Sunday, June 16, 2024
spot_img

ಮಹರಾಷ್ಟ:ಬಿಜೆಪಿಯ ಡೋಂಗಿ ರಾಜಕಾರಣ

2014 ರಲ್ಲಿ ಮಹಾರಾಷ್ಟ್ರ ಬಿಜೆಪಿ, ಎನ್‍ಸಿ‍ಪಿಯ ಅಜಿತ್ ಪವಾರ್ ಮೇಲೆ ಭೃಷ್ಟಾಚಾರದ ಆರೋಪ ಹೊರಿಸಿ ಅದನ್ನು ಚುನಾವಣಾ ವಿಷಯನ್ನಾಗಿಸಿತ್ತು. ಅಜಿತ್ ಪವಾತ್ Rs 70000 ಕೋಟಿ ನೀರಾವರಿ ಹಗರಣದ ರೂವಾರಿ ಹಾಗೂ ಫಲಾನುಭವಿಯೆಂದು ದೇವೆಂದ್ರ ಫಡ್ನಾವೀಸ್ ಚುನಾವಣಾ ಸಭೆಗಳಲ್ಲಿ ಭಾಷಣ ಬಿಗಿಯುತ್ತಿದ್ದರು. ಆದರೆ ಚುನಾವಣಾ ಫಲಿತಾಂಶ ಬಂದಾಗ ಬಿಜೆಪಿಗೆ ಪೂರ್ಣ ಬಹುಮತಕ್ಕೆ ಇನ್ನೂ ಇಪ್ಪತ್ತೈದರಷ್ಟು ಸೀಟು ಬೇಕಿತ್ತು. ಶಿವಸೇನೆ ಹಾಗೂ ಎನ್‍ಸಿಪಿಯೊಡನೆ ಸಮ್ಮಿಶ್ರ ಸರಕಾರ ಮಾಡುವ ಬಗ್ಗೆ ಡೀಲ್ ಮಾಡಲು ಆರಂಭಿಸಿದ ಬಿಜೆಪಿ ಸರ್ಕಾರ ರಚಿಸಿತ್ತು. ವಿಶ್ವಾಸ ಮತಯಾಚನೆ ವೇಳೆ ಎನ್‍ಸಿಪಿ ಬಿಜೆಪಿಗೆ ಬೆಂಬಲ ನೀಡಿ ದೇವೆಂದ್ರ ಫಡ್ನಾವೀಸ್‍ನ ಮುಖ್ಯಮಂತ್ರಿ ಸ್ಥಾನ ಗಟ್ಟಿಗೊಳಿಸಿತ್ತು.

ಮುಂದಿನ ಐದು ವರುಷಗಳ ಕಾಲ ಈ Rs 70000 ಕೋಟಿ ನೀರಾವರಿ ಹಗರಣದ ತನಿಖೆ ಕಾಟಾಚಾರಕಷ್ಟೆಯೆನ್ನುವಂತೆ ನಡೆದಿತ್ತು. ಅಜಿತ್ ಪವಾರ್ ಮೇಲೆ ಮಹಾರಾಷ್ಟ್ರ ಎಸಿಬಿ ಯಾವ ಕ್ರಮವೂ ಕೈಗೊಳ್ಳಲಿಲ್ಲ. ಆದರೆ 2017-2018 ರ ನಡುವೆ ಎನ್‍ಸಿಪಿ ಬಿಜೆಪಿಯ ಸಖ್ಯ ಬಿಟ್ಟು ಮುಂದಿನ ಚುನಾವಣೆಗೆ ಕಾಂಗ್ರೇಸ್ ಜೊತೆ ಕೈಜೋಡಿಸುವ ಸಾಧ್ಯತೆಗಳು ಕಂಡುಬಂದಾಗ ಮೊಟ್ಟಮೊದಲಬಾರಿ ಎಸಿಬಿಯ ನವೆಂಬರ್ 2018ರ ಚಾರ್ಜ್‍ಶೀಟ್‍ನಲ್ಲಿ ಅಜಿತ್ ಪವಾರ್ ಹೆಸರು ಕಂಡುಬಂತು. ಮತ್ತೆ ತನಿಖೆಯದ್ದು ಅದೇ ಹಿಂದಿನ ದಾರಿ.

2019 ರಲ್ಲಿ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ವಿಧಾನಸಭೆ ಚುನಾವಣೆ ನಡೆದಾಗಲೂ ಅಧಿಕಾರದಲ್ಲಿದ್ದ ಬಿಜೆಪಿಗೆ ಬಹುಮತ ಬರಲಿಲ್ಲ. ಆ ಹೊತ್ತಿಗೆ ತನ್ನ ಎಂದಿನ ಜತೆಗಾರ ಶಿವಸೇನೆಯ ಜೊತೆಗೂ ಬಿಜೆಪಿ ಸಂಬಂಧ ಹಳಸಿತ್ತು. ಈ ಮಧ್ಯೆ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವಾಗ ಈ ಅಜಿತ್ ಪವಾರ್, ದೇವೆಂದ್ರ ಫಡ್ನಾವೀಸ್‍ನ ಜೊತೆಗೆ ಹಠಾತ್ತೆಂದು ಕಾಣಿಸಿಕೊಂಡರು. ಮಹಾರಾಷ್ಟ್ರದ ರಾಜ್ಯಪಾಲ ರಾತ್ರೋ-ರಾತ್ರಿ ಫಡ್ನಾವೀಸ್‍‍ಗೆ ಮುಖ್ಯಮಂತ್ರಿ ಪ್ರಮಾಣವಚನ ಭೋಧಿಸಿದರೆ, ಅಜಿತ್ ಪವಾರ್ ಉಪ-ಮುಖ್ಯಮಂತ್ರಿಯಾದರು. ಈ ಜೋಡಿಯ ಸರ್ಕಾರವಿದ್ದದ್ದು ಮೂರು ದಿನಗಳ ಕಾಲ ಮಾತ್ರ. ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ಸೂಚಿಸಿ ಉಪಮುಖ್ಯಮಂತ್ರಿಯಾದ ಎರಡೇ ದಿನಗಳಲ್ಲಿ ಮತ್ತೆ ಜೀವತಳೆದ ಎಸಿಬಿ Rs 70000 ಕೋಟಿ ನೀರಾವರಿ ಹಗರಣದ 9 ಕೇಸುಗಳನ್ನು ಮುಚ್ಚಿ ಅಜಿತ್ ಪವಾರ್ ಗೆ ಕ್ಲೀನ್‍ಚಿಟ್ ಕೊಟ್ಟರು. ಮುಂದಿನ ಎರಡು ದಿನಗಳಲ್ಲಿ ತೀನ್ ದಿನ್ ಕಾ ಸುಲ್ತಾನ್ ಫಡ್ನಾವೀಸ್ ಸರ್ಕಾರ ಪತನವಾಗಿ ಅಘಾಡಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಅಲ್ಲಿಗೆ ಅಜಿತ್ ಪವಾರ್ ಬಿಜೆಪಿ ಎಂಬ ವಾಷಿಂಗ್ ಮಿಶಿನೊಳಗೆ ಹೋಗಿದ ಎರಡೇ ದಿನದಲ್ಲಿ ಕ್ಲೀನ್ ಆಗಿ ಹೊರಬಂದರು.

ಹಾಗೆ ಕ್ಲೀನಾದ ಅಜಿತ್ ಪವಾರ್ ಬಿಜೆಪಿಯ ಸಖ್ಯ ಬಿಟ್ಟು ಅಘಾಡಿ ಸರ್ಕಾರದ ಜೊತೆ ನಿಂತರು. ಮತ್ತೆ ಅಜಿತ್ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯ money laundering ಕೇಸ್ ಹಾಕಿ ವಿಚಾರಣೆ ಆರಂಭಿಸಿತು. ಇದರ ಜೊತೆ ನಿನ್ನೆ ಸರ್ಕಾರದ ಜತೆ ಕೈಜೋಡಿಸಿರುವ ಎನ್‍ಸಿಪಿಯ ಇತರ ನಾಯಕರುಗಳಾದ ಪ್ರಫುಲ್ ಪಟೇಲ್, ಹಸನ್ ಮುಶ್ರಿಫ್ ಹಾಗೂ ಧನಂಜಯ್ ಮುಂಡೆ ಮೇಲೂ money laundering ಕೇಸ್‍ಗಳಿವೆ. ಆದರೆ ಈ ಕೇಸ್‍ಗಳು ಎನ್‍ಸಿಪಿ ಬಿಜೆಪಿಯಿಂದ ದೂರವಾದಾಗ ಜೀವತಳೆದು, ಎನ್‍ಸಿಪಿ ಬಿಜೆಪಿಯೊಡನೆ ಕುಂಟ-ಬಿಲ್ಲೆ ಆಡತೊಡಗಿದಾಗ ಮತ್ತೆ ಕೋಮಾಕ್ಕೆ ಜಾರುತ್ತವೆ.

ತೀರಾ ಇತ್ತೀಚಿಗೆ ಅಂದರೆ ಎಪ್ರಿಲ್ ತಿಂಗಳಲ್ಲಿ ಅಜಿತ್ ಪವಾರ್ ಮೇಲಿರುವ ಇಡಿ ಕೇಸಿನಲ್ಲಿ ಚಾರ್ಜ್‍ಶೀಟ್ ದಾಖಲಾಗಿದೆ. ಆದರೆ ಅದರಲ್ಲಿ ಸೋ ಕಾಲ್ದ್ ಪ್ರಮುಖ ಆರೋಪಿ ಅಜಿತ್ ಪವಾರನ ಹೆಸರೇ ಇಲ್ಲ. ಪ್ರಫುಲ್ ಪಟೇಲನದ್ದೂ ಅದೇ ಕಥೆ. ಧನಂಜಯ್ ಮುಂಡೆ ಮೇಲೆ ಇಡಿ ಏಳು ವರುಷಗಳ ಹಿಂದೆ ಪ್ರಕರಣ ದಾಖಲಿಸಿದೆಯಾದರೂ, ಇದುವರೆಗೂ ‘ಸೌಜನ್ಯಕ್ಕಾದರೂ’ ಅವರನ್ನು ವಿಚಾರಣೆಗೆ ಕರೆದಿಲ್ಲ. ಹಸನ್ ಮುಶ್ರೀಪ್ ಮೇಲೆ ಇಡಿ ದಾಳಿಯಾಗಿದ್ದೂ ಇತ್ತೀಚಿಗಷ್ಟೆ. ಆವಾಗ ಆ ವಯ್ಯ ಬಿಜೆಪಿ, ಮೋದಿ, ಶಾ, ಫಡ್ನಾವೀಸರನ್ನು ಬೈಯ್ದಿದ್ದೇ ಬೈಯ್ದಿದ್ದು. ಈಗ ಅವರ ತೆಕ್ಕೆಯಲ್ಲಿ ಪ್ರಣಯಗೀತೆ ಹಾಡುತ್ತಿದ್ದಾನೆ. ಅಲ್ಲಿಗೆ ಆ ಕೇಸ್ ಕೂಡಾ ಠುಸ್ ಪಠಾಕಿ.

ನಮ್ಮ ಬಿಜೆಪಿ, ಮೋದಿಜಿ, ಅಮಿತ್‍ಜಿ ಎಲ್ಲಾ ಭೃಷ್ಟಾಚಾರದ ವಿಷಯದಲ್ಲಿ ಎಷ್ಟೊಂದು ಸ್ಟ್ರಾಂಗ್ ಅಲ್ವಾ?

  • Gladson Almeida

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!