ಎಪಿಕೆ ಫೈಲ್ ಕಳುಹಿಸಿ ಮೋಸ
ಇ-ಕೆವೈಸಿ ಹೆಸರಲ್ಲಿ ವಂಚನೆ
ತಮಕೂರು: ಇ-ಕೆವೈಸಿ ಅಪ್ಲೇಟ್
ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಿ ನಗರದ ಸಪ್ತಗಿರಿ ಬಡಾವಣೆಯ ಎಂ.ಎನ್. ಸುಮಲತಾ ಎಂಬುವರಿಗೆ ₹65 ಸಾವಿರ ವಂಚಿಸಲಾಗಿದೆ.
ಸುಮಲತಾ ತಮ್ಮಮೊಬೈಲ್ಗೆ ಬಂದ ಎಪಿಕೆ ಫೈಲ್ ಕ್ಲಿಕ್ ಮಾಡಿದ್ದಾರೆ. ನಂತರ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಇ-ಕೆವೈಸಿ ಬಗ್ಗೆ ತಿಳಿಸಿದ್ದಾರೆ.
ಯುಕೊ ಬ್ಯಾಂಕ್ನಿಂದ ಕರೆ ಮಾಡುತ್ತಿರುವುದಾಗಿ ಆರೋಪಿಗಳು ಪರಿಚಯ ಮಾಡಿಕೊಂಡಿದ್ದಾರೆ. ಆರೋಪಿಗಳು ತಿಳಿಸಿದಂತೆ ಸುಮಲತಾ ಎಪಿಕೆ ಫೈಲ್ನಲ್ಲಿ ಬ್ಯಾಂಕ್
ಖಾತೆಯ ವಿವರ ಸಲ್ಲಿಸಿದ್ದಾರೆ. ಒಟಿಪಿ ಹಂಚಿಕೊಂಡಿದ್ದಾರೆ.
ನಂತರ ಅನುಮಾನ ಬಂದು ಮೊಬೈಲ್ನಿಂದ ಸಿಮ್ ತೆಗೆದಿದ್ದಾರೆ. ವಂಚಕರು ಸುಮಲತಾ ಠೇವಣಿ ಇಟ್ಟಿದ್ದ ಹಣದ ಮೇಲೆ ಸಾಲ ಪಡೆದು, ಮತ್ತೊಂದು ಖಾತೆಗೆ ವರ್ಗಾಯಿಸಿ ಕೊಂಡಿದ್ದಾರೆ.
‘ನನ್ನ ಖಾತೆಯಲ್ಲಿದ್ದ ಎಫ್ಡಿ ಹಣದ ಮೇಲೆ ಸಾಲ ಪಡೆದು ವಂಚಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಮಲತಾ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
1.99 ಲಕ್ಷ ಕಳೆದುಕೊಂಡ ಮೆಕ್ಯಾನಿಕ್: ಗುಬ್ಬಿಯ ಮೆಕ್ಯಾನಿಕ್
ಸಿ.ಎಲ್.ವೆಂಕಟೇಶ ಎಂಬವರು ಗೂಗಲ್ ಪೇ, ಫೋನ್ಪೇ ಹೆಸರಿನ ಎಪಿಕೆ ಫೈಲ್ ಕ್ಲಿಕ್ ಮಾಡಿ ₹1.99 ಲಕ್ಷ ಕಳೆದುಕೊಂಡಿದ್ದಾರೆ. ಅವರ ಎರಡು ಬ್ಯಾಂಕ್ ಖಾತೆಗಳಿಂದ ಹಣ ಕಡಿತವಾಗಿದೆ.
ಕೆನರಾ ಬ್ಯಾಂಕ್ ಖಾತೆಯಿಂದ ₹90 ໖, ₹4,400, ₹5,500, ಎಚ್ಡಿಎಫ್ಸಿ ಬ್ಯಾಂಕ್ನಿಂದ ₹1 ಲಕ್ಷ ವರ್ಗಾವಣೆ ಮಾಡಿ ಕೊಳ್ಳಲಾಗಿದೆ. ಬ್ಯಾಂಕ್ಗಳಿಗೆ ಹೋಗಿ ವಿಚಾರಿಸಿದಾಗ ಹಣ ಕಡಿತದ ಬಗ್ಗೆ ಗೊತ್ತಾಗಿದೆ. ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.


