ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ರಾಜ್ಯ ಸರಕಾರ ಲೋಕಾಯುಕ್ತ ಮೂಲಕ ಸರಕಾರಿ ನೌಕರರ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದೆ.ಲೋಕಾಯುಕ್ತ ಮೂಲಕ ರಾಜ್ಯದ ಶಿಕ್ಷಣ ಇಲಾಖೆಯ ಅಡಿಯಲ್ಲಿ ಇರುವ ಎಲ್ಲ ಇಲಾಖೆ ಕಚೇರಿ ಶಾಲಾ ಕಾಲೇಜುಗಳಲ್ಲಿನ ಅಧಿಕಾರಿಗಳು ಶಿಕ್ಷಕರು ಇತರೆ ಸಿಬ್ಬಂದಿ ವರ್ಗ ಮತ್ತು ಅತಿಥಿ/ಗುತ್ತಿಗೆ ಸಿಬ್ಬಂದಿಯ ಮಾಹಿತಿಯನ್ನು ಒದಗಿಸುವಂತೆ ಲೋಕಾಯುಕ್ತ ಕಚೇರಿ ಮೂಲಕ ಮಂಡ್ಯ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ .
ಈ ಪತ್ರದ ಪ್ರತಿ ಹಳೇ ಮೈಸೂರು ಪತ್ರಿಕೆಗೆ ಲಭ್ಯವಾಗಿದ್ದು ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ ಇಲಾಖೆಗಳಿಗೂ ಪತ್ರ ಬರೆದು ನೌಕರರ ವಿವರವನ್ನು ಲೋಕಾಯುಕ್ತ ಮೂಲಕ ಸಂಗ್ರಹಿಸುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗಿರುವುದು ತಡವಾಗಿ ಬಯಲಾಗಿದೆ .ದಿನಾಂಕ ರಂದು ಮಂಡ್ಯ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಿಗೆ ಲೋಕಾಯುಕ್ತ ಅಧಿಕಾರಿ ಎಚ್ ಟಿ ಸುನೀಲ್ ಕುಮಾರ್ ಪತ್ರ ಬರೆದಿದ್ದು .ನೌಕರನ ಹೆಸರು.ಹುದ್ದೆ.ಸ್ವಂತ ಸ್ಥಳ .ಜನ್ಮದಿನಾಂಕ .ಸೇವೆಗೆ ಸೇರಿದ ದಿನ .ಹಾಲಿ ಘಟಕಕ್ಕೆ ವರದಿ ಮಾಡಿಕೊಂಡ ದಿನಾಂಕ . ಈ ಹಿಂದೆ ಕರ್ತವ್ಯ ನಿರ್ವಹಿಸಿದ ಸ್ಥಳಗಳು ಮತ್ತು ಆಗಿನ ಹುದ್ದೆ ಮತ್ತು ಮೊಬೈಲ್ ನಂಬರ್ ಸೇರಿದಂತೆ ಹಲವು ಮಾಹಿತಿಗಳನ್ನು ಕೇಳಲಾಗಿದೆ.
ಚುನಾವಣೆ ಸಂಧರ್ಭದಲ್ಲಿ ರಾಜ್ಯ ಸರಕಾರ ಲೋಕಾಯುಕ್ತ ಮೂಲಕ ನೌಕರರ ವಿವರಗಳನ್ನು ಸಂಗ್ರಹಿಸಿರುವುದು ಸಂಶಯಾಸ್ಪದವಾಗಿದೆ.ಯಾವುದೆ ಸಕಾರಣವಿಲ್ಲದೆ ಲೋಕಾಯುಕ್ತ ಮೂಲಕ ಮಾಹಿತಿ ಸಂಗ್ರಹಿಸಿರುವುದು ನೌಕರರಲ್ಲಿ ಭಯ ಮೂಡಿಸುವ ರಾಜ್ಯ ಬಿಜೆಪಿ ಪಕ್ಷದ ಮತ ಚಲಾಯಿಸುವುದು ಸೇರಿದಂತೆ ಯಾವುದೆ ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ಬೆದರಿಸುವ ಕ್ರಮದಂತೆ ಕಂಡುಬಂದಿದೆ.
ಪತ್ರಕರ್ತರಿಗೂ ಬೆದರಿಕೆ:ಚುನಾವಣೆ ಘೋಷಣೆ ಬೆನ್ನಲ್ಲೆ ರಾಜ್ಯದಲ್ಲಿ ಸಕ್ರಿಯವಾಗಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಆರ್ ಎನ್ ಐ ನೋಂದಣಿ ಪ್ರತಿಯನ್ನು ವಾರ್ತಾ ಇಲಾಖೆ ಮೂಲಕ ಸಂಗ್ರಹಿಸಲಾಗಿದೆ. ಈ ಸಂಗ್ರಹಕ್ಕೆ ಯಾವುದೆ ಕಾರಣವನ್ನು ವಾರ್ತ ಇಲಾಖೆ ನೀಡಿಲ್ಲ.ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರುದ್ದ ಲೇಖನಗಳು ಪ್ರಕಟಿಸದಂತೆ ಪತ್ರಿಕೆಗಳನ್ನು ಹೆದರಿಸುವ ಭಾಗವಾಗಿ ಆರ್ ಎನ್ ಐ ಪ್ರತಿಗಳನ್ನು ಸಂಗ್ರಹಿಸಲಾಗಿದೆ ಎಂದು ಪತ್ರಕರ್ತರ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಒಟ್ಟಾರೆಯಾಗಿ ರಾಜ್ಯ ಸರಕಾರ ಸರಕಾರಿ ನೌಕರರು ಹಾಗೂ ಪತ್ರಕರ್ತರನ್ನು ಹದ್ದುಬಸ್ತಿನಲಿಡಲು ಆ ಮೂಲಕ ಚುನಾವಣೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ
