Sunday, October 25, 2026
spot_img

ಮಂಡ್ಯ ಮನ್ ಮುಲ್:ಅಂದು ಹಾಲು ನೀರು ಹಗರಣ! ಇಂದು ಕಲಬೆರಕೆ ಹಗರಣ

ಮನ್ ಮೂಲ್ ಅಂದು ಹಾಲು ನೀರು ಹಗರಣ ಈಗ ಕಲಬೆರಕೆ !

ಮನ್ ಮೂಲ್ ಆಡಳಿತ ಮಂಡಳಿಗೂ ಭ್ರಷ್ಡಚಾರಕ್ಕು ಬಿಟ್ಟಿರಲಾರದ ನಂಟು ಎಂಬುದು ಕಲಬೆರೆಕೆ ಹಗರಣ ಮುನ್ನೆಲೆಗೆ ಬರುವುದರೊಂದಿಗೆ ಸಾಬೀತಾಗಿದೆ.

ಈ ಹಿಂದೆ ಮೆಗಾಡೈರಿ ಹಗರಣದಲ್ಲಿ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಕೋಟಿಗಟ್ಟಲೆ ಅವ್ಯವಹಾರ ನಡೆಸಿದ್ದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ದ ಸ್ವತ ಹೈಕೋರ್ಟ್ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಲೂಟಿ ಹೊಡೆದ ಹಣವನ್ನು ಮರು ವಸೂಲಿಗೆ ಆದೇಶಿಸಿತು.

೨೦೧೯ ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಮಂಡ್ಯದ ಮನ್ ಮೂಲ್ ಆಡಳಿತ ಮಂಡಳಿಯನ್ನು ಇದೇ ಕಾರಣಕ್ಕೆ ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿದರು.
ಆದರೆ ಕುಮಾರಸ್ವಾಮಿಯ ಪತನವಾಗುತ್ತಿದ್ದಂತೆ ಯಡಿಯೂರಪ್ಪ ಮೂಲಕ ಸೂಪರ್ ಸೀಡ್ ಆದೇಶ ಹಿಂಪಡೆಯುವಂತೆ ಮಾಡುವಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಅಂದಿನ ಸಂಸದೆ ಸುಮಲತಾ ಯಶಸ್ವಿಯಾದರು.

ಅಲ್ಲೀಗೆ ಮೆಗಾಡೈರಿ ಹಗರಣ ಹಳ್ಳ ಹಿಡಿಯಿತು.
ನಂತರ ನಡೆದ ನೇಮಕಾತಿ ಹಗರಣದ್ದು ಇದೇ ಕತೆ.ಅವಶ್ಯಕತೆಯಿಲ್ಲದಿದ್ದರೂ ನೇಮಕಾತಿಗಳನ್ನು ನಡೆಸಲಾಯಿತು. ಇದಕ್ಕಾಗಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಯಿತು.
ಇದು ಸಹ ಯಾವುದೆ ಕ್ರಮವಾಗದೆ ಉಳಿಯಿತು.
ನಂತರದಲ್ಲಿ ಹಾಲು ನೀರು ಹಗರಣ ಇಡೀ ರಾಜ್ಯದ ಗಮನ ಸೆಳೆಯಿತು.

ತೆಲುಗಿನ ಪುಷ್ಪಾ ಸಿನಿಮಾದಲ್ಲಿ ಅರಣ್ಯದಿಂದ ರಕ್ತ ಚಂದನ ಸಾಗಿಸಲು ಹಾಲಿನ ಟ್ಯಾಂಕರುಗಳ ಅರ್ಧಕ್ಕೆ ಹಾಲು ತುಂಬಿ ಇನ್ನು ಅರ್ಧ ಭಾಗಕ್ಕೆ ರಕ್ತ ಚಂದನ ತುಂಬಿ ಅರಣ್ಯಾಧಿಕಾರಿಗಳನ್ನು ಯಾಮಾರಿಸುವ ಕಥನವನ್ನು ಪುಷ್ಪಾ ಸಿನಿಮಾಕ್ಕು ಮುಂಚೆಯೆ ಮಂಡ್ಯ ಮನ್ ಮೂಲ್ ನ ಆಡಳಿತ ಮಂಡಳಿ ಅದೇ ಮಾದರಿಯ ಚಿತ್ರಕಥೆಯನ್ನು ಮಂಡ್ಯದಲ್ಲಿ ಬರೆದಿತ್ತು..

ಬಹುಶಃ ಪುಷ್ಪಾ ಸಿನಿಮ ನಿರ್ದೇಶಕರು ಮನ್ ಮೂಲ್ ನಿಂದಲೆ ಪ್ರೇರಣೆ ಪಡೆದಿರಬಹುದು!
ಈ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಪ್ತರ ಹೆಸರು ಕೇಳಿ ಬಂದರೂ ಹಾಲು ನೀರು ಹಗರಣವನ್ನು ದಕ್ಕಿಸಿಕೊಳ್ಳುವಲ್ಲಿ ಮನ್ ಮುಲ್ ಆಡಳಿತ ಮಂಡಳಿ ಯಶಸ್ವಿಯಾಗಿತ್ತು.

ಹಾಲಿನ ಡೈರಿಗಳ ತಳಮಟ್ಟದಲ್ಲೆ ಆರಂಭವಾಗುವ ಭ್ರಷ್ಟಾಚಾರ ಈಗ ಹಾಲಿನ ಪುಡಿ ಕಲಬೆರಕೆ ಹಗರಣಕ್ಕೆ ಮುನ್ನುಡಿ ಬರೆದಿದೆ ಎಂಬುದಕ್ಕಿಂತ ಮನ್ ಮೂಲ್ ಡೈರಿಯಲ್ಲಿ ಹೊಸ ಹೊಸ ಪರಿಕಲ್ಪನೆಗಳನ್ನು ಹಾಲಿ ವುಡ್ ರೆಂಜಿಗೆ ಚಿತ್ರಕಥೆ ರೂಪಿಸುತ್ತಿರುವುದು ನಿಜಕ್ಕು ಅದ್ಬುತವೇ ಸರಿ.ಸ್ಯಾಂಡಲ್ ವುಡ್ ನವರಿಗೆ ಬೇಕಾದ ಚಿತ್ರಕಥೆಗಳು ಇಲ್ಲಿ ದಂಡಿಯಾಗಿ ಸಿಗುತ್ತವೆ‌.ಕನ್ಮಡ ಸಿನಿಮಾ ರಂಗ ಇವರನ್ನು ಬಳಸಿಕೊಳ್ಳಬೇಕಷ್ಟೆ.

ಅಸಲಿ ವಿಷಯಕ್ಕೆ ಬರೋದಾದ್ರೆ ಮನ್ ಮೂಲ್ ಗೇ ಸೇರಿದ ಹಾಲಿನ ಪುಡಿಯನ್ನು ದಾಸ್ತಾನು ಮಾಡಲು ಮನ್ ಮೂಲ್ ಗೋಧಾಮುಗಳನ್ನು ಬಾಡಿಗೆಗೆ ಪಡೆಯುತ್ತದೆ.
ಹೀಗೆ ಗೋಧಾಮುಗಳನ್ನು ಬಾಡಿಗೆಗೆ ಪಡೆದಾಗ ಆ ಗೋಧಾಮಿಗೆ ಅಗತ್ಯ ಭದ್ರತಾ ಸಿಬ್ಬಂದಿ ಒದಗಿಸಿ ಸಿಸಿ ಕ್ಯಾಮೆರಾ ಹಾಕಿ ಭದ್ರ ಮಾಡಿಕೊಳ್ಳುವುದು ಮನ್ ಮುಲ್ ಜವಾಬ್ದಾರಿ. ಆದರೆ ಈ ಪ್ರಕರಣದಲ್ಲಿ ಗೋಧಾಮು ನೇರವಾಗಿ ಪಡೆಯಲು ಮಧ್ಯವರ್ತಿ ಮೂಲಕ ಗೋಧಾಮು ಬಾಡಿಗೆಗೆ ಪಡೆದು ಅದರಲ್ಲು ದುಡ್ಡು ನುಂಗಲಾಗುತ್ತದೆ.

ಗೋಧಾಮು ತಪಾಸಣೆ ನಡೆಸಿದಾಗ ಅದರಲ್ಲಿ ನಿಗದಿತ ಸ್ಟಾಕ್ ಕಡಿಮೆಯಿರುವುದು ಕಂಡು ಬರುತ್ತದೆ‌.ನಿಗದಿತ ಸ್ಟಾಕ್ ಕಡಿಮೆಯಾಗಿರುವ ಕುರಿತು ಯಾವುದೆ ತನಿಖೆ ಮಾಡದೆ ಗೋಧಾಮು ಒದಗಿಸಿದ ಮಧ್ಯವರ್ತಿಯ ಮೂಲಕ ಕಾಣೆಯಾಗಿರುವ ಸ್ಟಾಕ್ ಬದಲಿಗೆ ಸ್ಟಾಕ್ ಮೌಲ್ಯದ ಚೆಕ್ ಪಡೆಯಲಾಗುತ್ತದೆ.
ನಂತರ ಆ ಚೆಕ್ ಗಳು ಬೌನ್ಸಾಗುತ್ತದೆ.

ಈ ನಡುವೆ ಗೋಧಾಮುಗಳಲ್ಲಿದ್ದ ಮನ್ ಮೂಲ್ ಹಾಲಿನ ಪುಡಿ ಕಳಪೆ ಹಾಗೂ ಅಸುರಕ್ಷಿತ ಎಂಬ ವರದಿಗಳು ಸರ್ಕಾರದ ಪ್ರಯೋಗಾಲಯಗಳಿಂದ ಹೊರಬೀಳುತ್ತದೆ.

ಈ ಗೋದಾಮುಗಳಿಂದ ಮನ್ ಮುಲ್ ಹಾಲಿನ ಪುಡಿಗೆ ಒಣಗೆಣಸು ಇತ್ಯಾದಿ ಕಲಬೆರಕೆ ಮಾಡಿ ನಂದಿನಿ ಹೆಸರಲ್ಲಿ ಮಾರುಕಟ್ಟೆಗೆ ಬಿಟ್ಟು ಬ್ರಾಂಡ್‌ ಕೆಡಿಸುವ ಜತೆಗೆ ಸಾಕಷ್ಟು ದುಡ್ಡು ಲೂಟಿ ಹೊಡೆಯಲಾಗುತ್ತದೆ.

ಈ ರೀತಿಯ ಕಲಬೆರಕೆಯಿಂದ ದಿನವೊಂದಕ್ಕೆ ಹನ್ನೆರಡು ಲಕ್ಷ ಎಲ್ಲರಿಗೂ ಹಂಚಿಕೆಯಾಗುತಿತ್ತು ಎನ್ನಲಾಗಿದೆ.

ಇದಿಷ್ಟೇ ಆಗಿದ್ದರೆ ಹಾಲು ನೀರಿನಂತೆ ಕಲಬೆರಕೆ ಪುಡಿಯನ್ನು ಜೀರ್ಣಿಸಿಕೊಳ್ಳುವ ಶಕ್ತಿ ಈ ಗಿರಾಕಿಗಳಿಗಿತ್ತು.
ಯಾವಾಗ ಉಪಲೋಕಾಯುಕ್ತ ಧಾಳಿ ಮಾಡಿ ಸುಮೋಟೋ ಪ್ರಕರಣ ದಾಖಲಿಸಿಕೊಂಡರೋ ಆಹಾರ ಸುರಕ್ಷತಾ ಅಧಿಕಾರಿಗಳು ಪ್ರಕರಣ ದಾಖಲಿಸುವುದು ಅನಿವಾರ್ಯವಾಗಿದೆ.

ಈ ನಡುವೆ ಹಲವರ ಬಂಧನವಾಗಿದೆಯಾದರೂ ಈ ಹಗರಣದ ಕಿಂಗ್ ಮೇಕರುಗಳಾದ ಮನ್ ಮೂಲ್ ಕೆಲ ನಿರ್ದೇಶಕರು ಅಧಿಕಾರಿಗಳು ಪೋಲಿಸರ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಈ ನಡುವೆ ಇಡೀ ಪ್ರಕರಣವನ್ನು ತಿಪ್ಪೆ ಸಾರಿಸಲು ಪೋಲಿಸ್ ಕ್ರಮ ಜರುಗಿಸದಂತೆ ಜಿಲ್ಲೆಯ ಪ್ರಭಾವಿ ನಾಯಕರೊಬ್ಬರು ತೀವ್ರ ಪ್ರಯತ್ನ ನಡೆಸಿದ್ದಾರೆ.ಇದಕ್ಕಾಗಿ ಡಿ.ಕೆ ಸುರೇಶ್ ಮೊರೆ ಹೋಗಿದ್ದಾರೆ.

ಈ ನಡುವೆ ಸಚಿವರೊಬ್ಬರ ನೇತೃತ್ವದಲ್ಲಿ ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಮನ್ ಮೂಲ್ ಆಡಳಿತ ಮಂಡಳಿಯ ಸಭೆ ನಡೆದಿದ್ದು.ಸಭೆಯು ಹಾಕಿದ ಷರತ್ತುಗಳನ್ನು ಆಡಳಿತ ಮಂಡಳಿ ಸದಸ್ಯರು ಪೂರೈಸಲು ಸಾಧ್ಯವಾಗದೆ ಸಭೆ ವಿಫಲವಾಗಿದೆ.

ಸದ್ಯ ಹಾಲು ನೀರು ಹಗರಣ.ಹಾಲಿನ ಪುಡಿ ಕಲಬೆರಕೆಯಿಂದ ಮಾರುಕಟ್ಟೆಯಲ್ಲಿ ನಂದಿನಿ ಬ್ರಾಂಡಿಗೆ ಧಕ್ಕೆ ತಂದಿದೆ.ಇದು ನೇರವಾಗಿ ಜಿಲ್ಲೆಯ ೧.೧೬ ಲಕ್ಷ ಹೈನುಗಾರರ ಬದುಕನ್ನು ಬೀದಿಗೆ ತರಲಿದೆ.

ಡೈರಿಗಳ ತಳಮಟ್ಟದಿಂದ ಆರಂಭವಾಗುವ ಭ್ರಷ್ಟಾಚಾರ. ಕೋಟಿಗಟ್ಟಲೆ ಚೆಲ್ಲಿ ಅಧಿಕಾರ ಹಿಡಿವ ನಿರ್ದೇಶಕರು‌.ಅಧಿಕಾರಿಗಳು ಒಟ್ಟುಗೂಡಿ ಇಡೀ ಸಹಕಾರ ಕ್ಷೇತ್ರವನ್ನು ಮುಳುಗಿಸುತ್ತಿದ್ದರೂ ಹೈನುಗಾರರು ತಮಗೂ ಇದಕ್ಕು ಸಂಬಂದವಿಲ್ಲದಂತಿದ್ದಾರೆ.

ಇದಲ್ಲದೆ ಮನ್ ಮೂಲ್ ಹಾಲಿನ ಟ್ಯಾಂಕರು ಹಾಗೂ ನಂದಿನಿ ಪಾರ್ಲರ್ ಗಳ ಹಂಚಿಕೆ.ಕಚ್ಚಾವಸ್ತುಗಳ ಖರೀದಿಯಲ್ಲು ಕೋಟಿಗಟ್ಟಲೆ ಹಗರಣವಾಗಿದ್ದು.ಸಿಬಿಐ ತನಿಖೆ ಮಾತ್ರವೇ ಇದಕ್ಕೆಲ್ಲ ಮುಕ್ತಿ ಕೊಡಬಲ್ಲದು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!