ಕನಕಪುರ. ತಾಲೂಕಿನ ಹೋಬಳಿಯ ರಾಮನಹಳ್ಳಿ ಸಮೀಪದ ಕರಿಕಲ್ ದೊಡ್ಡಿ ಪ್ರದೇಶದಲ್ಲಿ ಚಿರತೆ ದಾಳಿಗೆ ಎರಡು ಮೇಕೆಗಳು ಬಲಿಯಾಗಿದೆ ಮಂಗಳವಾರ ಬಾಣಂತ ಮಾರಮ್ಮ ಅರಣ್ಯ ಪ್ರದೇಶದ ಸಮೀಪದ ಈ ಘಟನೆ ನಡೆದಿದ್ದು. ರೈತನದ ಅನುಮಾನಾಯಕ ಮತ್ತು ಗೋವಿಂದ ನಾಯ್ಕ ಅವರಿಗೆ ಸೇರಿದ ಎರಡು ಮೇಕೆಗಳನ್ನು ಚಿರತೆ ಕೊಂದು ಹಾಕಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆ ದಾಳಿ ಹೆಚ್ಚಾಗಲು ಹೆಚ್ಚಾಗುತ್ತಿರುವುದರಿಂದ ರೈತರು ಆತಂಕಗೊಂಡಿದ್ದಾರೆ. ಜಾನುವಾರುಗಳನ್ನು ಮೇಯಿಸಲು ಕಾಡಂಚಿನ ಪ್ರದೇಶಗಳಿಗೆ ತೆರಳುವುದೇ ಅಪಾಯಕಾರಿಯಾಗಿದೆ ಚಿರತೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.


