ಸುಮಲತಾ ಬೆಂಬಲ ಕೋರಿದ ಕುಮಾರಸ್ವಾಮಿ
ಬೆಂಗಳೂರು: ಮಾ೩೧.ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮನ್ನು ಬೆಂಬಲಿಸುವಂತೆ ಶಾಸಕ ಕುಮಾರಸ್ವಾಮಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ರನ್ನು ಕೋರಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ವಾಚಾಮಗೋಚರವಾಗಿ ಸುಮಲತಾ ಅಂಬರೀಶ್ ಮೇಲೆ ಹರಿಹಾಯ್ದಿದ್ದ ದಳಪತಿಗಳು ಧಿಡೀರನೆ ಸುಮಲತಾ ಅಂಬರೀಶ್ ಜತೆ ಸಂಧಾನ ಆರಂಭಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಕಾಲಕ್ಕೆ ಜ್ಯಾದಳ ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ.ಸುಮಲತಾ ಅಂಬರೀಶ್ ಗೌಡತಿ ಅಲ್ಲವೆಂದು ಶಾಸಕ ಎಚ್ ಡಿ ರೇವಣ್ಣ ಸುಮಲತಾ ಅಂಬರೀಶ್ ಗಂಡ ಸತ್ತು ಮೂರು ತಿಂಗಳಾಗಿಲ್ಲ ಎಂದು ಹಂಗಿಸಿದ್ದರು.ಈಗ ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆಗೆ ಸಿದ್ದವಾಗುತ್ತಿದ್ದಂತೆ ಸುಮಲತಾ ಅಂಬರೀಶ್ ರನ್ನು ಸಹೋದರಿ ಎಂದು ಹೇಳುವ ಮೂಲಕ ಯೂ ಟರ್ನ್ ಹೊಡೆದಿದ್ದರು.ಐದು ವರ್ಷಪೂರ್ತಿ ಸಂಸದೆ ಜತೆ ತಗಾದೆ ತೆಗೆದಿದ್ದ ದಳಪತಿಗಳು ಈಗ ಸುಮಲತಾ ಅಂಬರೀಶ್ ಮುಂದೆ ಬೆಂಬಲ ಕೋರಿರುವುದು ವಿಶೇಷವಾಗಿದೆ