Tuesday, November 10, 2026
spot_img

ಹಾಸನ ಡಿಸಿ ಮೇಲೆ ಆರೋಪ:ಕುಮಾರಸ್ವಾಮಿಗೆ ಶೋಭೆಯಲ್ಲ.

ಸತ್ಯ ಬಹಿರಂಗವಾಗಲಿ: ಕೆಎಂಶಿ

‘ಈ ರೀತಿ ಆರೋಪ ಮಾಡುವುದು ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ’

 

ಹಾಸನ: ಎಐ ಮೂಲಕ ನಕಲಿ ವಾಟ್ಸ್ಆ್ಯಪ್ ಸಂಭಾಷಣೆ ಸೃಷ್ಟಿಸಿ ಯಾರ ಮೇಲಾದರೂ ಆರೋಪ ಮಾಡಬಹುದು. ಆದರೆ, ಯಾವುದೇ ಪರಿಶೀಲನೆ ನಡೆಸದೇ ಅನಾಮಧೇಯ ವ್ಯಕ್ತಿಗಳು ನೀಡಿದ ಚಾಟ್ ಅನ್ನು ಸಾರ್ವ-ಜನಿಕವಾಗಿ ಬಿಡುಗಡೆ ಮಾಡುವುದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ಶೋಭೆ ತರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿ-ಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ತಮ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳಿಗೆ ಸ್ಪಷ್ಟನೆ ನೀಡಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬಿಡುಗಡೆ ವಾಟ್ಸ್ಆ್ಯಪ್ ಮಾಡಿರುವ

ಜಿಲ್ಲಾಧಿಕಾರಿ ಸಂಭಾಷಣೆಯಲ್ಲಿ ಕಚೇರಿಯ ಸಿಬ್ಬಂದಿ ಶಶಿಕಿರಣ್ ಹೆಸರು ಮಾತ್ರ ಕಾಣಿಸುತ್ತದೆ. ಆದರೆ, ಅವರೊಂದಿಗೆ ಸಂಭಾಷಣೆ ನಡೆಸಿರುವ ಮತ್ತೊಬ್ಬ ವ್ಯಕ್ತಿಯ ಹೆಸರಾಗಲಿ, ದೂರವಾಣಿ ಸಂಖ್ಯೆಯಾಗಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಈ ಸಂಭಾಷಣೆಯ ಪ್ರತಿ ತಮಗೆ ಯಾರು ನೀಡಿದ್ದಾರೆ ಎಂಬುದನ್ನೂ ಕುಮಾರಸ್ವಾಮಿ ಬಹಿರಂಗಪಡಿಸಿಲ್ಲ. ರಾತ್ರಿ ಯಾರೋ ತಂದುಕೊಟ್ಟಿದ್ದಾರೆ ಎಂದು ಹೇಳುವ ಬದಲು, ಅದರ ಮೂಲವನ್ನು ಬಹಿರಂಗಪಡಿಸಿ, ಸತ್ಯಾಸತ್ಯತೆ ಪರಿಶೀಲಿಸಿದ ನಂತರ ಆರೋಪ ಮಾಡಬೇಕಿತ್ತು ಎಂದು ಹೇಳಿದರು.

ಇಂದಿನ ಎಐ ಯುಗದಲ್ಲಿ ಯಾರ ಹೆಸರಿನಲ್ಲಿ ಬೇಕಾದರೂ ಸಂಭಾಷಣೆ ಸೃಷ್ಟಿಸಿ, ಅದನ್ನು ನಿಜವೆಂದು ಬಿಂಬಿಸುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಇಬ್ಬರ ನಡುವೆ ನಡೆದಿರುವ ಸಂಭಾಷಣೆ ಎಂದು ಹೇಳಿ, ಯಾವುದೇ ಸಾಕ್ಷಾಧಾ-ರಗಳಿಲ್ಲದೇ ಆರೋಪ ಮಾಡುವುದು ಸರಿಯಲ್ಲ. ಜವಾಬ್ದಾರಿಯುತ ಕೇಂದ್ರ

20 ವರ್ಷ ನಿಮ್ಮೊಂದಿಗಿದ್ದೆ, ಲಂಚ ಪಡೆದಿದ್ದರೆ ತೋರಿಸಿ: ಸವಾಲು

ಕುಮಾರಸ್ವಾಮಿ ಅವರೊಂದಿಗೆ ಸುಮಾರು 20 ವರ್ಷಗಳ ಕಾಲ ಒಟ್ಟಿಗೆ ರಾಜಕೀಯವಾಗಿ ಕೆಲಸ ಮಾಡಿದ್ದೇನೆ. ಆ ಅವಧಿಯಲ್ಲಿ ನನ್ನ ವಿರುದ್ಧ ಐದು ಪೈಸೆ ಲಂಚ ಪಡೆದಿರುವ ಆರೋಪವನ್ನಾದರೂ ಸಾಬೀತುಪಡಿಸಲು ಸಾಧ್ಯವಿದೆಯೇ ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು.

‘ಕುಮಾರಣ್ಣ, ನೀವು ನಮ್ಮನ್ನು ಚೆನ್ನಾಗಿ ಬಲ್ಲವರು. ರಾಜಕೀಯದಲ್ಲಿ ಭಿನ್ನಾಭಿ-ಪ್ರಾಯಗಳು ಸಹಜ. ನೀವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬ ಕಾರಣಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ. ಅದು ನಿಮ್ಮ ರಾಜಕೀಯ ನಿರ್ಧಾರ. ಆದರೆ, ಶಿವಲಿಂಗೇಗೌಡ ಸಚಿವನಾಗಿದ್ದಾನೆ ಎಂಬ ಅಸೂಯೆಯಿಂದ ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ. ನಾವು ಬಡವರ ಮಕ್ಕಳು.

ರಾಜಕೀಯಕ್ಕೆ ಬಂದು ಕಷ್ಟಪಟ್ಟು ಬೆಳೆದು ಬಂದಿದ್ದೇವೆ. ನಮ್ಮ ಮೇಲೆ ಇಂತಹ ಬ್ರಹ್ಮಾಸ್ತ್ರ ಪ್ರಯೋಗ ಮಾಡಬೇಡಿ’ ಎಂದು ಮನವಿ ಮಾಡಿದರು.

ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಸಾಬೀತಾದರೆ ಅದರಿಂದ ಉಂಟಾಗಿರುವ ಮಾನಹಾನಿಗೆ ಯಾರು ಹೊಣೆ ಹೊರುತ್ತಾರೆ? ಒಬ್ಬ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವುದು ಅಷ್ಟು ಸುಲಭದ ವಿಚಾರವಲ್ಲ. ಸುಳ್ಳು ಆರೋಪ ಮಾಡಿದವರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವ ಬಗ್ಗೆ ಚಿಂತಿಸಲಾಗುವುದು ಎಂದು ಎಚ್ಚರಿಸಿದರು.

“ಆರೋಪ ಸಾಬೀತಾದರೆ ಸಚಿವ ಸ್ಥಾನದಿಂದ ತೆಗೆದುಹಾಕಿ’

ತಮ್ಮ ವಿರುದ್ಧ ಗಂಭೀರ ಆರೋಪಗಳಿದ್ದು, ಯಾರಾದರೂ ದೂರುದಾರರು ಸೂಕ್ತ ಸಾಕ್ಷಾಧಾರಗಳೊಂದಿಗೆ ಮುಂದೆ ಬಂದರೆ ತನಿಖೆ ನಡೆಸಲಿ. ತಾವು ತಪ್ಪು ಮಾಡಿರುವುದು ಸಾಬೀತಾದರೆ ಸಚಿವ ಸ್ಥಾನದಿಂದ ತೆಗೆದುಹಾಕಲಿ. ಅದಕ್ಕೆ ತಮ್ಮ ವಿರೋಧವಿಲ್ಲ ಎಂದು ಶಿವಲಿಂಗೇಗೌಡ ಸವಾಲು ಹಾಕಿದರು.

‘ನನ್ನ ಮೇಲೆ ಆರೋಪ ಮಾಡುವುದಾದರೆ ನೇರವಾಗಿ ದೂರು ನೀಡಿ, ಸಾಕ್ಷಾಧಾರಗಳನ್ನು ಒದಗಿಸಿ. ಪ್ರಕರಣ ದಾಖಲಿಸಿ, ಬಂಧಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಹಿಟ್ ಆ್ಯಂಡ್ ರನ್ ಮಾದರಿಯಲ್ಲಿ ಆರೋಪ ಮಾಡಿ, ನಿರಪರಾಧಿಗಳ ಮಾನಹಾನಿ ಮಾಡುವುದು ಸರಿಯಲ್ಲ. ಈ ಹಿಂದೆ ಪೆನ್‌ಡ್ರೈವ್ ವಿಚಾರದಲ್ಲಿಯೂ ಹಲವು ಆರೋಪಗಳನ್ನು ಮಾಡಲಾಗಿತ್ತು. ಇಂತಹ ಆರೋಪಗಳಿಂದ ಯಾರಿಗೂ ನೆಮ್ಮದಿ ಇರುವುದಿಲ್ಲ’ ಎಂದು ಟೀಕಿಸಿದರು.

ಸಚಿವರಾಗಿರುವ ಕುಮಾರಸ್ವಾಮಿ ಅವರು ಇಂತಹ ಸೂಕ್ಷ್ಮ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಿತ್ತು. ಈ ಚಾಟ್ ಅನ್ನು ತಂದುಕೊಟ್ಟವರು ಯಾರು ಎಂಬುದನ್ನು ಧೈರ್ಯವಾಗಿ ಬಹಿರಂಗಪಡಿಸಲಿ ಎಂದು ಸವಾಲುಹಾಕಿದರು.

‘ಕುಮಾರಣ್ಣ. ನೀವು ದೆಹಲಿಯವರೆಗೆ ಹೋಗಿ ಇಂತಹ ಚಾಟ್ ಬಿಡುಗಡೆ ಮಾಡುವ ಮಟ್ಟಕ್ಕೆ ಹೋಗಿದ್ದೀರಲ್ಲ, ಇದು ಸರಿಯೇ? ಈ ಚಾಟ್ ಸತ್ಯವೋ, ಸುಳ್ಳೋ ಎಂಬುದನ್ನು ಮೊದಲು ಪರಿಶೀಲಿಸಬೇ-ಕಿತ್ತು. ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಇದು ಸುಳ್ಳು ಎಂಬುದು ಸಾಬೀತಾದರೆ ನಿಮ್ಮ ಘನತೆ ಮತ್ತು ಗೌರವಕ್ಕೆ ಏನಾಗುತ್ತದೆ ಎಂಬುದನ್ನು ಯೋಚಿಸಬೇಕಿತ್ತು’ ಎಂದು ಹೇಳಿದರು.

ಚಾಟ್ ಪ್ರಕರಣ ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ.

ಪ್ರಕರಣವನ್ನು ಎಫ್‌ಎಸ್ಎಲ್ ಹಾಗೂ ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಿ ಪರಿಶೀಲಿಸಲಾಗುತ್ತದೆ. ಮುಂದಿನ 15 ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ವರದಿ ಬರುವವರೆಗೆ ಈ ವಿಚಾರವಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ತನಿಖೆಯಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದು ಬಹಿರಂಗವಾಗಲಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮಎದುರಿಸಬೇಕಾಗುತ್ತದೆ ಎಂದರು.

ಚಾಟ್‌ನಲ್ಲಿ ಹೆಸರು ಪ್ರಸ್ತಾಪವಾಗಿ ರುವ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ

ಶಶಿಕಿರಣ್ ಅವರೇ ಸ್ವಯಂಪ್ರೇರಿತ ರಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿ ತಮ್ಮ ಮೊಬೈಲ್ ಫೋನ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಭಾಷಣೆ ತಮ್ಮ ಫೋನ್‌‌ನಿಂದ ನಡೆದಿರುವುದು ಸಾಬೀತಾದರೆ ಕಾನೂನು ಪ್ರಕಾರ ಯಾವುದೇ ಶಿಕ್ಷೆ ಅನುಭವಿಸಲು ಸಿದ್ದ ಎಂದು ತಿಳಿಸಿದ್ದಾರೆ. ಹೀಗಿರುವಾಗ ಪ್ರಕರಣದ ಸಂಪೂರ್ಣ ತನಿಖೆಗೂ ಮುನ್ನವೇ ಅವರನ್ನು ಅಪರಾಧಿ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ಹೇಳಿದರು.

ಆರೋಪ ಬಿಟ್ಟು ಹಾಸನಕ್ಕೆ ಕೈಗಾರಿಕೆ ತನ್ನಿ: ಕೇಂದ್ರ ಕೈಗಾರಿಕಾ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಅರೋಪ-ಪ್ರತ್ಯಾರೋಪಗಳಲ್ಲಿ ತೊಡಗುವ ಬದಲು ಹಾಸನ ಜಿಲ್ಲೆಗೆ ಕೈಗಾ-ರಿಕೆಗಳನ್ನು ತರುವತ್ತ ಗಮನಹರಿಸಬೇಕು ಎಂದು ಶಿವಲಿಂಗೇಗೌಡ ಒತ್ತಾಯಿಸಿದರು.

‘ನೀವು ಕೇಂದ್ರ ಕೈಗಾರಿಕಾ ಸಚಿವ-ರಾಗಿದ್ದೀರಿ. ಹಾಸನಕ್ಕೆ ಒಂದೇ ಒಂದು ಕೈಗಾರಿಕೆಯನ್ನಾದರೂ ತನ್ನಿ. ఐటి ಕಂಪನಿಗಳನ್ನು ಆರಂಭಿಸಿ, ಯುವಕರಿಗೆ ಉದ್ಯೋಗ ಕಲ್ಪಿಸಿ. ಇಂತಹ ಅಭಿವೃದ್ಧಿ ಕಾರ್ಯಗಳಿಗೆ ನಾವು ಸ್ವಾಗತಿಸುತ್ತೇವೆ ಮತ್ತು ಸಹಕಾರ ನೀಡುತ್ತೇವೆ. ಆದರೆ, ಅಧಾರರಹಿತ ಆರೋಪಗಳ ಮೂಲಕ ವ್ಯಕ್ತಿಗಳ ಮಾನಹಾನಿ ಮಾಡುವ ಪ್ರವೃತ್ತಿ ನಿಲ್ಲಬೇಕು’ ಎಂದು ಹೇಳಿದರು.

ಸಂಸದ ಶ್ರೇಯಸ್ ಪಟೇಲ್ ಅವರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!