ಮೈಶುಗರ್ ಕಾರ್ಮಿಕನ ದುರಂತ ಸಾವು:ಮೈಶುಗರ್ ಆಡಳಿತ ಹೊಣೆ
ಬಾಯ್ಲರ್ ಗೆ ಬಿದ್ದು ಸಾವನ್ನಪ್ಪಿದ ಮೈಶುಗರ್ ಹೊರಗುತ್ತಿಗೆ ಕಾರ್ಮಿಕನ ದುರಂತ ಸಾವಿಗೆ ಮೈಶುಗರ್ ಆಡಳಿತ ಮಂಡಳಿ ಹೊಣೆಯಾಗಿದ್ದು.ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳದ ಕಾರ್ಖಾನೆಯ ಎಂಡಿ ಹಾಗೂ ಅಧ್ಯಕ್ಷ ಜೋಭದ್ರಗೇಡಿಗಳು ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಆಪಾದಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು.
ಬಾಯ್ಲರ್ ಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿದ ತಕ್ಷಣ ಸ್ಥಳದಲ್ಲಿದ್ದು ಕುಟುಂಬಕ್ಕೆ ಸಾಂತ್ವಾನ ಹೇಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬದಲು ಜನರ ಆಕ್ರೋಶ ತಪ್ಪಿಸಿಕೊಳ್ಳಲು ಮೈಶುಗರ್ ಅಧ್ಯಕ್ಷ ಸಿಡಿ ಗಂಗಾಧರ್ ಪರಾರಿಯಾಗಿದ್ದಾರೆ.
ಸಾವಿನ ಸುದ್ದಿ ತಿಳಿದರೂ ಎಂಡಿ ಮಂಗಲ್ ದಾಸ್ ಸ್ಥಳಕ್ಮೆ ಆಗಮಿಸಲಿಲ್ಲ.ಜಿಲ್ಲೆಯ ಯಾವೊಬ್ಬ ಶಾಸಕನೂ ಸ್ಥಳಕ್ಕೆ ಭೇಟಿ ನೀಡದೆ ತಮ್ಮ ಹೊಣೆಗಾರಿಕೆ ಮರೆತಿದ್ದಾರೆ.
ಇದಲ್ಲದೆ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಅಗತ್ಯ ಕನಿಷ್ಟ ವೇತನ. ಭವಿಷ್ಯ ನಿಧಿ ಇಎಸ್ ಐ ನೀಡದೆ ದುಡಿಸಿಕೊಳ್ಳುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಅಗತ್ಯ ಕ್ರಮವಹಿಸದೆ ಗುತ್ತಿಗೆ ಏಜೆನ್ಸಿಗಳೊಂದಿಗೆ ಶಾಮೀಲಾಗಿ ನಿಷ್ಕ್ರಿಯತೆ ತೋರಿವೆ.
ಕಾರ್ಮಿಕ ಕಾಯ್ದೆಗಳ ಜಾರಿಯಲ್ಲಿ ಲೋಪ ತೋರಿದ ಈ ಇಲಾಖೆಗಳ ಮುಖ್ಯಸ್ಥರ ಮೇಲೆ ಅಗತ್ಯ ಶಿಸ್ತುಕ್ರಮ ಜರುಗಬೇಕು.
ಪರಿಸ್ಥಿತಿ ನಿಭಾಯಿಸದೆ ಪರಾರಿಯಾದ ಸಿ.ಡಿ ಗಂಗಾಧರ್ ಹಾಗೂ ಮಂಗಲ್ ದಾಸ್ ಮಂಡ್ಯ ಜಿಲ್ಲೆಯ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಮೈಶುಗರ್ ಆಡಳಿತ ಮಂಡಳಿಯ ವಿರುದ್ದದ ಆರೋಪಗಳ ವಿರುದ್ದ ತನಿಖೆಗೆ ನೇಮಕವಾಗಿದ್ದ ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತರ ವರದಿಯಲ್ಲಿ ಬಹುತೇಕ ಆರೋಪಗಳು ಸಾಬೀತಾಗಿದ್ದು ವರದಿ ಅಂಗೀಕರಿಸದಂತೆ ರಾಜಕೀಯ ಒತ್ತಡ ಹೇರಲಾಗುತ್ತಿದೆ.
ಜಿಲ್ಲೆಯ ಸಕ್ಕರೆ ಕಾರ್ಖಾನೆ ಲೂಟಿ ಹೊಡೆದವರಿಗೆ ಆಡಳಿತ ಪಕ್ಷವೇ ಬೆಂಬಲವಾಗಿ ನಿಂತಿರುವುದು ನಿಜಕ್ಕು ವಿಪರ್ಯಾಸಕರವಾಗಿದೆ.
ಕೂಡಲೇ ಮೃತ ಚರಣ್ ಕುಟುಂಬಕ್ಕೆ ಕನಿಷ್ಟ ೨೫ ಲಕ್ಷ ಪರಿಹಾರ ಘೋಷಿಸಬೇಕು.
ಕಾರ್ಮಿಕರಿಗೆ ಅಗತ್ಯ ಕನಿಷ್ಟ ವೇತನ.ಇಎಸ್ ಐ ಫಿಎಫ್ ಹಾಗು ಸುರಕ್ಷಾ ಕ್ರಮಗಳನ್ನು ಅಳವಡಿಸಬೇಕು.
ಸಚಿವರ ಓಲೈಕೆಗಾಗಿ ಲಡ್ಡು ಹಂಚುವ.ಮಂಡ್ಯ ರೈತರಿಗೆ ಬೆಂಗಳೂರಿನಲ್ಲಿ ಬಟವಾಡೆ ಕೊಡಿಸುವ ಚಿಲ್ಲರೆ ಗಿಮಿಕ್ ಗಳನ್ನು ಕೂಡಲೇ ಕೈಬಿಟ್ಟು ಕಾರ್ಖಾನೆಯನ್ನು ಸಮರ್ಥವಾಗಿ ನಡೆಸಲು ಪೂರ್ಣಪ್ರಮಾಣದ ಆಡಳಿತಾಧಿಕಾರಿ ನೇಮಕಗೊಳಿಸಿ ಆದೇಶ ಹೊರಡಿಸಲಿ.
ಗಂಗಾಧರ್ ಹಾಗೂ ಮಂಗಲ್ ದಾಸ್ ಜೋಡಿಯ ಭ್ರಷ್ಟಚಾರದ ಕುರಿತು ತನಿಖಾ ಸಮಿತಿಯ ವರದಿ ಮಂಡನೆಗೆ ಹಾಗೂ ಕ್ರಮಕ್ಕೆ ಸ್ವತಃ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಲಿ ಎಂದು ಒತ್ತಾಯಿಸಿದರು.
ಮಾಹಿತಿ ಹಕ್ಕು ಕಾಯ್ದೆ ನಿಷ್ಕ್ರಿಯ: ಕಾರ್ಖಾನೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಯಾವುದೆ ಅರ್ಜಿಗಳಿಗೆ ಮಾಹಿತಿ ಒದಗಿಸುತ್ತಿಲ್ಲ.ಗಂಗಾಧರ್ ಹಾಗೂ ಮಂಗಲ್ ದಾಸ್ ಜೋಡಿಯ ಸಾಲು ಸಾಲು ಭ್ರಷ್ಟಾಚಾರದ ಸರಣಿಗಳು ಆಚೆ ಬರದಂತೆ ಕಾಯ್ದೆಯನ್ನು ನಿಷ್ಕ್ತಿಯಗೊಳಿಸಲಾಗಿದೆ.ಮಾಹಿತಿ ನೀಡಿ ಎಂದು ಸ್ವತಃ ಜಿಲ್ಲಾಧಿಕಾರಿಗಳು ಪತ್ರ ಬರೆದರೂ ಅದು ಕಾಲಕಸವಾಗಿದೆ.ಆಡಳಿತ ಪಕ್ಷವೇ ಇವರ ಭ್ರಷ್ಟಚಾರಕ್ಕೆ ಬೆಂಗಾವಲಾಗಿರುವುದೆ ಇದಕ್ಕೆಲ್ಲ ಕಾರಣವಾಗಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೋಹಿಣಿ ಸಿಂಧೂರಿಯವರು ರಾಜಕೀಯ ಒತ್ತಡಕ್ಕೆ ಮಣಿಯದೆ ಮೈಶುಗರ್ ಭ್ರಷ್ಟಾಚಾರದ ವಿರುದ್ದ ಅಗತ್ಯ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲೇಶ್ ಆಗ್ರಹಪಡಿಸಿದರು.
ಕಬ್ಬು ಸರಬರಾಜಿನಲ್ಲಿ ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡದೆ ತಾರತಮ್ಯ ಎಸಗಲಾಗುತ್ತಿದೆ.ಇದು ನಿಲ್ಲಬೇಕು.ಸ್ಥಳೀಯ ಲಾರೀಗಳಿಗೆ ಕಬ್ಬು ಸಾಗಾಣಿಕೆಯಲ್ಲಿ ಆದ್ಯತೆ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕರವೇ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ಎಚ್ಚರಿಸಿದರು. ಗೋಷ್ಡಿಯಲ್ಲಿ ಕರವೇ ಘಟಕದ ಆಟೋ ವೆಂಕಟೇಶ್. ಸೋಮಶೇಖರ.ಗೋವಿಂದರಾಜ್.ರಾಜಾ ವೆಂಕಟೇಶ್ ನಾಯಕ್ ಇದ್ದರು


