
ಹತ್ಯೆಯಾದ ಸುಧೀರ್
ಶ್ರೀರಂಗಪಟ್ಟಣ :ಜೂ.೨೯.:ಜತೆಯಲ್ಲಿ ಇದ್ದ ಗೆಳೆಯರೆ ರೌಡಿಶೀಟರ್ ನನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿರುವ ಘಟನೆ ತಾಲೂಕಿನ ಹುಲಿಕೆರೆಯಲ್ಲಿ ನಡೆದಿದೆ.
ರೌಡಿಶೀಟರ್ ಸುಧೀರ್ (35) ಹತ್ಯೆ ಯಾದವನಾಗಿದ್ದು, ಜೊತೆಯಲ್ಲಿ ಪಾರ್ಟಿ ಮಾಡಿದ ಸ್ನೇಹಿತರೆ ಕತ್ತು ಕೊಯ್ದು ಕೊಲೆಗೈದಿದ್ದಾರೆ.
ಪಾರ್ಟಿಯಲ್ಲಿ ಸ್ನೇಹಿತರ ಜೊತೆ ಜಗಳ ಮಾಡಿಕೊಂಡಿದ್ದ ರೌಡಿಶೀಟರ್ ತಾನೇ ತಂದಿದ್ದ ಮಚ್ಚಿನಿಂದ ಜೀವ ತೆತ್ತಿದ್ದಾನೆ.

ಕೆ ಆರ್ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಕೆರೆ ಗ್ರಾಮದ ಸುಧೀರ್ ನನ್ನ ಪುಂಡಾಟಿಕೆ ಹಿನ್ನೆಲೆಯಲ್ಲಿ ಪೊಲೀಸರು ರೌಡಿ ಶೀಟರ್ ಪಟ್ಟಿಗೆ ಸೇರಿಸಿದ್ದರು,
ಸುಧೀರ್ ಗುರುವಾರ ತನ್ನ ಸ್ನೇಹಿತ ಪೂರ್ಣಚಂದ್ರ ಸೇರಿದಂತೆ ಹಲವರ ಜೊತೆ ಎಣ್ಣೆ ಪಾರ್ಟಿ ಮಾಡಲು ತೆರಳಿದ್ದು, ಗ್ರಾಮದ ಅಂಗಡಿಯೊಂದರ ಬಳಿ ಎಲ್ಲರೂ ಸೇರಿ ಕುಡಿದಿದ್ದಾರೆ, ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ, ಮನೆಗೆ ತೆರಳಿ ಮಚ್ಚು ತಂದ ರೌಡಿಶೀಟರ್, ಸುಧೀರ್ ನನ್ನ ಪಾರ್ಟಿಯಲ್ಲಿದ್ದವರು ಸಮಾಧಾನ ಮಾಡಿದ್ದು,ಮತ್ತೆ ಎಲ್ಲರೂ ಗುಂಡಿನ ಪಾರ್ಟಿಯಲ್ಲಿ ತಲ್ಲಿನರಾಗಿದ್ದಾರೆ.
ಸ್ವಲ್ಪ ಸಮಯದ ನಂತರ ನಶೆಯಲ್ಲಿ ಪಾರ್ಟಿಯಿಂದ ಎದ್ದು ರಸ್ತೆಯಲ್ಲಿ ಸುಧೀರ್ ನಡೆದುಕೊಂಡು ಹೋಗುತ್ತಿದ್ದಾಗ, ಹಿಂಬಾಲಿಸಿದ ಪೂರ್ಣಚಂದ್ರ ಮತ್ತು ಇತರರು ಹಾಡ ಹಗಲೇ ನಡು ರಸ್ತೆಯಲ್ಲಿ ಕತ್ತು ಕೊಯ್ದ ಪರಾರಿಯಾಗಿದ್ದಾರೆ.
ರಸ್ತೆಯಲ್ಲಿ ಭೀಕರವಾಗಿ ಹತ್ಯೆ ನಡೆದಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದು, ರೌಡಿಶೀಟರ್ ಕೊಲೆ ಸುದ್ದಿ ಹರುಡುತ್ತಿದ್ದಂತೆ ಸ್ಥಳದಲ್ಲಿ ಜನಜಂಗುಳಿ ನೆರೆದಿತ್ತು. ಕುಟುಂಬಸ್ಥರು ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.
ಕೆ ಆರ್ ಎಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಪೂರ್ವ ಯೋಜಿತವಾಗಿ ಸಂಚುರೂಪಿಸಿ ಕೊಲೆ ನಡೆದಿರಬಹುದು ಅಥವಾ ಪಾರ್ಟಿಯಲ್ಲಿನ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿರಬಹುದು ಎಂದು ಹೇಳಲಾಗಿದೆ