ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನೀಡುವಂತೆ ಹಾಗೂ ಗುತ್ತಿಗೆ ಪದ್ದತಿ ಬದಲು ನೇರಪಾವತಿ ಜಾರಿಗೊಳಿಸುವಂತೆ ಮಿಮ್ಸ್ ನಿರ್ದೇಶಕ ಡಾ.ನರಸಿಂಹ ಸ್ವಾಮಿಯವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಆಸ್ಪತ್ರೆ. ಮೆಡಿಕಲ್ ಕಾಲೇಜು ಹೊರಗುತ್ತಿಗೆ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಮಂಡ್ಯ ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ನಾಲ್ಕು ನೂರಕ್ಕು ಹೆಚ್ಚಿನ ಹೊರಗುತ್ತಿಗೆ ನೌಕರರು ಸ್ವಚ್ಚತೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತೊಡಗಿಕೊಂಡಿದ್ದಾರೆ.
ಬಹುತೇಕ ಮಹಿಳಾ ಕಾರ್ಮಿಕರೆ ಇಲ್ಲಿದ್ದು.ಈ ಕಾರ್ಮಿಕರ ಅಗತ್ಯತೆಗೆ ತಕ್ಕಂತೆ ಯಾವುದೆ ವಿಶ್ರಾಂತಿ ಗೃಹವನ್ನು ನೀಡಿರುವುದಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದ್ದು.
ಕಾರ್ಮಿಕ ಕಾಯ್ದೆ ಪ್ರಕಾರ
Labour laws mandate sufficient, separate, clean, and accessible restrooms (latrines/urinals/washrooms) for male and female workers, with specific ratios (e.g., 1 toilet/urinal per 25 workers) under laws like India’s Factories Act, 1948, and the new Labour Codes, requiring adequate lighting, ventilation, clean water, and maintenance, with contractors or principal employers responsible for provision, ensuring worker health and dignity, even allowing portable toilets if needed.
ಈ ಹಿನ್ನೆಲೆಯಲ್ಲಿ ಸ್ವಚ್ಚತಾ ಕಾರ್ಮಿಕರ ಅಗತ್ಯತೆಗಾಗಿ ಕಾಲೇಜು ವ್ಯಾಪ್ತಿಯಲ್ಲಿ ಕಾರ್ಮಿಕರ ವಿಶ್ರಾಂತಿ ಗೃಹಕ್ಕಾಗಿ ಕೊಠಡಿಯೊಂದನ್ನು ನೀಡುವಂತೆ ಹಾಗೂ ಹಾಲೀ ಗುತ್ತಿಗೆ ಪದ್ದತಿ ಬದಲು ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿ ಜಾರಿಗೊಳಿಸಬೇಕು.ನೇರಪಾವತಿ ಜಾರಿಗೊಳಿಸುವುದರಿಂದ ಮಿಮ್ಸ್ ಗೆ ವಾರ್ಷಿಕ ₹೩ ಕೋಟಿ ಜಿಎಸ್ ಟಿ ಹಾಗೂ ಏಜೆನ್ಸಿಗಳಿಗೆ ನೀಡುವ ಸೇವಾ ಶುಲ್ಕ ಉಳಿತಾಯವಾಗಲಿದೆ.ಕಾರ್ಮಿಕರಿಗೆ ಉತ್ತರದಾಯಿತ್ವದ ಜತೆಗೆ ದಕ್ಷತೆಯು ಹೆಚ್ಚಲಿದೆ ಎಂದು ಮನವಿಯಲ್ಲಿ ಕೋರಲಾಯಿತು.

ಈ ಸಂಧರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ.ಸ್ವಚ್ಚತಾ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕಿ ವೆಂಕಟಲಕ್ಷ್ಮೀ.ಮಿಮ್ಸ್ ಕಾರ್ಮಿಕ ಘಟಕದ ಚಿನ್ನರಾಜು ಜಗದೀಶ್.ರೋಸಿ.ಸರೋಜ.ಯಶೋಧಾ ಸೇರಿದಂತೆ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.


