Tuesday, November 10, 2026
spot_img

ಎಥೆನಾಲ್ ಮಿಶ್ರಣ.ಕೇಂದ್ರದ ಭಂಡಾಟಕ್ಕೆ ಲಕ್ಷ್ಮಣ್ ಆಕ್ಷೇಪ

ನಿಗದಿತ ಪ್ರಮಾಣ ಮೀರಿ ಎಥೆನಾಲ್ ಮಿಶ್ರಣ: ಆರೋಪ

ಸಮಗ್ರ ತನಿಖೆಗೆ ಲಕ್ಷ್ಮಣ ಒತ್ತಾಯ

 

ಮಡಿಕೇರಿ: ಇಂಧನದಲ್ಲಿ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡುತ್ತಿರುವ ಕುರಿತು ಹಾಗೂ ಇದರ ಬಳಕೆಯಿಂದ ವಾಹನಗಳ ಬಿಡಿಭಾಗಗಳು ಹಾನಿಗೊಳಗಾಗುತ್ತಿ-ರುವ ಕುರಿತು ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಈ ಸಂಬಂಧ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಒತ್ತಾಯಿಸಿದರು.

ಸಾರ್ವಜನಿಕರ ಗಮನಕ್ಕೆ ತಾರದೇ ಇಂಧನದಲ್ಲಿ ಹೆಚ್ಚುವರಿ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ರಾಜ್ಯದಲ್ಲಿನ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟ ಮಾಡುವ ಇಂಧನದಲ್ಲಿ ಎಥೆನಾಲ್‌ ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸಿದ ಫಲಕಗಳನ್ನು

ಪ್ರದರ್ಶಿಸುವುದನ್ನು ಕಡ್ಡಾಯ-ಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಈ ರೀತಿ ನಿಗದಿತ ಪ್ರಮಾಣ ಮೀರಿ ಇಂಧನದಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದರಿಂದ ಜನಸಾಮಾನ್ಯ-ರಿಗೆ ಹೊರೆಯಾಗಿದೆ. ಮತ್ತೊಂದೆಡೆ ತೈಲ ಕಂಪನಿಗಳಿಗೆ ಲಾಭವಾಗಿದೆ. ಇದೊಂದು ವ್ಯವಸ್ಥಿತ ಲೂಟಿ ಎಂದು ಆರೋಪಿಸಿದರು.

 

ಈಗ ರಾಜ್ಯಸರ್ಕಾರ ನಡೆಸಿದ ಪರೀಕ್ಷೆಯಲ್ಲಿ ಶೇ 30ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿರುವುದು ದೃಢಪಟ್ಟಿದೆ. ಅಂದರೆ, ಒಂದು ಲೀಟರ್ ಇಂಧನದಲ್ಲಿ 700 ಮಿ.ಲೀ ಮಾತ್ರವೇ ಇಂಧನವಿದ್ದು, ಉಳಿದ 300 ಮಿ.ಲೀ ಎಥೆನಾಲ್ ಇದೆ ಎಂದರ್ಥ. ಒಂದು ಲೀಟರ್‌ ಪೆಟ್ರೋಲ್‌ನ ಬೆಲೆ ಸರಾಸರಿ ₹ 112 ಆಗಿದ್ದರೆ, ಎಥೆನಾಲ್‌ನ ಬೆಲೆ ಪ್ರತಿ ಲೀಟರ್‌ಗೆ 60ರಿಂದ 65ರಷ್ಟಿದೆ. ಈ ವ್ಯತ್ಯಾಸದ ಲೆಕ್ಕಾಚಾರದಲ್ಲಿ ಪ್ರತಿ ಲೀಟರ್ ಎಥೆನಾಲ್ ಮಿಶ್ರಿತ ಇಂಧನದಿಂದ ಗ್ರಾಹಕರಿಂದ ಹೆಚ್ಚುವರಿಯಾಗಿ ಸುಮಾರು 14 ವಸೂಲಿ ಮಾಡಲಾಗುತ್ತಿದೆ. ಇದರಿಂದ

ಮಿಶ್ರಣ ಮಾಡುವ ನಿಯಮವನ್ನು ಲೋಕಸಭೆಯಲ್ಲಿ ಸಮರ್ಪಕವಾಗಿ ಚರ್ಚೆ ನಡೆಸದೇ ಜಾರಿಗೆ ತಂ ದಿ ದ್ದಾರೆ ಎಂದು ದೂರಿದರು.

ಜನಸಾಮಾನ್ಯರ ಜೇಬಿಗೂ ಕತ್ತರಿ ಹಾಕಿದಂತಾಗಿದೆ ಎಂದು ಅಭಿಪ್ರಾಯಪ ಟ್ಟರು.

ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ರಿಜ್ವಾನ್ ಹರ್ಷದ್ ಅವರು ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದ್ದಾರೆ. ಅದರಲ್ಲಿ ಅಧಿಕೃತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸುತ್ತಿರುವುದು ದೃಢಪಟ್ಟಿದೆ. ಈ ಬಗ್ಗೆ 4 ಬಾರಿ ಕೇಂದ್ರಕ್ಕೆ ಪತ್ರ ಬರೆದರೂ ಉತ್ತರ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರ-ಸ್ವಾಮಿ ಅವರು ತಮ್ಮ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಹಾಸನ ಜಿಲ್ಲಾಧಿಕಾರಿ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಇವರ ವಿರುದ್ಧ ತನಿಖೆ ನಡೆಸಬೇಕು, ಮಹಿಳಾ ಆಯೋಗ, ಮುಖ್ಯ ಕಾರ್ಯ-ದರ್ಶಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿಮಾಡಿದರು.

ಮುಖಂಡರಾದ ಎಚ್‌. ಎಂ.ನಂದಕುಮಾ‌ರ್, ಕೊಟ್ಟಮುಡಿ ಹಂಸ, ಖಾಲೀದ್ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!