ಮದ್ದೂರು :ಕದಲೂರು ಉದಯ ಕೈ ಅಭ್ಯರ್ಥಿ
ಬೆಂಗಳೂರು. ಎ.೧೫. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಕದಲೂರು ಉದಯ್ ಪಾಲಾಗಿದೆ.ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರ ಸಹೋದರ ಎಸ್ ಎಂ ಶಂಕರ್ ಪುತ್ರ ಗುರುಚರಣ್ ಗೆ ಕಾಂಗ್ರೇಸ್ ಟಿಕೇಟ್ ಎಂದೇ ಹೇಳಲಾಗಿತ್ತಾದರು ಹಾಲೀ ಶಾಸಕ ಡಿ.ಸಿ.ತಮ್ಮಣ್ಣರನ್ನು ಮಣಿಸಲು ಕದಲೂರು ಉದಯ್ ಸೂಕ್ತ ಎಂದು ಕೈಪಡೆ ಭಿ ಫಾರಂ ಘೋಷಿಸಿದೆ.ಉದಯ್ ಸ್ಪರ್ಧೆಯಿಂದಾಗಿ ಮದ್ದೂರು ಕಣ ರಂಗೇರಿದೆ.ಸೂಕ್ತ ಅಭ್ಯರ್ಥಿ ಇಲ್ಲದೆ ಅನಾಯಾಸವಾಗಿ ಆಯ್ಕೆಯಾಗುತ್ತಿದ್ದ ತಮ್ಮಣ್ಣ ಈ ಸಾರಿ ಶತಪ್ರಯತ್ನ ಹಾಕುವದು ಅನಿವಾರ್ಯವಾಗಲಿದೆ.
ಕುಮಾರಸ್ವಾಮಿ ನೇತೃತ್ವದ ಸರಕಾರ ಕೆಡುವುವಲ್ಲಿ ಕೈಜೋಡಿಸಿದ್ದ ಗ್ಯಾಂಬ್ಲರ್ ಗಳ ಕೂಟದೊಂದಿಗೆ ಗುರುತಿಸಿಕೊಂಡಿದ್ದ ಉದಯ್ ಈಗಾಗಲೇ ಕ್ಷೇತ್ರದ ತುಂಬಾ ಸಂಚಲನ ಸೃಷ್ಟಿಸಿದ್ದು.ದಳಪತಿಗಳು ಎಷ್ಟರ ಮಟ್ಟಿಗೆ ಚುನಾವಣಾ ತಂತ್ರ ಹೆಣೆಯಲಿದ್ದಾರೆ ನೋಡಬೇಕಿದೆ