ಶ್ರೀರಂಗಪಟ್ಟಣ ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಮಧ್ಯವರ್ತಿಯಾಗಿ ಸರ್ಕಾರಿ ನೌಕರನೆಂಬ ಸೋಗಿನಲ್ಲಿ ಸಾರ್ವಜನಿಕರಿಗೆ ಸರ್ಕಾರಿ ನೌಕರನೆಂದು ನಂಬಿಸಿ, ನಂಬಿಕೆ ಬರುವಂತೆ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು ಎಕರೆ ಕೈ ಬದಲಾಯಿಸಿದ್ದ ಆರೋಪಿಗಳೊಂದಿಗೆ ಶಾಮೀಲಾಗಿ ಬಂಧನಕೊಳಗಾಗಿದ್ದ ಎಡಿಎಲ್ ಆರ್ ಸರ್ವೇ ಸೂಪರ್ ವೈಸರು ಗೆ ನಿಯಮಬಾಹಿರವಾಗಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿರುವುದು ಕಾನೂನು ಸೇವೆಗಳ ಪ್ರಾಧಿಕಾರದ ಭೇಟಿಯಲ್ಲಿ ಬೆಳಕಿಗೆ ಬಂದಿದೆ. ಅನಧೀಕೃತವಾಗಿ ಸರ್ಕಾರಿ ತಂತ್ರಾಂಶದಲ್ಲಿ ಆಕಾರ್ಬಂದ್ ದಾಖಲೆಯನ್ನು ಡಿಜಿಟಲೀಕರಣ ಮಾಡಿರುವ ಮತ್ತು ರೆವಿನ್ಯೂ/ಸರ್ವೆ ಇಲಾಖೆಯ ವ್ಯವಹರಣೆಗೆ ಸಂಬಂಧಪಟ್ಟ ಸರ್ಕಾರಿ ನಕಲಿ ದಾಖಲೆ ಸೃಷ್ಟಿಸಿದ ಸಂಬಂಧ ಇದಕ್ಕೆ ಸಹಕಾರ ನೀಡಿರುವ ಮಹಮದ್ ಹುಸೇನ್ ADLR ಸರ್ವೆ ಸೂಪರ್ ವೈಸರ್ ರವರನ್ನು ದಿನಾಂಕ: 02.07.2026 ರಂದು ದಸ್ತಗಿರಿ ಮಾಡಿ ಮೊಕದ್ದಮೆ ಸಂಖ್ಯೆ 164/26 ಕಲಂ 61(2), 204, 316, (5), 318 (3), 335 , 336(3), 340(2),341 ಕೂಡ 149 ಬಿಎನ್ಎಸ್ ಕಾಯ್ದೆ ರೀತ್ಯಾ ದಾಖಲಿಸಲಾಗಿ ದಿನಾಂಕ 03.07.2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ವಿಧಿಸಿರುತ್ತದೆ.
ಆದಾಗಿಯೂ ಪ್ರಭಾವ ಬಳಸಿ ಜೈಲಿನ ಬದಲು ಚಿಕಿತ್ಸೆಯ ನೆಪವೊಡ್ಡಿ ಜಿಲ್ಲಾಸ್ಪತ್ರೆಯ ಪ್ರತ್ಯೇಕ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ.ಜತೆಗೊಬ್ಬ ಗೆಳತಿಯನ್ನು ವಾರ್ಡ್ ನಲ್ಲಿ ಇರಿಸಿಕೊಂಡಿರುವುದು ಕಾನೂನು ಸೇವೆಗಳ ಪ್ರಾಧಿಕಾರದ ಧಿಡೀರ್ ಭೇಟಿಯಲ್ಲಿ ಬಯಲಿಗೆ ಬಂದಿದೆ.
*ಮಂಡ್ಯ ಜಿಲ್ಲಾ ಕಾರಾಗೃಹ ಮತ್ತು ಮಿಮ್ಸ್ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ದಿಢೀರ್ ಭೇಟಿ*:
*ಆರೋಪಿಗೆ ಪ್ರತ್ಯೇಕ ಚಿಕಿತ್ಸೆ – ಕಾನೂನು ಉಲ್ಲಂಘನೆ ಪತ್ತೆ*
**************
ದಿನಾಂಕ: 24-08-2026 ರಂದು ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸಿ. ಹಾಗೂ ಗೌರವಾನ್ವಿತ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಶಶಿಧರ ಶೆಟ್ಟಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಬಾಲಸುಬ್ರಮಣಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಡಾ|| ಶ್ರೀ ಮೋಹನ್ ರಾವ್ ನಲ್ವಡೆ ರವರು ಹಾಗೂ ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಆನಂದ್. ಎಂ ರವರು ಸಂಜೆ ಮಿಮ್ಸ್ ಆಸ್ಪತ್ರೆಗೆ ಅನಿರೀಕ್ಷಿತವಾಗಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ, ಆರೋಪಿ ಮಹಮದ್ ಹುಸೇನ್ ADLR ಶ್ರೀರಂಗಪಟ್ಟಣ ರವರಿಗೆ ದಿನಾಂಕ: 21.08.2026 ರಿಂದ ಇಲ್ಲಿಯವರೆಗೂ ಪ್ರತ್ಯೇಕ ಕೋಣೆಯಲ್ಲಿ ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿರುವುದು ಹಾಗೂ ಸದರಿ ಕೊಠಡಿಯಲ್ಲಿ ಒಬ್ಬ ಮಹಿಳೆ ಸಹ ಇರುವುದು ಕಂಡು ಬಂದಿದ್ದು ಈ ಸಂದರ್ಭದಲ್ಲಿ ಆಸ್ಪತ್ರೆಯ ಅಧೀಕ್ಷಕರಾದ ಶಿವಕುಮಾರ್ ರವರನ್ನು ವಿಚಾರಿಸಿದಾಗ ಮಹಮದ್ ಹುಸೇನ್ ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ ಎಂದು ತಿಳಿಸಿರುತ್ತಾರೆ.
ಸ್ಥಳದಲ್ಲಿ ಹಾಜರಿದ್ದ ಜೈಲು ಸೂಪರಿಡೆಂಟ್ರವರನ್ನು ವಿಚಾರಿಸಿದಾಗ ಸದರಿಯವರು ಜೈಲಿನ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಆರೋಪಿ ಮಹಮ್ಮದ್ ಹುಸೇನ್ ರವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಸಿಲಾಗಿದ್ದು, ಸದರಿ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಿರುವುದಿಲ್ಲ ಇನ್ನು ಮುಂದೆ ತಿಳಿಸುವುದಾಗಿ ತಿಳಿಸಿರುತ್ತಾರೆ. ಹಾಗೂ ನ್ಯಾಯಾಲಯದ ಅನುಮತಿ ಪಡೆಯದೆ ಅನಧೀಕೃತವಾಗಿ ಆರೋಪಿಯನ್ನು ದಿನಾಂಕ: 21.08.2026 ರಿಂದ ಇಲ್ಲಿಯವರೆಗೂ ದಾಖಲಿಸಿರುವುದು ಸ್ಪಷ್ಟ ಕಾನೂನಿನ ಉಲ್ಲಂಘನೆ ಆಗಿರುವುದು ಹಾಗೂ ಆರೋಪಿಯ ಕೋಣೆಯಲ್ಲಿ ಒಬ್ಬ ಮಹಿಳೆಯು ಸಹ ಇರುವುದು ಕಂಡು ಬಂದಿದ್ದು, ಮೇಲ್ನೋಟಕ್ಕೆ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿರುವುದು ಕಂಡು ಬರುತ್ತದೆ. ಇದರ ಬಗ್ಗೆ ಜೈಲು ಸೂಪರಿಡೆಂಟ್ ಹಾಗೂ ಪೋಲೀಸ್ ಅಧಿಕಾರಿ ಹಾಗೂ ಮಿಮ್ಸ್ ಆಸ್ಪತ್ರೆಯ ಅಧೀಕ್ಷಕರವರಿಗೆ ವರದಿ ನೀಡುವಂತೆ ನಿರ್ದೇಶಿಸಲಾಗಿರುತ್ತದೆ.
ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆರೋಪಿಯ ಜೊತೆ ಇದ್ದಂತಹ ಮಹಿಳೆಯನ್ನು ವಿಚಾರಿಸಲಾಗಿ ಆಕೆಯು ಆರೋಪಿಯ ಗೆಳತಿ ತಾನು ಎಂಬುದಾಗಿ ತಿಳಿಸಿರುತ್ತಾರೆ.
ಉಪಲೋಕಾಯುಕ್ತರ ಧಾಳಿಯಲ್ಲಿ ಖಾಸಗಿ ಮಧ್ಯವರ್ತಿಗಳು ನಕಲಿ ದಾಖಲೆಗಳ ಮೂಲಕ ನೂರಾರು ಎಕರೆ ಭೂಮಿಯನ್ನು ಕೈ ಬದಲಾಯಿಸಿರುವುದು ಬೆಳಕಿಗೆ ಬಂದಿತ್ತು.
ಆದರೆ ಜೇಲಿಗೋದರೂ ಜೈಲಿನ ವೈದ್ಯಾಧಿಕಾರಿಗಳನ್ನು ಸರಿ ಮಾಡಿಕೊಂಡು ಮಿಮ್ಸ್ ವೈದ್ಯಕೀಯ ಅಧೀಕ್ಷಕರನ್ನು ಸರಿಯಾಗಿಸಿಕೊಂಡು ಅಲ್ಲಿಯೂ ರಾಜೋಪಚಾರ ಪಡೆಯುವಲ್ಲಿ ಆರೋಪಿ ಯಶಸ್ವಿಯಾಗಿರುವುದು ಇವರ ಕೈಗಳು ಎಷ್ಟು ಉದ್ದ ಇದೆಯೆಂದು ಸಾರ್ವಜನಿಕರ ಹುಬ್ಬೇರುವಂತೆ ಮಾಡಿದೆ.
*ಇದಲ್ಲದೆ ಅಗತ್ಯ ದಾಖಲೆ ನ್ಯಾಯಾಲಯದ ಅನುಮತಿ ಇಲ್ಲದಿದ್ದರೂ ಜೈಲು ಅಧಿಕಾರಿಗಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು.ಆರೋಪಿಗಾಗಿ ಪ್ರತ್ಯೇಕ ಕೋಣೆ ನೀಡಿರುವ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ನಡೆ ಅನುಮಾನಾಸ್ಪದವಾಗಿದ್ದು ಈ ಕುರಿತು ಅಗತ್ಯ ತನಿಖೆಯಿಂದ* ಮಾತ್ರವೆ ಹೂರಣ ಹೊರಬೀಳಲಿದೆ.


