ಮದ್ದೂರು l ಜೆಡಿಎಸ್ ಮುಖಂಡನ ಹತ್ಯೆಗೆ ಯತ್ನ : ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ವೇಳೆ ಲಾಂಗು, ಮಚ್ಚು ಬೀಸಿದ ದುಷ್ಕರ್ಮಿಗಳು
ಮದ್ದೂರು :- ಜೆಡಿಎಸ್ ಮುಖಂಡ ಹಾಗೂ ಸಮಾಜ ಸೇವಕ ಅಪ್ಪು ಪಿ ಗೌಡರ ಮೇಲೆ ಬೆಳ್ಳಂಬೆಳಿಗ್ಗೆ ಗುಂಪೊಂದು ದಾಳಿ ಮಾಡಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಹೊಳೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ದುಷ್ಕರ್ಮಿಗಳ ಗುಂಪು ಮಾರಕಾಸ್ರದಿಂದ ದಾಳಿ ಮಾಡಿದ್ದು,ಸ್ಥಳದಲ್ಲಿದ್ದ ಭಕ್ತರು ದುಷ್ಕೃತ್ಯ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ
.ಅಪ್ಪು ಪಿ ಗೌಡರ ಕತ್ತು, ಹೊಟ್ಟೆ, ಕೈ ಹಾಗೂ ಬೆನ್ನಿಗೆ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶನಿವಾರ ಬೆಳಗ್ಗೆ ಪೂಜೆಗೆ ಹೋಗಿದ್ದ ಜೆಡಿಎಸ್ ಮುಖಂಡ ಅಪ್ಪು ಪಿ ಗೌಡ ಪೂಜೆ ಸಲ್ಲಿಸುತ್ತಿದ್ದ ವೇಳೆ ಮೇಲೆ ಐದಾರು ದುಷ್ಕರ್ಮಿಗಳು ಲಾಂಗು,ಮಚ್ಚು ಗಳಿಂದ ದಾಳಿ ಮಾಡಿದ್ದಾರೆ
. .
ದೇವಾಲಯದಲ್ಲಿದ್ದ ಪೊಲೀಸ್ ಮುಖ್ಯ ಪೇದೆ ಕುಮಾರಸ್ವಾಮಿ ಮತ್ತು ಭಕ್ತರ ಗುಂಪು ತಕ್ಷಣ ಎಚ್ಚೆತ್ತು ಸ್ಥಳದಲ್ಲಿದ್ದ ಕಲ್ಲು ಕಲ್ಲುಗಳನ್ನು ತೂರಿದ್ದು,ದೊಣ್ಣೆ ಗಳನ್ನು ಹಿಡಿದು ದುಷ್ಕರ್ಮಿಗಳತ್ತ ಎಸೆದುಓಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿ ಅನಾಹುತವನ್ನು ತಪ್ಪಿಸಿದ್ದಾರೆ.
ಬೆನ್ನಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಅಪ್ಪು ಪಿ ಗೌಡರನ್ನ ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ದೇವಾಲಯದಲ್ಲಿದ್ದ ಭಕ್ತರ ಸಹಕಾರದಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯಗೆ ರವಾನಿಸಿದ್ದಾರೆ.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರತಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪೂಜೆಗೆ ಬಂದಿದ್ದರು. ಈ ಘಟನೆಯಿಂದ ಭಕ್ತಾದಿಗಳು ಕೆಲಕಾಲ ಆತಂಕಕ್ಕೆ ಒಳಗಾಗಿರುವುದು ಕಂಡು ಬಂತು.
ಸ್ಥಳಕ್ಕೆ ಮದ್ದೂರು ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಇಡೀ ಕೃತ್ಯದ ಘಟನಾವಳಿಗಳು ದೇವಾಲಯದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೋಲೀಸರ ತನಿಖೆಯಿಂದ ಘಟನೆ ಬಗ್ಗೆ ತಿಳಿದುಬರಲಿದೆ.