ಹೇಗಿದೆ ಮಂಡ್ಯ ವಿಧಾನಸಭಾ ರಾಜಕಾರಣ.ಒಂದು ಸುತ್ತು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳನ್ನು ದಳಪತಿಗಳಿಗೆ ನೀಡಿ ಕುಮಾರಸ್ವಾಮಿಗೆ ಮುಖ್ಯಮಂತ್ರಿಯ ಕುರ್ಚಿ ಹತ್ತಿರವಾಗಿಸಿದ ಮಂಡ್ಯ ಜಿಲ್ಲೆಯ ರಾಜಕಾರಣ ಹೇಗಿದೆ ನೋಡೊಣಾ ಬನ್ನೀ.ಒಂದು ಕಾಲಕ್ಕೆ ಬಾವುಟ ಕಟ್ಟಲು ಕಾರ್ಯಕರ್ತರಿಲ್ಲದೆ ಪರದಾಡುತ್ತಿದ್ದ ಬಿಜೆಪಿ ಈಗ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿ ಬೆಳೆದಿದೆ.ಬಹುತೇಕ ಜನತಾದಳದಲ್ಲಿನ ಅವಕಾಶವಂಚಿತರೆ ಬಿಜೆಪಿಯ ಬಾವುಟ ಹಿಡಿದ್ದಿದ್ದಾರೆ.ಮದ್ದೂರು ಸಾದೊಳಲು ಸ್ವಾಮಿ.ಮಂಡ್ಯದ ಅಶೋಕ್ ಜಯರಾಂ ಕೆ ಆರ್ ಪೇಟೆಯ ಕೆ.ಸಿ.ನಾರಯಣಗೌಡ ಈ ಪೈಕಿ ಹೆಸರಿಸಬಹದು.ತನ್ನ ಭದ್ರಕೋಟೆ ಎಂದೇ ಭಾವಿಸುವ ಜನತಾದಳ ಇಲ್ಲಿನ ಏಳು ಕ್ಷೇತ್ರಗಳಿಗೂ ಅಭ್ಯರ್ಥಿಯನ್ನು ಘೋಷಿಸಿದೆ. ಸದ್ಯ ಮಂಡ್ಯ ವಿಧಾನಸಭಾ ಕ್ಷೇತ್ರದ ಸದ್ಯದ ವಾತವಾರಣ ನೋಡೊಣಾ ಬನ್ನೀ
.ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಹಾಲೀ ಶಾಸಕ ಎಂ.ಶ್ತೀನಿವಾಸ್ ಗೆ ಟಿಕೇಟ್ ಘೋಷಣೆಯಾಗಿದ್ದರು ಎಂ.ಶ್ರೀನಿವಾಸ್ ವಯೋಮಾನದ ಕಾರಣಕ್ಕೆ ಪಕ್ಷದ ಹುರಿಯಾಳು ಬದಲಾಗುವ ನಿರೀಕ್ಷೆ ಪಕ್ಷದ ಉಳಿದ ಅಕಾಂಕ್ಷಿಗಳದ್ದು.ಆರು ಚುನಾವಣೆಗಳನ್ನು ಎದುರಿಸಿ ಮೂರರಲ್ಲಿ ವಿಜಯಿಯಾದ ಎಂ.ಶ್ರೀನಿವಾಸ್ ಎದುರು ಜ್ಯಾದಳದಿಂದ ಬಿಜೆಪಿಗೆ ವಲಸೆ ಹೋದ ಅಶೋಕ್ ಜಯರಾಂ ಕಳೆದ ಬಾರಿ ಎರಡನೇ ಸ್ಥಾನಕ್ಕೆ ಜಿಗಿದು ಸೋಲನ್ನಪ್ಪಿದ ಗಣಿಗ ರವಿಕುಮಾರ್ ರೈತಸಂಘದ ಮಧುಚಂದನ್ ಪರಸ್ಪರ ಸೆಣಸಲಿದ್ದಾರೆ.ಕಳೆದ ಇಪ್ಪತ್ತು ವರ್ಷಗಳಿಂದ ಪಕ್ಷದಲ್ಲಿದ್ದರು ಯಾವೊಂದು ಸಚಿವ ಪದವಿ ಇರಲಿ.ಕನಿಷ್ಟ ನಿಗಮ ಮಂಡಳಿಗೂ ಹತ್ತಿರವಾಗದ ಶ್ರೀನಿವಾಸ್ ಪಕ್ಷನಿಷ್ಟ ಅದೇ ಕಾರಣಕ್ಕೆ ಅವರಿಗೆ ಭಿ ಫಾರಂ ಲಬಿಸಿದೆ.ಆದರೆ ಈ ಸಾರಿ ಅವರ ಹಾದಿ ಅಷ್ಟು ಸುಲಭವಾಗಿಲ್ಲ.ಪಕ್ಷದೊಳಗಿನ ಉಳಿದ ಅಕಾಂಕ್ಷಿಗಳೇ ಅವರಿಗೆ ಖೆಡ್ಡಾ ತೋಡುವ ಸಾಧ್ಯತೆಗಳು ಹೆಚ್ಚಿವೆ.ಜನತಾಪರಿವಾರದಿಂದ ಹೋಗಿ ಕಮಲ ಮುಡಿದಿರುವ ಅಶೋಕ್ ಜಯರಾಂ ಬಿಜೆಪಿಯ ಸಾಂಪ್ರದಾಯಿಕ ಮತಗಳಾದ ಲಿಂಗಾಯತರು ಬ್ರಾಹ್ಮಣರು ಮಧ್ಯಮವರ್ಗದಲ್ಲಿರುವ ಇತರೆ ಹಿಂದುಳಿದ ವರ್ಗಗಳ ಮತದ ಜತೆಗೆ ಜನತಾ ಪರಿವಾರದ ಮತಬುಟ್ಟಿಗೂ ಕೈ ಹಾಕುವ ಸಾಧ್ಯತೆಗಳು ಹೆಚ್ಚಿವೆ.ಮಾಜಿ ಸಚಿವ ಎಸ್ ಡಿ ಜಯರಾಂ ಕುಟುಂಬದ ಬಗೆಗಿನ ಅನುಕಂಪವೂ ಅಶೋಕ್ ಜಯರಾಂ ಗೆ ಅನುಕೂಲವಾಗಬಹುದು.ಬಿಜೆಪಿಗೆ ಬರುವ ಪ್ರತಿ ಮತವು ಶ್ರೀನಿವಾಸ್ ರನ್ನು ವಿಧಾನಸೌಧದಿಂದ ದೂರ ಉಳಿಸುವ ಸಾಧ್ಯತೆಗಳು ಹೆಚ್ಚಿವೆ.ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದ ಗಣಿಗ ರವಿಕುಮಾರ್ ಹದಿನೈದು ಮಂದಿ ಅಕಾಂಕ್ಷಿಗಳನ್ನು ದಾಟಿ ಭಿ ಫಾರಂ ಪಡೆದಿರುವುದು ಸಾಧನೆಯೆ ಸರಿ.ಕಳೆದ ಸಾರಿ ಅಹಿಂದ ಮತಗಳ ನೆರವಿನಿಂದಲೆ ಎರಡನೇ ಸ್ಥಾನ ಪಡೆದಿದ್ದ ಗಣಿಗ ರವಿಕುಮಾರ್ ಗೆ ಮುಸ್ಲಿಂ ಮತಗಳು ಕೈಹಿಡಿವ ಸಾಧ್ಯತೆಗಳು ಹೆಚ್ಚಿವೆ.ಬಿಜೆಪಿಯ ಆಟೋಟಾಪಗಳು ಪೂರ್ಣಪ್ರಮಾಣದಲ್ಲಿ ಮುಸಲ್ಮಾನರು ಕೈ ದಾರಿ ಹಿಡಿಯುವಂತೆ ಮಾಡಿವೆ. ಹಳೇ ಮೈಸೂರಿನಲ್ಲಿ ದಟ್ಟವಾಗಿರುವ ದಲಿತ ಸಮೂಹದೊಳಗಿನ ಬಲಗೈ ಪಂಗಡ ಮಲ್ಲೀಕಾರ್ಜುನ ಖರ್ಗೆ ಯ ನಾಯಕತ್ವದ ಕಾರಣಕ್ಕೆ ಕೈ ಗೆ ಅನುಕೂಲವಾಗಬಹುದು.ಕಡೇ ಚುನಾವಣೆಯೆಂದೆ ಕಣಕ್ಕೆ ಇಳಿದಿರುವ ಸಿದ್ರಾಮಯ್ಯ ಕಾರಣಕ್ಕೆ ಕುರುಬ ಸಮಾಜ ಬಹುದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಕೈಹಿಡಿಯಲಿದ್ದಾರೆ.ಇದರ ಜತೆಗೆ ಅಶೋಕ್ ಜಯರಾಂ ಶ್ರೀನಿವಾಸ್ ನಡುವೆ ಹಂಚಿಹೋಗುವ ಜನತಾಪರಿವಾರದ ಮತಗಳು ಗಣಿಗರವಿಕುಮಾರ್ ಹಾದಿಯನ್ನು ಸುಗಮಗೊಳಿಸಲಿವೆ
.ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ.ಸಾಲ ಮನ್ನಾ ಮಾಡುತ್ತಾರೆಂಬುದು ದಳಪತಿಗಳ ಬಹುದೊಡ್ಡ ಆಕರ್ಷಣೆಯಾಗಿತ್ತು.ಈ ಸಾರಿ ಮತದಾರರನ್ನು ಸೆಳೆಯುವಲ್ಲಿ ಜ್ಯಾದಳದಲ್ಲಿ ಅಜೆಂಡವೆ ಇಲ್ಲದಂತಾಗಿದೆ.ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆಂಬ ಘೋಷಣೆಗಳನ್ನು ಹೊಸೆದಿದ್ದರು ಹಾಲೀ ಶಾಸಕರ ಮೇಲಿನ ಆಡಳಿತ ವಿರೋಧಿ ಅಲೆ ಇವೆಲ್ಲಕ್ಕು ಅಡ್ಡಗಾಲಾಗಿದೆ.ಇನ್ನು ಕಾಂಗ್ರೇಸ್ ನಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆಂಬ ನಿರೀಕ್ಷೇ ಸಹಜವಾಗಿ ಕಾಂಗ್ರೇಸ್ ನೊಳಗಿನ ಒಕ್ಕಲಿಗ ಮತದಾರರ ಮೇಲೆ ಪ್ರಭಾವ ಬೀರುವಂತೆ ಕಾಣುತ್ತಿದೆ.ಇದರ ನಡುವೆ ರೈತಸಂಘದ ಮಧುಚಂದನ್ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಕಣಕಿಳಿಯುತ್ತಿದ್ದಾರೆ.ಬೂತ್ ಮಟ್ಟದಲ್ಲಿ ಸರ್ವೋದಯ ಕರ್ನಾಟಕ ಪಕ್ಷಕ್ಕೆ ಹೇಳಿಕೊಳ್ಳುವಂತ ನೆಲೆಯಿಲ್ಲವಾದರೂ ಮಧುಚಂದನ್ ವ್ಯಕ್ತಿಗತವಾಗಿ ಪ್ರಚಾರದ
ಮುಂಚೂಣಿಯಲ್ಲಿದ್ದಾರೆ.ಮೇಲುಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ರೈತಸಂಘಕ್ಕೆ ಬೆಂಬಲ ಕೊಟ್ಟಿರುವುದರಿಂದ ಮಂಡ್ಯದಲ್ಲಿ ಇವರ ಸ್ಪರ್ದೆ ಕುರಿತು ಸರ್ವೋದಯ ಕರ್ನಾಟಕ ಯಾವ ನಿಲುವು ತಾಳಲಿದೆಯೋ ಕಾದು ನೋಡಬೇಕಿದೆ.ಒಟ್ಟಾರೆಯಾಗಿ ಬಿಜೆಪಿಯ ಆಡಳಿತ ವಿರೋಧಿ ಅಲೆಯು ಕಾಂಗ್ರೆಸ್ ಗೆ ಅನುಕೂಲಕರವಾಗುವ ಸಾಧ್ಯತೆಗಳು ಹೆಚ್ಚಿವೆ.