಿಗಳು ಪರವಾನಗಿ ಕೊಟ್ಟ ಮೇಲೆ ಇತ್ತ ತಲೆ ಹಾಕಿಯೂ ಮಲಗುವುದಿಲ್ಲ.ಪರಿಣಾಮ ನಕ್ಷೇ ಉಲ್ಲಂಘನೆ ಮಾತ್ರವಲ್ಲದೆ ಸಜ್ಜವನ್ನು ರಸ್ತೆಗೆ ಸೇರಿಸಿ ವಿಸ್ತರಿಸುವುದು.ಚರಂಡಿಯನ್ನು ಅಕ್ರಮಿಸಿ ಕಟ್ಟಡ ನಿರ್ಮಿಸುವುದು.ಸೆಟ್ ಬ್ಯಾಕ್ ಬಿಡದಿರುವುದು ಸಾಮಾನ್ಯ ಸಂಗತಿಯಾಗಿದೆ.ಕೆಲವೊಮ್ಮೆ ನಾಗರೀಕರು ಅಕ್ರಮ ನಿರ್ಮಾಣದ ವಿರುದ್ದ ದನಿ ಎತ್ತಿದರೂ ಅಕ್ರಮ ಕಟ್ಟಡಗಳ ನಿರ್ಮಾತೃಗಳು ಆ ದನಿಯನ್ನು ಹತ್ತಿಕ್ಕುತ್ತಾರೆ.ಪರಿಣಾಮ ರಸ್ತೆಗಳಲ್ಲಿ ವಾಹನಗಳು ದಟ್ಟಣೆಯಾಗಿ ಜನಸಾಮಾನ್ಯರು ಬಡಾವಣೆಗಳಲ್ಲಿ ವಾಸಿಸಲು ಆಗದಂತೆ ಗೌಜು ಸೃಷ್ಟಿಯಾಗುತ್ತದೆ.ಕಟ್ಟಡ ನಿರ್ಮಾಣದ ಮೂಲ ವಿನ್ಯಾಸದಲ್ಲಿ ಪಾರ್ಕಿಂಗ್ ಸ್ಥಳ ತೋರಿಸಿದ್ದರು ವಾಸ್ತವದಲ್ಲಿ ಅದು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತದೆ.ನಾಗರೀಕರು ವಾಸಿಸುವ ಬಡಾವಣೆಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಅನುಮತಿ ನೀಡುವಾಗ ಸಾರ್ವಜನಿಕ ಅಹವಾಲು ಆಲಿಸುವ ಪರಿಪಾಠ ಇಲ್ಲದರ ಪರಿಣಾಮ ನಾಗರೀಕ ಬಡಾವಣೆಗಳಲ್ಲಿ ನರ್ಸಿಂಗ್ ಹೋಂಗಳು ವಾಣಿಜ್ಯ ಸಂಕೀರ್ಣಗಳು ಎಗ್ಗಿಲ್ಲದೆ ನಿರ್ಮಾಣಗೊಳ್ಳುತ್ತಿವೆ.ಇದರಿಂದಾಗಿ ಸಂಚಾರ ದಟ್ಟಣೆ ಟ್ರಾಫಿಕ್ ಸಮಸ್ಯೆ ನಿತ್ಯಸಂತೆಯಾಗಿದೆ.

ಸದ್ಯ ಮಂಡ್ಯ ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಇರುವ ಏಕೈಕ ಇಂಜನೀಯರು ೩೫ವಾರ್ಡುಗಳನ್ಮು ನಿಭಾಯಿಸಬೇಕಿದೆ.ಅಕ್ರಮ ಕಟ್ಟಡಗಳ ನಕ್ಷೇ ಉಲ್ಲಂಘನೆಗೆ ಬ್ರೇಕ್ ಹಾಕದಿದ್ದರೆ ಮಂಡ್ಯ ನಗರ ಕೆಲವೆ ವರ್ಷಗಳಲ್ಲಿ ಕಾಂಕ್ರೀಟ್ ಸ್ಲಂ ಆಗಿ ಪರಿವರ್ತನೆಯಾಗುವುದರಲ್ಲಿ ಅಶ್ವರ್ಯವಿಲ್ಲ.ನೂತನ ಶಾಸಕ ಗಣಿಗ ರವಿಕುಮಾರ್ ನಗರಸಭೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಲು ಪ್ರಯತ್ನಿಸಿದರೆ ಮಂಡ್ಯ ನಗರವನ್ನು ಚಂದಗಾಣಿಸುವುದು

ಕಷ್ಟವೇನಲ್ಲ.ದಶಕಗಳಿಂದ ಇಲ್ಲಿಯೆ ಬೇರು ಬಿಟ್ಟಿರುವ ಸಿಬ್ಬಂದಿ ಸ್ಥಳೀಯ ಅರಾಜಕತೆಗೆ ಒಗ್ಗಿಹೋಗಿದ್ದಾರೆ.ಅಧ್ಯಕ್ಷರೆ ಇಲ್ಲದೆ ಸೊರಗಿರುವ ನಗರಸಭೆಯ ಆಡಳಿತಕ್ಕೆ ನೂತನ ಶಾಸಕರು ಚುರುಕು ಮುಟ್ಟಿಸಿ ಅಕ್ರಮ ನಿರ್ಮಾಣಕ್ಕೆ ತಡೆಯೊಡ್ಡುವರೆ ಕಾದು ನೋಡಬೇಕಿದೆ.

ನಗರದ ಅಭಿವೃದ್ದಿ ಕನಸು ಕಾಣುತ್ತಿರುವ ಶಾಸಕ ಗಣಿಗ ರವಿಕುಮಾರ್ ನಗರಸಭೆಯ ಆಡಳಿತ ವರ್ಗವನ್ನು ಹಿಡಿತಕ್ಕೆ ತಂದು ನಗರದ ಅಭಿವೃದ್ದಿಯನ್ನು ಸಾಧಿಸುವುದು ಈಗ ಆದ್ಯತೆಯ ವಿಷಯವಾಗಬೇಕಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!