ಮೇ.13ರಂದು ಮಂಡ್ಯ ಜಿಲ್ಲಾದ್ಯಂತ ನಿಷೇಧಾಜ್ನೆ ಜಾರಿ
ಮಂಡ್ಯ:ಮೇ.11. ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆಯು ಮೇ13 ನಡೆಯಲಿದ್ದು.ಈ ಸಂಧರ್ಭದಲ್ಲಿ ಮಂಡ್ಯ ಜಿಲ್ಲಾದ್ಯಂತ್ಯ ನಿಷೇಧಾಜ್ನೇ ವಿಧಿಸಿ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ.ಎಚ್ ಎನ್ ಗೋಪಾಲಕೃಷ್ಣ ಆದೇಶಹೊರಡಿಸಿದ್ದಾರೆ.
ಮೇ13 ಬೆಳಿಗ್ಗೆ6ರಿಂದ ಮೇ14ರ ಬೆಳಗ್ಗಿನ 6ಗಂಟೆವರೆಗೆ ನಿಷೇಧಾಜ್ನೆ ಹೇರಿದ್ದು.ಈ ಸಂಧರ್ಭದಲ್ಲಿ ಮತ ಎಣಿಕೆ ಕೇಂದ್ರದ ಬಳಿಯಾಗಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಣ ಗ್ರಾಮಗಳಲ್ಲಿ ಮೆರವಣಿಗೆ ಮಾಡುವುದು ಪಟಾಕಿ ಹಚ್ಚುವುದು ಇತರರ ಮನೆಗಳ ಮೇಲೆ ಕಲ್ಲು ತೂರುವುದು.ಮಾರಕಾಸ್ರಗಳನ್ನು ಹಿಡಿದು ಓಡಾಡುವುದನ್ನು ನಿಷೇಧಿಸಿ ಮಂಡ್ಯ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆ ಕಾಲಕ್ಕೆ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಾಗೂ ಗ್ರಾಮಗಳಲ್ಲಿ ಘರ್ಷಣೆ ಉಂಟಾಗಿ ಪರಸ್ಪರರ ಮೇಲೆ ಹಲ್ಲೇಗಳಾಗುವ ಸಾಧ್ಯತೆಯಿದ್ದು ಸಿಆರ್ ಪಿಸಿ 1973ರ ಕಲಂ 144 ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆಯೆಂದು ಪ್ರಕಟಣೆ ತಿಳಿಸಿದೆ