
ಮದ್ದೂರು: ಆ.೧೦.ಸರಕಾರಿ ಭೂಮಿಯಲ್ಲಿ ವಾಸ ಮಾಡು ತ್ತಿರುವ ಬಡವರಿಗೆ ಹಕ್ಕುಪತ್ರ ವಿತರಿಸುವಂತೆ ನಿವೇಶನ ರಹಿತರಿಗೆ ನಿವೇಶನ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಕಕಾಲದಲ್ಲಿ ಜಿಲ್ಲೆಯ ಪ್ರತಿ ಗ್ರಾ.ಪಂ. ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾ ಧ್ಯಕ್ಷ ಎಂ. ಪುಟ್ಟಮಾದು ತಿಳಿಸಿ ದರು.
ಮದ್ದೂರು ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳ ವಾರ ನಡೆದ ಕೂಲಿಕಾರರ ಸಂಘದ ಸಭೆಯಲ್ಲಿ ಭಾಗ ವಹಿಸಿ ಮಾತನಾಡಿದ ಅವರು ಅ.೧೧ರ ಬುಧವಾರ ಜಿಲ್ಲೆಯ ಪ್ರತಿ ಗ್ರಾ.ಪಂ.ಗಳ ಎದುರು ಏಕಕಾಲಕ್ಕೆ ಸಾಮೂಹಿಕವಾಗಿ ಪ್ರತಿಭಟನೆ ಹಮ್ಮಿಕೊಂಡಿರುವು ದಾಗಿ ವಿವರಿಸಿದರು.
ಬಡವರ ಕಲ್ಯಾಣಕ್ಕಾಗಿ ಅನು ಷ್ಠಾನಕ್ಕೆ ಬಂದ ಉದ್ಯೋಗ ಖಾತರಿ ಯೋಜನೆ ಹಳ್ಳ ಹಿಡಿಯುತ್ತಿದ್ದು ಹಿಂದಿನ ಕೇಂದ್ರ ಸರಕಾರಗಳು ನರೇಗಾ ಯೋಜನೆಗೆ ಮೀಸಲಿಟ್ಟಿದ್ದ ಅನುದಾನವನ್ನು ಬಿಜೆಪಿ ಸರ ಕಾರ ಕಡಿತಗೊಳಿಸಿರುವುದಾಗಿ ದೂರಿದರು.
ಎನ್‌ಎಂಎಂಎಸ್ ಆಫ್ ಜಾರಿ ಮಾಡುವ ಮೂಲಕ ಬಡವರಿಗೆ ನರೇಗಾ ಉದ್ಯೋಗ ಸಿಗದಂತೆ ಮಾಡಿದ್ದಾರೆಂದು ಆರೋಪಿಸಿದ ಅವರು ಕೂಲಿ ಮಾಡಿ ಬದುಕು ಕಟ್ಟಿಕೊಳ್ಳು ತ್ತಿರುವ ಕೂಲಿ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದಾಗಿ ಆರೋಪಿಸಿದರು.
ಕಾಯಕ ಬಂಧುಗಳಿಗೆ ತರಬೇತಿ ಪ್ರೋತ್ಸಾಹ ಧನ, ಗುರುತಿನ ಚೀಟಿ, ಹಕ್ಕುಪತ್ರ ವಿತರಣೆ ನಿವೇಶನ ವಿತರಣೆ ಇನ್ನಿತರ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾಧ್ಯಂತ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಕೂಲಿಕಾರರ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಸಭೆ ವೇಳೆ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬಿ. ಹನುಮೇಶ್, ತಾಲೂಕು ಕಾರ್ಯದರ್ಶಿ ಟಿ.ಪಿ. ಅರುಣ್‌ಕುಮಾರ್, ರಾಜ್ಯ ಸಮಿತಿ ಸದಸ್ಯ ಬಿ.ಎ. ಮಧುಕುಮಾರ್, ಪದಾಧಿಕಾರಿಗಳಾದ ಶುಭಾವತಿ, ಆನಂದ್, ರಾಮಣ್ಣ, ಕಪನಿಗೌಡ, ಸರೋಜಮ್ಮ, ಶಿವಮಲ್ಲಯ್ಯ ಇತರರಿದ್ದರು.